ಬೌಂಡರಿ ತಡೆಯಲು ಓಡಿದ ಬಾಂಗ್ಲಾದ 5 ಫೀಲ್ಡರ್ಸ್‌: ವೈರಲ್‌!

| Published : Apr 02 2024, 01:05 AM IST / Updated: Apr 02 2024, 04:11 AM IST

ಬೌಂಡರಿ ತಡೆಯಲು ಓಡಿದ ಬಾಂಗ್ಲಾದ 5 ಫೀಲ್ಡರ್ಸ್‌: ವೈರಲ್‌!
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಭಾತ್‌ರ ಬ್ಯಾಟ್‌ಗೆ ತಾಗಿದ ಚೆಂಡು ಬೌಂಡರಿ ಲೈನ್‌ ಕಡೆ ಸಾಗಿತ್ತು. ಇದನ್ನು ತಡೆಯಲು ಸ್ಲಿಪ್‌ನಲ್ಲಿದ್ದ ನಾಲ್ವರು ಸೇರಿ ಐವರು ಓಡಿದ್ದಾರೆ. ಈ ಬಗ್ಗೆ ಹಲವರು ವ್ಯಂಗ್ಯವಾಡಿದ್ದಾರೆ.

ಚಿತ್ತಗಾಂಗ್‌: ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್‌ ಪಂದ್ಯದ ವೇಳೆ ಬೌಂಡರಿ ತಡೆಯಲು ಬಾಂಗ್ಲಾದೇಶದ 5 ಫೀಲ್ಡರ್‌ಗಳು ಒಟ್ಟಾಗಿ ಓಡಿದ್ದು, ಇದರ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. 

ಲಂಕಾದ 2ನೇ ಇನ್ನಿಂಗ್ಸ್‌ ವೇಳೆ ಮಹ್ಮೂದ್‌ ಎಸೆತದಲ್ಲಿ ಪ್ರಭಾತ್‌ ಜಯಸೂರ್ಯ ಅವರ ಬ್ಯಾಟ್‌ಗೆ ತಾಗಿದ ಚೆಂಡು ಬೌಂಡರಿ ಲೈನ್‌ ಕಡೆ ಸಾಗಿತ್ತು. ಇದನ್ನು ತಡೆಯಲು ಸ್ಲಿಪ್‌ನಲ್ಲಿದ್ದ ನಾಲ್ವರು ಸೇರಿ ಐವರು ಓಡಿದ್ದಾರೆ. ಈ ಬಗ್ಗೆ ಹಲವರು ಸಾಮಾಜಿಕ ತಾಣಗಳಲ್ಲಿ ವ್ಯಂಗ್ಯವಾಡಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೀರಾಬಾಯಿ

ಫುಕೆಟ್‌ (ಥಾಯ್ಲೆಂಡ್‌): ಭಾರತದ ತಾರಾ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಸೋಮವಾರ ಮಹಿಳೆಯರ 49 ಕೆ.ಜಿ. ವಿಭಾಗದ ‘ಬಿ’ ಗುಂಪಿನಲ್ಲಿ ಚಾನು 3ನೇ ಸ್ಥಾನ ಪಡೆದರು. ಸ್ನ್ಯಾಚ್‌ನಲ್ಲಿ 81 ಕೆ.ಜಿ., ಕ್ಲೀನ್‌ ಅಂಡ್‌ ಜರ್ಕ್‌ನಲ್ಲಿ 103 ಕೆ.ಜಿ. ಸೇರಿ ಒಟ್ಟು 184 ಕೆ.ಜಿ. ಭಾರ ಎತ್ತಿದರು. ಒಲಿಂಪಿಕ್ಸ್‌ ಅರ್ಹತೆಗೆ ಚಾನು ಈ ವಿಶ್ವಕಪ್‌ನಲ್ಲಿ ಸ್ಪರ್ಧಿಸಿದರೆ ಸಾಕಾಗಿತ್ತು.