ನಗರದಲ್ಲಿ ಶಾಂತಿಯುತ ಮತದಾನ: ಸ್ಟ್ರಾಂಗ್‌ ರೂಂನಲ್ಲಿ ಭದ್ರತಾ ವ್ಯವಸ್ಥೆ

| Published : Apr 28 2024, 01:17 AM IST / Updated: Apr 28 2024, 04:40 AM IST

ನಗರದಲ್ಲಿ ಶಾಂತಿಯುತ ಮತದಾನ: ಸ್ಟ್ರಾಂಗ್‌ ರೂಂನಲ್ಲಿ ಭದ್ರತಾ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ನಗರದಲ್ಲಿ ಶುಕ್ರವಾರ ನಡೆದ ಮತದಾನ ಯಾವುದೇ ಅಹಿತಕರ ಘಟನೆಗಳು ವರದಿಯಾಗದೆ ಶಾಂತಿಯುತವಾಗಿ ನಡೆದಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ.

  ಬೆಂಗಳೂರು :  ನಗರದಲ್ಲಿ ಶುಕ್ರವಾರ ನಡೆದ ಮತದಾನ ಯಾವುದೇ ಅಹಿತಕರ ಘಟನೆಗಳು ವರದಿಯಾಗದೆ ಶಾಂತಿಯುತವಾಗಿ ನಡೆದಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನದ ವೇಳೆ ಕೆಲವು ಕಡೆ ತಾಂತ್ರಿಕ ಲೋಷದೋಷಗಳು, ಮತಗಟ್ಟೆಗಳಲ್ಲಿ ಪೋಲಿಂಗ್‌ ಏಜೆಂಟ್‌ಗಳು ಮತ್ತು ಕಾರ್ಯಕರ್ತರ ನಡುವೆ ಸಣ್ಣಪುಟ್ಟ ವಾಗ್ವಾದಗಳನ್ನು ಹೊರತುಪಡಿಸಿ ನಗರದಲ್ಲಿ ಮತದಾನ ಅಹಿತಕರ ಘಟನಾ ರಹಿತವಾಗಿ ನಡೆದಿದೆ. ಸಾರ್ವಜನಿಕರು ಮುಕ್ತವಾಗಿ ನಿರ್ಭೀತಿಯಿಂದ ಸುಲಲಿತವಾಗಿ ಮತದಾನ ಮಾಡಿದ್ದಾರೆ ಎಂದರು.

ಇನ್ನು ಇವಿಎಂ ಮಷಿನ್‌ಗಳನ್ನು ಸಂಬಂಧಪಟ್ಟ ಸ್ಟ್ರಾಂಗ್‌ ರೂಮ್‌ಗಳಿಗೆ ತಲುಪಿಸಲಾಗಿದೆ. ಸ್ಟ್ರಾಂಗ್‌ ರೂಮ್‌ಗಳನ್ನು ಕೇಂದ್ರ ಮೀಸಲು ಪಡೆಗಳು, ಸ್ಥಳೀಯ ಪೊಲೀಸರು ಕಾಯುತ್ತಿದ್ದಾರೆ. ಜೂ.4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಹೇಳಿದರು.