ಅಕ್ರಮ ನಳಗಳ ಹಾವಳಿ: ಹೊಳೆಸಿರಿಗೆರೆಯಲ್ಲಿ ನೀರಿನ ಸಮಸ್ಯೆ

| Published : May 10 2024, 01:31 AM IST

ಅಕ್ರಮ ನಳಗಳ ಹಾವಳಿ: ಹೊಳೆಸಿರಿಗೆರೆಯಲ್ಲಿ ನೀರಿನ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಮಲೇಬೆನ್ನೂರು ಸಮೀಪದ ಹೊಳೆಸಿರಿಗೆರೆಯಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಕಾಡುತ್ತಿದೆ. ನೀರಿಗಾಗಿ ಪರಿತಪಿಸುತ್ತಿರುವ ಗ್ರಾಮಸ್ಥರು ಶುದ್ಧ ನೀರು ಘಟಕದ ರೈಜಿಂಗ್ ಪೈಪ್‌ನಿಂದ ಅಕ್ರಮವಾಗಿ ಎರಡೆರಡು ನಳಗಳನ್ನು ಹಾಕಿಕೊಂಡು ನೀರು ಪಡೆಯುತ್ತಿದ್ದಾರೆ.

- ನಾಲ್ಕು ದಿನಕ್ಕೊಮ್ಮೆ ನೀರು, ಬೋರ್‌ ನೀರಿನ ಬವಣೆ ನಿರಂತರ - - - ಕನ್ನಡಪ್ರಭ ವಾರ್ತೆ, ಮಲೇಬೆನ್ನೂರು

ಇಲ್ಲಿಗೆ ಸಮೀಪದ ಹೊಳೆಸಿರಿಗೆರೆಯಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಕಾಡುತ್ತಿದೆ. ನೀರಿಗಾಗಿ ಪರಿತಪಿಸುತ್ತಿರುವ ಗ್ರಾಮಸ್ಥರು ಶುದ್ಧ ನೀರು ಘಟಕದ ರೈಜಿಂಗ್ ಪೈಪ್‌ನಿಂದ ಅಕ್ರಮವಾಗಿ ಎರಡೆರಡು ನಳಗಳನ್ನು ಹಾಕಿಕೊಂಡು ನೀರು ಪಡೆಯುತ್ತಿದ್ದಾರೆ.

ಸಮರ್ಪಕ ಮಳೆಯಾಗದೇ ಭದ್ರಾ ನಾಲೆಗಳಲ್ಲಿ ನೀರಿಲ್ಲದೇ, ಬೋರ್‌ಗಳಲ್ಲಿ ಅಂತರ್ಜಲ ಕೆಳಮಟ್ಟಕ್ಕೆ ಹೋಗಿದೆ. ಜನತೆ ಬಟ್ಟೆ ತೊಳೆಯಲು, ಜಾನುವಾರುಗಳಿಗೆ ನೀರು ಕುಡಿಯಲು ತೀವ್ರ ತೊಂದರೆಯಾಗಿದೆ ಎಂದು ಜನತೆ ಅಹವಾಲು ತೋಡಿಕೊಂಡಿದ್ದಾರೆ.

ಗ್ರಾಪಂನ 1ನೇ ವಾರ್ಡ್‌ನ ಭೋವಿ ಕಾಲೋನಿಯಲ್ಲಿನ ಮಹಿಳೆಯರು ಬಟ್ಟೆ ತೊಳೆಯಲು ಇರುವ ಒಂದು ಬೋರ್‌ನ್ನು ಆಶ್ರಯಿಸಿದ್ದು, ಇಲ್ಲಿ 20ಕ್ಕೂ ಹೆಚ್ಚು ಮಹಿಳೆಯರು ಬಟ್ಟೆ ತೊಳೆಯುತ್ತಿದ್ದರೆ, ಉಳಿದ ಹಲವು ಸ್ತ್ರೀಯರು ಬೋರ್‌ನಿಂದ ನೀರು ಪಡೆಯುವುದು ಸಾಮಾನ್ಯ ಎಂಬಂತಾಗಿದೆ. ಕೆಲವರು ಬೋರ್ ಹೊಡೆದು ಸುಸ್ತಾಗಿ, ವಿಶ್ರಾಂತಿ ಪಡೆಯುವಂತಾಗುವುದು ನಿತ್ಯದ ಬವಣೆ.

ಚುನಾವಣಾ ಪೂರ್ವದಲ್ಲಿ ೧೫ ದಿನಗಳು ಟ್ಯಾಂಕರ್ ನೀರು ಪೂರೈಸಿದ್ದಾರೆ. ಗ್ರಾಮದಲ್ಲಿ ಮೂರು ಶುದ್ಧ ನೀರು ಘಟಕಗಳಿವೆ. ಈಗ ಕೊಳವೆಬಾವಿಯಲ್ಲಿ ಅಂತರ್ಜಲ ಕಡಿಮೆಯಾಗಿ ಕುಡಿಯುವ ನೀರಿಗೂ ಸಮಸ್ಯೆ ಆಗಿದೆ ಎಂಬುದು ವಾರ್ಡ್ ನಿವಾಸಿ ಹಾಲೇಶಪ್ಪ ದೂರು.

ಈ ಬಗ್ಗೆ ಪಿಡಿಒ ಜಯಕುಮಾರ್ ಪ್ರತಿಕ್ರಿಯಿಸಿ, ಎಲ್ಲೆಡೆ ಬರಗಾಲ ಆವರಿಸಿದೆ. ಮಳೆಯಿಲ್ಲದೇ ೧೯ ಬೋರ್‌ಗಳಲ್ಲಿ ಅಂತರ್ಜಲ ಬತ್ತಿಹೋಗಿದೆ. ಎರಡೂ ಬೋರ್‌ಗಳಲ್ಲಿ ಮಾತ್ರ ನೀರು ಲಭ್ಯವಾಗುತ್ತಿದೆ. ಬಹುಗ್ರಾಮ ಯೋಜನೆಯಲ್ಲಿ ಐದು ಲಕ್ಷ ವೆಚ್ಚದಲ್ಲಿ ನೀರು ಹರಿಸಿ ಸಮಸ್ಯೆ ನಿವಾರಣೆ ಮಾಡಲಾಗಿದೆ. ಒಂದು ವಾರ್ಡ್‌ನಲ್ಲಿ ಒಂದೊಂದು ದಿನ ನೀರು ಬಿಡಲಾಗಿದೆ. ಗ್ರಾಮದ ಕೆಲವರು ಶುದ್ಧ ನೀರು ಘಟಕದ ರೈಜಿಂಗ್ ಪೈಪ್‌ನಿಂದ ಅಕ್ರಮವಾಗಿ ಎರಡೆರಡು ನಳಗಳನ್ನು ಹಾಕಿಕೊಂಡು ಇಡೀ ಗ್ರಾಮಕ್ಕೆ ತೊಂದರೆ ಮಾಡಿದ್ದಾರೆ. ಆದರೂ ಗ್ರಾಮ ಪಂಚಾಯಿತಿಯಿಂದ 4 ದಿನಕ್ಕೊಮ್ಮೆ ಬಳಸಲು ನೀರು ಹರಿಸಲಾಗಿದೆ ಎಂದು ಉತ್ತರಿಸಿದ್ದಾರೆ.

- - - -ಚಿತ್ರ-೨:

ಭೋವಿ ಕಾಲೋನಿಯ ಬೋರ್‌ವೆಲ್‌ ಬಳಿ ಮಹಿಳೆಯರು.