ವಕೀಲ ವೃತ್ತಿ ಬಗ್ಗೆ ಅಗಾಧ ಗೌರವವಿದೆ: ಸಚಿವ ಮಧು ಬಂಗಾರಪ್ಪ

| Published : Apr 27 2024, 01:22 AM IST

ವಕೀಲ ವೃತ್ತಿ ಬಗ್ಗೆ ಅಗಾಧ ಗೌರವವಿದೆ: ಸಚಿವ ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಗೀತಾ ಶಿಪರ ಮತಯಾಚನೆ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಕೀಲರಾಗಿದ್ದ ತಂದೆ ಬಂಗಾರಪ್ಪ ಅವರು ಜನ ಸಾಮಾನ್ಯರ ಸೇವೆ ಮಾಡಲು ರಾಜಕೀಯದಲ್ಲಿ ತೊಡಗಿಸಿಕೊಂಡರು. ಆದ್ದರಿಂದ, ನನಗೆ ವಕೀಲ ವೃತ್ತಿ ಬಗ್ಗೆ ಅಗಾಧವಾದ ಗೌರವವಿದೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.

ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗೀತಾ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದ ಅವರು, ದಿ.ಎಸ್‌.ಬಂಗಾರಪ್ಪ ಅವರು ಸೈಕಲ್ ಏರಿ ವಕೀಲ ಕಚೇರಿಗೆ ಓಡಾಡುತ್ತಿದ್ದರು. ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿ ಆಗಿ ಜನರಿಗೆ ಸೇವೆ ಸಲ್ಲಿಸುವ ಮೂಲಕ ದಾರಿ ದೀಪವಾದರು ಎಂದು ತಿಳಿಸಿದರು.

ತಂದೆ ಹಾದಿಯಲ್ಲಿ ಸಾಗಲು ಗೀತಾಕ್ಕ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದ್ದರಿಂದ, ನೀವೇ ಬಂಗಾರಪ್ಪ ಎಂದು ಭಾವಿಸಿ ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಾತನಾಡಿ, ದುರ್ಬಲ ಹಾಗೂ ಹಿಂದುಳಿದವರ ಪರ ಹಲವು ಯೋಜನೆ ಜಾರಿಗೆ ತಂದ ಕೀರ್ತಿ ಮಾಜಿ ಸಿಎಂ ದಿ.ಎಸ್. ಬಂಗಾರಪ್ಪರಿಗೆ ಸಲ್ಲುತ್ತದೆ. ಅದೇ, ಹಾದಿಯಲ್ಲಿ ಸಾಗಲು ನನಗೆ ಅವಕಾಶ ಕಲ್ಪಿಸಿಕೊಡಿ ಎಂದು ಕೋರಿದರು.

ಈ ವೇಳೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಸೇರಿ ವಕೀಲ ಸಂಘದ ಪದಾಧಿಕಾರಿಗಳು ಇದ್ದರು.

ಬಳಿಕ ಗೀತಾ ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಶಾಹಿ ಎಕ್ಸ್ ಪರ್ಟ್ ಪ್ರೈವೇಟ್ ಲಿಮಿಟೆಡ್ (ಶಾಹಿ ಗ್ರಾಮೆರ್ಂಟ್ಸ್) ಗೆ ಭೇಟಿ ನೀಡಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಪಿಎಲ್ ಡಿ ಬ್ಯಾಂಕ್ ವಿಜಯ್ ಕುಮಾರ್ ಸಂತೇಕಡೂರು, ಭೋವಿ ನಿಗಮ ಅಧ್ಯಕ್ಷ ರವಿಕುಮಾರ್ ಇದ್ದರು.

ಗೋಪಾಲಗೌಡ ಬಡಾವಣೆಯಲ್ಲಿ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್‍ರವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಗೀತಾಗೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಜಿ.ಡಿ.ಮಂಜುನಾಥ್, ಆರ್.ರಾಜಶೇಖರ್, ಎಸ್.ಟಿ.ಚಂದ್ರಶೇಖರ್, ಮಂಜುನಾಥ ಬಾಬು, ಶಶಿಧರ್, ತಾನಾಜಿ, ರುದ್ರಪ್ಪ, ಎಂ.ಪಿ.ಎಂ.ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.