ದತ್ತಗಿರಿ ಶಾಲೆ ವಿದ್ಯಾರ್ಥಿಗಳ ಸಾಧನೆ

| Published : May 10 2024, 01:30 AM IST / Updated: May 10 2024, 01:31 AM IST

ಸಾರಾಂಶ

ಬಸವನಗರ ಕಾಲೋನಿಯ ದತ್ತಗಿರಿ ಮಹಾರಾಜ ಆಂಗ್ಲ ಮಾಧ್ಯಮ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಬೀದರ್‌: ಇಲ್ಲಿಯ ಬಸವನಗರ ಕಾಲೋನಿಯ ದತ್ತಗಿರಿ ಮಹಾರಾಜ ಆಂಗ್ಲ ಮಾಧ್ಯಮ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 3 ವಿದ್ಯಾರ್ಥಿಗಳು ಅಗ್ರಶ್ರೇಣಿ, 19 ಪ್ರಥಮ ದರ್ಜೆ ಹಾಗೂ 20 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಗೆ ಶೇ. 85ರಷ್ಟು ಫಲಿತಾಂಶ ದೊರಕಿದೆ.

ಓಂಸಾಯಿ ವಿನೋದಕುಮಾರ ಶೇ. 90.72, ಅಭಿಲಾಷ ತುಳಜಾರಾಮ ಶೇ. 89.6, ವೀರೇಶ ಬಸವರಾಜ ಶೇ. 87.04, ಸಂಗೀತಾ ನಾಗನಾಥ ಶೇ. 84.96ರಷ್ಟು ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ಉತ್ತಮ ಶೈಕ್ಷಣಿಕ ವಾತಾವರಣ, ಆಡಳಿತ ಮಂಡಳಿ, ಶಿಕ್ಷಕರ ಮಾರ್ಗದರ್ಶನ, ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ಶಾಲೆಗೆ ಉತ್ತಮ ಫಲಿತಾಂಶ ಲಭಿಸಿದೆ ಎಂದು ಆಡಳಿತ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅವಧೂತಗಿರಿ ಮಹಾರಾಜ, ಉಪಾಧ್ಯಕ್ಷ ಮಲ್ಲಿಕಾರ್ಜುನ ಹತ್ತಿ, ಕಾರ್ಯದರ್ಶಿ ಶಿವರಾಜ ಪಾಟೀಲ್‌, ಜಂಟಿ ಕಾರ್ಯದರ್ಶಿ ರಮೇಶ ಜಿ. ದುಕಾನದಾರ್‌, ಖಜಾಂಚಿ ಪ್ರಭಾಕರ ಮೈಲಾಪುರೆ, ಸದಸ್ಯರಾದ ಶಾಂತಾಬಾಯಿ ಯರಮಲ್ಲಿ, ರವಿ ಮಲಸಾ, ಬಸವರಾಜ ದೇಗಲಮಡಿ ಹಾಗೂ ಪ್ರಾಚಾರ್ಯೆ ಮಹಾದೇವಿ ಬೀದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.