ಕೊಡವ ಹಾಕಿ: ನಾಳಿಯಂಡ, ಬಾದುಮಂಡ ತಂಡ ನಿರಾಯಾಸ ಗೆಲವು

| Published : Apr 02 2024, 01:03 AM IST / Updated: Apr 02 2024, 04:12 AM IST

ಸಾರಾಂಶ

ಕುಂಡ್ಯೋಳಂಡ ಕಪ್‌ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ವಿವಿಧ ತಂಡಗಳ ಮುನ್ನಡೆ. ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿ

ದುಗ್ಗಳ ಸದಾನಂದ

 ನಾಪೋಕ್ಲು: ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಸೋಮವಾರದ ಪಂದ್ಯಗಳಲ್ಲಿ ನಾಳಿಯಂಡ, ಬಾದುಮಂಡ , ಕೋಣಿಯಂಡ, ಕೋಲು ಮಾದಂಡ, ಐಚುಡ, ಪಾಲಂಗಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.

ಮೈದಾನ ಒಂದರಲ್ಲಿ ಪೂಲಂಡ ತಂಡದ ವಿರುದ್ಧ ನಾಳಿಯಂಡ ತಂಡ ಭರ್ಜರಿ ಗೆಲವು ಸಾಧಿಸಿತು. ನಾಳಿಯಂಡ ತಂಡ 5- 0 ಅಂತರದಿಂದ ಗೆಲವು ಸಾಧಿಸಿದರೆ ಬಾದುಮಂಡ ತಂಡವು ಚನ್ನಪಂಡ ತಂಡದ ವಿರುದ್ಧ 4-0 ಅಂತರದ ಜಯ ಗಳಿಸಿತು.ಕೋಣಿಯಂಡ ತಂಡವು ಮಂಡಿರ ತಂಡದ ವಿರುದ್ಧ 1-0 ಅಂತರದ ಗೆಲವು ಸಾಧಿಸಿದರೆ ಕೋಲು ಮಾಡಂಡ ತಂಡವು ಅಕ್ಕಪಂಡ ತಂಡದ ವಿರುದ್ಧ 1-0 ಅಂತರದ ಗೆಲವು ಸಾಧಿಸಿತು. 

ಕೋಲು ಮಾದಂಡ ತಂಡದ ಆಟಗಾರ ನಾಚಪ್ಪ ಒಂದು ಗೋಲು ಗಳಿಸಿದರು.ಮೈದಾನ ಎರಡರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಐಚುಡ ತಂಡ ಮುಕ್ಕಾಟಿರ (ಬೇತ್ರಿ) ತಂಡದ ವಿರುದ್ಧ 4-1 ಅಂತರದ ಗೆಲವು ಸಾಧಿಸಿತು. ಗಂಡಂಗಡ ಮತ್ತು ಮಚ್ಚುರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು.

ಪೆನಾಲ್ಟಿ ಶೂಟ್ ಔಟ್ ನಲ್ಲಿ ಮಚ್ಚುರ ತಂಡ 3 ಗೋಲು ಗಳಿಸಿದರೆ ಗಂಡಂಗಡ ತಂಡ 4 ಗೋಲು ಗಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು ಪಾಲೇಕಡ ತಂಡ ಮೇದುರ ತಂಡದ ವಿರುದ್ಧ1-0 ಅಂತರದ ಜಯ ಸಾಧಿಸಿದರೆ ಮೂಕಚಂಡ ತೆನ್ನಿರ ವಿರುದ್ಧ 3- 0 ಅಂತರದಿಂದ ಜಯ ಗಳಿಸಿತು.ಮೈದಾನ ಮೂರರಲ್ಲಿ ತಾಪಂಡ ಮತ್ತು ಚೋಕಿರ ತಂಡಗಳು ಸಮಬಲ ಸಾಧಿಸಿದವು. 

ಪೆನಾಲ್ಟಿ ಸ್ಟ್ರೋಕ್ ನಲ್ಲಿ ಚೋಕಿರ 3 ಗೋಲು ಗಳಿಸಿದರೆ, ತಾಪಂಡ ಎರಡು ಗೋಲು ಗಳಿಸಿತು. ಚೋಕಿರ ಮುಂದಿನ ಸುತ್ತು ಪ್ರವೇಶಿಸಿತು. ಮಾದೆಯಂಡ ವಿರುದ್ಧ ಕಾಳಿ ಮಾಡಬೊಟ್ಟಂಗಡತಂಡವು ಎರಡು ಗೋಲುಗಳಿಂದ ಗೆಲವು ಸಾಧಿಸಿತು. 3- 0 ಅಂತರದಿಂದ ಅಣ್ಣೀರ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಾಣಿರ ಕುಯಿಮಂಡ ವಿರುದ್ಧ ಒಂದು ಗೋಲು ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು.