ಬೆಂಗ್ಳೂರಿನ ಮಕ್ಕಳಿಗೆ ಲೆಜೆಂಡರಿ ವೆಲೇರಿ ಆ್ಯಡಮ್ಸ್‌, ತೇಜಿಂದರ್‌ ಕಿರು ಶಿಬಿರ

| Published : Apr 28 2024, 01:15 AM IST / Updated: Apr 28 2024, 04:22 AM IST

ಬೆಂಗ್ಳೂರಿನ ಮಕ್ಕಳಿಗೆ ಲೆಜೆಂಡರಿ ವೆಲೇರಿ ಆ್ಯಡಮ್ಸ್‌, ತೇಜಿಂದರ್‌ ಕಿರು ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯೂಜಿಲೆಂಡ್‌ನ ವೆಲೇರಿ ಆ್ಯಡಮ್ಸ್‌ ವಿಶ್ವ 10ಕೆ ಮ್ಯಾರಥಾನ್‌ ಓಟದ ರಾಯಭಾರಿಯಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಶನಿವಾರ ಮಕ್ಕಳೊಂದಿಗೆ ತರಬೇತಿಯಲ್ಲಿ ಪಾಲ್ಗೊಂಡರು.

 ಬೆಂಗಳೂರು :  ಬೆಂಗಳೂರಿನ ಯುವ ಅಥ್ಲೀಟ್‌ಗಳು ಶನಿವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ವಿಶ್ವದ ದಿಗ್ಗಜ ಅಥ್ಲೀಟ್‌ಗಳ ಜೊತೆ ತರಬೇತಿಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದುಕೊಂಡರು.

ವಿಶ್ವ 10ಕೆ ಓಟದ ರಾಯಭಾರಿಯಾಗಿ ಬೆಂಗಳೂರಿಗೆ ಆಗಮಿಸಿರುವ 2 ಬಾರಿ ಒಲಿಂಪಿಕ್ಸ್‌, 4 ಬಾರಿ ವಿಶ್ವ ಚಾಂಪಿಯನ್‌ಶಿಪ್‌ ಚಿನ್ನದ ಪದಕ ವಿಜೇತ ಶಾಟ್‌ಪುಟ್‌ ಪಟು, ನ್ಯೂಜಿಲೆಂಡ್‌ನ ವೆಲೇರಿ ಆ್ಯಡಮ್ಸ್‌ ಹಾಗೂ 2 ಬಾರಿ ಏಷ್ಯನ್‌ ಗೇಮ್ಸ್‌, 2 ಬಾರಿ ಏಷ್ಯನ್‌ ಚಾಂಪಿಯನ್‌ಶಿಪ್‌ ಚಿನ್ನ ವಿಜೇತ, ಭಾರತದ ಶಾಟ್‌ಪುಟ್‌ ಪಟು ತೇಜಿಂದರ್‌ ಪಾಲ್‌ ತೂರ್‌ ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರಿನ ಯುವ ಅಥ್ಲೀಟ್‌ಗಳಿಗೆ ಕಿರು ಶಿಬಿರ ನಡೆಸಿದರು.

ಈ ವೇಳೆ ಇಬ್ಬರು ಕೂಡಾ ಮಕ್ಕಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿವಿಧ ರೀತಿಯ ಸಲಹೆಗಳನ್ನು ನೀಡಿದರು. ಮಕ್ಕಳು ಕೂಡಾ ಉತ್ಸಾಹದಿಂದ ತರಬೇತಿಯಲ್ಲಿ ಪಾಲ್ಗೊಂಡರು. 

ಥಾಮಸ್‌, ಊಬರ್‌ ಕಪ್‌: ಭಾರತ ಶುಭಾರಂಭ

ಚೆಂಗ್ಡು(ಚೀನಾ): ಥಾಮಸ್‌ ಕಪ್‌ ಹಾಗೂ ಊಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ ಭಾರತದ ಪುರುಷ, ಮಹಿಳಾ ತಂಡಗಳು ಶುಭಾರಂಭ ಮಾಡಿದೆ. ಪುರುಷರು ಥಾಯ್ಲೆಂಡ್‌ ವಿರುದ್ಧ, ಮಹಿಳೆಯರು ಕೆನಡಾ ವಿರುದ್ಧ ತಲಾ 4-1 ಅಂತರದಲ್ಲಿ ಜಯಗಳಿಸಿದರು. ಮಹಿಳೆಯರು ಭಾನುವಾರ ಸಿಂಗಾಪೂರ ವಿರುದ್ಧ, ಪುರುಷರು ಸೋಮವಾರ ಇಂಗ್ಲೆಂಡ್‌ ವಿರುದ್ಧ ಸೆಣಸಾಡಲಿದ್ದಾರೆ.