ಸೇಂಟ್ ಮೇರಿಸ್ ಶಾಲೆ: ಶೇ. 100 ರಷ್ಟು ಫಲಿತಾಂಶ

| Published : May 10 2024, 01:30 AM IST / Updated: May 10 2024, 01:31 AM IST

ಸಾರಾಂಶ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ನಗರದ ಸೈಂಟ್ ಮೇರಿಸ್ ಶಾಲೆಯ ಎಚ್‌.ವೈ. ನಮ್ರತಾ ಅವರು 625ಕ್ಕೆ 619 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ನಗರದ ಸೈಂಟ್ ಮೇರಿಸ್ ಶಾಲೆಯ ಎಚ್‌.ವೈ. ನಮ್ರತಾ ಅವರು 625ಕ್ಕೆ 619 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಸಿ.ಆರ್‌. ಚಿರಾಗ್ ನಾಯ್ಡು 616, ಜಾನಿತ ಅಭಿವ್ಯಕ್ತ ಹಾಗೂ ಕೆ.ಜಿ. ನಿರಾಲಿ ವಿದ್ಯಾರ್ಥಿನಿಯರು 613 ಅಂಕಗಳನ್ನು ಗಳಿಸಿದ್ದಾರೆ. ಈ ಶಾಲೆಯು ಶೇಕಡ ನೂರಕ್ಕೆ ನೂರು ಫಲಿತಾಂಶ ಪಡೆದಿದ್ದು, 116 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 63 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲಾ ಸಂಸ್ಥಾಪಕ ಜೆರಾಲ್ಡ್ ಲೋಬೋ ಹಾಗೂ ಸಹ ಸಂಸ್ಥಾಪಕ ಗ್ರೆಗೋರಿ ವಿನೋದ್ ಲೋಬೋ, ಸಂಸ್ಥೆಯ ಶೈಕ್ಷಣಿಕ ನಿರ್ದೇಶರಾದ ಮರಿಯ ಪ್ರಮೀಳ ಡಿಸೋಜ ಹಾಗೂ ಮುಖ್ಯ ಶಿಕ್ಷಕರು, ಸಹ ಶಿಕ್ಷಕ ವೃಂದದವರು ಮತ್ತು ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.ಪೋಟೋ ಫೈಲ್‌ ನೇಮ್‌ 9 ಕೆಸಿಕೆಎಂ 7ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಚಿಕ್ಕಮಗಳೂರಿನ ಸೈಂಟ್ ಮೇರಿಸ್ ಶಾಲೆಯ ಸಂಸ್ಥಾಪಕರು ಹಾಗೂ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರು ಅಭಿನಂದನೆ ಸಲ್ಲಿಸಿದರು.