ಡೆಲ್ಲಿಯ ಆರ್ಭಟದ ಮುಂದೆ ಹೋರಾಡಿ ತಲೆಬಾಗಿದ ಮುಂಬೈ

| Published : Apr 28 2024, 01:15 AM IST / Updated: Apr 28 2024, 04:18 AM IST

ಸಾರಾಂಶ

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 4 ವಿಕೆಟ್‌ಗೆ 257 ರನ್‌ ಕಲೆಹಾಕಿತು. ಮುಂಬೈ ಹೋರಾಟದ ಹೊರತಾಗಿಯೂ 9 ವಿಕೆಟ್‌ಗೆ 247 ರನ್‌ ಸಿಡಿಸಿ ಸೋಲೊಪ್ಪಿಕೊಂಡಿತು.

ನವದೆಹಲಿ: ರನ್‌ ಹೊಳೆಯೇ ಹರಿದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ನಡುವಿನ ಪಂದ್ಯದಲ್ಲಿ ಮುಂಬೈಗೆ 10 ರನ್‌ ಸೋಲು ಎದುರಾಗಿದೆ. ಡೆಲ್ಲಿ 10ರಲ್ಲಿ 5ನೇ ಗೆಲುವು ದಾಖಲಿಸಿದರೆ, ಮುಂಬೈ ತಂಡ 9 ಪಂದ್ಯಗಳಲ್ಲಿ 6ನೇ ಸೋಲನುಭವಿಸಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 4 ವಿಕೆಟ್‌ಗೆ 257 ರನ್‌ ಕಲೆಗಾಕಿತು. 15 ಎಸೆತದಲ್ಲೇ ಅರ್ಧಶತಕ ಪೂರ್ತಿಗೊಳಿಸಿದ ಜೇಕ್‌ ಫ್ರೇಸರ್‌, 27 ಎಸೆತಗಳಲ್ಲಿ 84 ರನ್‌ ಚಚ್ಚಿದರು.

ಬಳಿಕ ಟ್ರಿಸ್ಟನ್‌ ಸ್ಟಬ್ಸ್‌(25 ಎಸೆತಗಳಲ್ಲಿ ಔಟಾಗದೆ 48), ಶಾಯ್‌ ಹೋಪ್(17 ಎಸೆತದಲ್ಲಿ 41), ಅಭಿಷೇಕ್‌ ಪೊರೆಲ್‌(36), ನಾಯಕ ರಿಷಭ್‌ ಪಂತ್(29) ತಂಡವನ್ನು 250ರ ಗಡಿ ದಾಟಿಸಿದರು. ಬೃಹತ್‌ ಗುರಿ ಬೆನ್ನತ್ತಿದ ಮುಂಬೈ, ತಿಲಕ್‌ ವರ್ಮಾ(32 ಎಸೆತಗಳಲ್ಲಿ 63) ಹೋರಾಟದ ಹೊರತಾಗಿಯೂ 9 ವಿಕೆಟ್‌ಗೆ 247 ರನ್‌ ಸಿಡಿಸಿ ಸೋಲೊಪ್ಪಿಕೊಂಡಿತು. ಹಾರ್ದಿಕ್‌ ಪಾಂಡ್ಯ(24 ಎಸೆತದಲ್ಲಿ 46), ಟಿಮ್‌ ಡೇವಿಡ್‌(17 ಎಸೆತದಲ್ಲಿ 37) ಹೋರಾಟ ವ್ಯರ್ಥವಾಯಿತು. ಮುಕೇಶ್‌ ಕುಮಾರ್‌, ರಾಸಿಕ್‌ ಸಲಾಂ ತಲಾ 3 ವಿಕೆಟ್‌ ಕಿತ್ತರು.ಸ್ಕೋರ್‌: ಡೆಲ್ಲಿ 257/4 (ಜೇಕ್‌ ಫ್ರೇಸರ್‌ 84, ಸ್ಟಬ್ಸ್‌ 48, ನಬಿ 1-20), ಮುಂಬೈ 247/9 (ತಿಲಕ್‌ ವರ್ಮಾ 63, ಹಾರ್ದಿಕ್‌ ಪಾಂಡ್ಯ 46, ರಾಸಿಕ್‌ 3-34) ಪಂದ್ಯಶ್ರೇಷ್ಠ: ಜೇಕ್‌ ಫ್ರೇಸರ್‌