ಎಸ್ಸೆಸ್ಸೆಲ್ಸಿ: ಎಕ್ಸಲೆಂಟ್‌ನ ಆದಿತ್ಯ ಆರ್. ಪುಣಚಿತ್ತಾಯ ರಾಜ್ಯಕ್ಕೆ ಆರನೇ ಸ್ಥಾನ

| Published : May 10 2024, 01:30 AM IST

ಎಸ್ಸೆಸ್ಸೆಲ್ಸಿ: ಎಕ್ಸಲೆಂಟ್‌ನ ಆದಿತ್ಯ ಆರ್. ಪುಣಚಿತ್ತಾಯ ರಾಜ್ಯಕ್ಕೆ ಆರನೇ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ, ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ಈ ಸಾಧನೆಗೆ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್ ಹಾಗೂ ಶೈಕ್ಷಣಿಕ ನಿರ್ದೇಶಕ ಪುಷ್ಪರಾಜ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಮೂಡುಬಿದಿರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ.೧೦೦ ಫಲಿತಾಂಶವನ್ನು ದಾಖಲಿಸಿದ್ದು, ಶಾಲೆಯ ಆದಿತ್ಯ ಆರ್. ಪುಣಚಿತ್ತಾಯ ೬೨೦ ಅಂಕ ಗಳಿಸಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಾರೆ. ಭಾರ್ಗವ ಭಟ್ (೬೧೪) ಪೂರ್ಣಚಂದ್ರ ವಿ. (೬೧೪), ಪೂರ್ವಿಕ್ (೬೦೭), ತುಷಾರ್ (೬೦೭), ಅಭಿಷೇಕ್ ಎಂ.ಸಿ. (೬೦೫), ಹಿಮಧ್ವನಿ (೬೦೧), ಕರಾಂಶು (೬೦೧), ಕೃತಿಕಾ ಕಾಮತ್ (೬೦೦), ಪವನ್ ಕಲ್ಯಾಣ್ (೬೦೧) ಅಂಕವನ್ನು ಗಳಿಸಿದ್ದಾರೆ.

ಹಾಜರಾದ ೧೬೧ ವಿದ್ಯಾರ್ಥಿಗಳಲ್ಲಿ ೧೦೫ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅಮೋಘ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳ, ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ಈ ಸಾಧನೆಗೆ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್ ಹಾಗೂ ಶೈಕ್ಷಣಿಕ ನಿರ್ದೇಶಕ ಪುಷ್ಪರಾಜ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಆದಿತ್ಯ ಆರ್. ಪುಣಚಿತ್ತಾಯ ರಾಜ್ಯಕ್ಕೆ ಆರನೇ ಸ್ಥಾನ: ವಿದ್ಯಾರ್ಥಿ ಆದಿತ್ಯ ಆರ್. ಪುಣಚಿತ್ತಾಯ ೬೨೦ ಅಂಕಗಳನ್ನು ಪಡೆಯುವುದರೊಂದಿಗೆ ರಾಜ್ಯಕ್ಕೆ ಆರನೇ ಸ್ಥಾನ ಗಳಿಸುವುದರೊಂದಿಗೆ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. ಪ್ರಥಮ ಭಾಷೆ ಇಂಗ್ಲೀಷ್ (೧೨೫), ದ್ವಿತೀಯಾ ಭಾಷೆ ಕನ್ನಡ (೧೦೦), ತೃತಿಯ ಭಾಷೆ ಸಂಸ್ಕೃತದಲ್ಲಿ (೧೦೦), ಗಣಿತ (೯೯), ವಿಜ್ಞಾನ (೧೦೦) ಹಾಗೂ ಸಮಾಜ ವಿಜ್ಞಾನದಲ್ಲಿ (೯೬) ವಿಷಯವಾರು ಅಂಕಗಳನ್ನು ಪಡೆದಿದ್ದಾರೆ.

ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಗೆ ಶೇ.೧೦೦ ಫಲಿತಾಂಶಮೂಡುಬಿದಿರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರೋಟರಿ ಎಜುಕೇಶನ್ ಸೊಸೈಟಿಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯು ಶೇ.೧೦೦ ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಎಲ್ಲ ೧೧೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ೪೧ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ೬೭ ಪ್ರಥಮ ದರ್ಜೆ, ಮೂವರು ದ್ವಿತೀಯ ದರ್ಜೆ ಹಾಗೂ ಒರ್ವ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಸಂಚಿತಾ ಎಸ್. ಸುವರ್ಣ ೬೧೩ (ಶೇ.೯೮.೦೮) ಅಂಕಗಳನ್ನು ಪಡೆದು ಶಾಲೆ ಪ್ರಥಮ ಸ್ಥಾನಿಯಾಗಿದ್ದಾಳೆ. ಸಾನಿಧ್ಯ ಡಿ. ೬೦೬ (ಶೇ.೯೬.೯೬), ಚಿನ್ಮಯಿ ಶೆಣೈ ೬೦೫ (ಶೇ.೯೬.೮೦) ಕ್ರಮಗವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಹಾಗೂ ಶ್ರದ್ಧಾ ೬೦೩ (ಶೇ.೯೬.೪೮) ನಾಲ್ಕನೇ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು, ಶಿಕ್ಷಕ ವೃಂದದವರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಪಿ.ಎಂ., ಕಾರ್ಯದರ್ಶಿ ಅನಂತಕೃಷ್ಣ ರಾವ್, ಸಂಚಾಲಕ ಪ್ರವೀಣ್‌ಚಂದ್ರ ಜೈನ್ ಅಭಿನಂದಿಸಿದ್ದಾರೆ.