ಮಾಜಿ ಶಾಸಕ ವೈ ಸಂಪಂಗಿ ವಿರುದ್ದ ಬಿಜೆಪಿ ಕಾರ್‍ಯಕರ್ತರು ಅಸಮಾಧಾನ

| Published : Apr 28 2024, 01:25 AM IST / Updated: Apr 28 2024, 04:34 AM IST

bjp flag

ಸಾರಾಂಶ

ಸಂಪಂಗಿ ವರ್ಚಸ್ಸುನ್ನು ಕಳೆದುಕೊಂಡಿದ್ದಾರೆ, ಮತ್ತೇ ಮತ್ತೆ ಬಿಜೆಪಿ ಪಕ್ಷದ ನಾಯಕತ್ವ ವಹಿಸಿದರೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಎಲ್ಲಿದೆ ಎಂದು ಹುಡಕಬೇಕಾದ ಪರಿಸ್ಥಿತಿ ಎದುರಾಗಲಿದೆ ಎನ್ನುತ್ತಾರೆ ಕಾರ್ಯಕರ್ತರು

  ಕೆಜಿಎಫ್ : ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ವೈ ಸಂಪಂಗಿ ವಿರುದ್ದ ನಿಷ್ಠಾವಂತ ಬಿಜೆಪಿ ಕಾರ್‍ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ೨೦೨೪ರ ಲೋಕಾಸಭಾ ಚುನಾವಣೆಯ ನಾಯಕತ್ವನ್ನು ಸಂಪಂಗಿರಿಗೆ ಕೊಡಬೇಡಿ, ಸಂಪಂಗಿ ಅವರು ತಮ್ಮ ವರ್ಚಸ್ಸುನ್ನು ಕಳೆದುಕೊಂಡಿದ್ದಾರೆ, ಮತ್ತೇ ಮತ್ತೆ ಬಿಜೆಪಿ ಪಕ್ಷದ ನಾಯಕತ್ವ ಸಂಪಂಗಿ ಕುಟುಂಬಕ್ಕೆ ಕೊಟ್ಟರೆ ಮುಂದಿನ ದಿನಗಳಲ್ಲಿ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಎಲ್ಲಿದೆ ಎಂದು ಹುಡಕಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಪಕ್ಷದ ಕಾರ್‍ಯಕರ್ತರು ರಾಜ್ಯಧ್ಯಕ್ಷರಾದ ವಿಜಯೇಂದ್ರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು,

ಪಕ್ಷದ ಉಸ್ತುವಾರಿ ಹೊಣೆ

ಆದರೂ ಲೋಕಾಸಭಾ ಪಕ್ಷದ ಉಸ್ತುವಾರಿ ಸಂಪಂಗಿ ಕಟುಂಬಕ್ಕೆ ಮಣೆ ಹಾಕಿದ ಹಿನ್ನಲೆಯಲ್ಲಿ ಬಹುತೇಕ ಬಿಜೆಪಿ ಕಾರ್‍ಯಕರ್ತರು ಚುನಾವಣೆಯ ಚಟುವಟಿಕೆಗಳಿಂದ ದೂರು ಉಳಿದಿದ್ದರಿಂದ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬುರಿಗೆ ಹಿನ್ನಡೆ ಉಂಟಾಗಿದೆ ಎಂದು ಸ್ವಾಭಿಮಾನ ಬಣದ ಮೋಹನ್ ಕೃಷ್ಣ ಅಸಮಾಧಾನ ಹೊರ ಹಾಕಿದ್ದಾರೆ.ಶುಕ್ರವಾರ ನಡೆದ ಲೋಕಸಭಾ ಕ್ಷೇತ್ರ ಚುನಾವಣೆ ವೇಳೆ ನಗರದ ೧೮ ವಾರ್ಡ್‌ಗಳ 60ಬೂತ್‌ಗಳಲ್ಲಿ ಬಿಜೆಪಿ ಬೂತ್ ಏಜೆಂಟರನ್ನೇ ನೇಮಿಸಿರಲಿಲ್ಲ.ಇದಕ್ಕೆ ಮಾಜಿ ಶಾಸಕರೇ ಕಾರಣ ಎಂದು ಕಾರ್ಯಕರ್ತರು ದೂರಿದ್ದಾರೆ. ೬೦ ಬೂತ್‌ಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಬರುವ ಸಾಧ್ಯತೆ ಇದೆ ಎಂದು ಬಿಜೆಪಿ ಕಾರ್‍ಯಕರ್ತರೇ ಹೇಳುತ್ತಿದ್ದಾರೆ.

ಚುನಾವಣೆ ಅಧಿಕಾರಿಗಳ ದಾಳಿಮಾಜಿ ಶಾಸಕ ವೈ.ಸಂಪಂಗಿ ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸಿದರೆ ಎಂಬ ಅನುಮಾನಕ್ಕೆ ಶುಕ್ರವಾರ ಸಂಜೆ ಬೇತಮಂಗಲದಲ್ಲಿ ತೆರಿಗೆ ಅಧಿಕಾರಿಗಳು ಹರಿ ಕಾಂಪ್ಲೆಕ್ಸ್‌ನಲ್ಲಿ ದಾಳಿ ಮಾಡಿ ೪೭.೫೬ ಲಕ್ಷ ರೂ.ಗಳನ್ನು ವಶಪಡಿಸಕೊಂಡು ವಿಚಾರಣೆ ಮಾಡಿದಾಗ ಕಾಂಪ್ಲೆಕ್ಸ್ ಮಾಲೀಕ ಹರಿ ಅವರು ಹಣ ಮಾಜಿ ಶಾಸಕ ವೈ.ಸಂಪಂಗಿ ಅವರ ಪುತ್ರ ಪ್ರವೀಣ್‌ರಿಗೆ ಸೇರಿದ ಹಣ ಇದಾಗಿದೆ ಎಂದು ಚುನಾವಣಾಧಿಕಾರಿ ಬಳಿ ತಿಳಿಸಿದ್ದಾರೆ ಎನ್ನಲಾಗಿದೆ. ಐಟಿ ಅಧಿಕಾರಿಗಳು ಮಾಜಿ ಶಾಸಕನ ಪುತ್ರ ಪ್ರವೀಣ್ ಹಾಗೂ ಅಂಗಡಿ ಮಾಲೀಕ ಹರಿ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.