ಎಸ್‌ಎಸ್ಎ್ಲಲ್‌ಸಿ: ಧಾರವಾಡ ಜಿಲ್ಲೆಗೆ ಮೂವರು ಬಾಲಕಿಯರು ಟಾಪರ್‌

| Published : May 10 2024, 01:35 AM IST

ಎಸ್‌ಎಸ್ಎ್ಲಲ್‌ಸಿ: ಧಾರವಾಡ ಜಿಲ್ಲೆಗೆ ಮೂವರು ಬಾಲಕಿಯರು ಟಾಪರ್‌
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಎಲ್ಲ ಮೊದಲ ಮೂರು ಸ್ಥಾನಗಳನ್ನು ಬಾಲಕಿಯರೇ ಹಂಚಿಕೊಂಡಿರುವುದು ಈ ಬಾರಿಯ ವಿಶೇಷ.

ಧಾರವಾಡ:

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಎಲ್ಲ ಮೊದಲ ಮೂರು ಸ್ಥಾನಗಳನ್ನು ಬಾಲಕಿಯರೇ ಹಂಚಿಕೊಂಡಿರುವುದು ಈ ಬಾರಿಯ ವಿಶೇಷ.

ಧಾರವಾಡದ ಪ್ರಜೆಂಟೇಶನ್‌ ಬಾಲಕಿಯರ ಪ್ರೌಢಶಾಲೆಯ ಅನುಷಾ ಸುರೇಶ ನುಗ್ಗಿಕೇರಿ ಹಾಗೂ ಪಲ್ಲವಿ ಸುಭಾಸ ಸುಣಗಾರ 618 (ಶೇ.98.88), ಹುಬ್ಬಳ್ಳಿಯ ಕೆಎಲ್‌ಇ ಸಾಕರೆ ಇಂಗ್ಲಿಷ್‌ ಮಾಧ್ಯಮ ಶಾಲೆಯ ಕೃತಿಕಾ ಎಚ್‌.ಬಿ. ಸಹ 618 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರದ ಫಾತಿಮಾ ಡೇ ಹೈಸ್ಕೂಲ್‌ನ ಸಹನಾ ಹಾಗೂ ಹುಬ್ಬಳ್ಳಿಯ ಅಕ್ಷಯ ಕಾಲನಿಯ ಚೇತನ ಪಬ್ಲಿಕ್ ಶಾಲೆಯ ಕ್ಷಮಾ ಜವಾಲಕರ 617 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಇನ್ನು, 616 ಅಂಕ ಪಡೆದು ನಾಲ್ವರು ತೃತೀಯ ಸ್ಥಾನ ಹಂಚಿಕೊಂಡಿದ್ದು, ಧಾರವಾಡದ ಜೆಎಸ್ಸೆಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯ ಭುವನೇಶ್ವರಿ ಬೇವಿನಕಟ್ಟಿ, ಹುಬ್ಬಳ್ಳಿಯ ಓರಿಯಂಟಲ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯ ಬುಷರಾ ಫಾತಿಮಾ, ನಿರ್ಮಲಾ ಠಕ್ಕರ್‌ ಶಾಲೆಯ ಪ್ರಿಯಾಂಕಾ ಸಂಗನಾಳ ಹಾಗೂ ಜೋಶಿ ರೋಟರಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಶ್ರೇಯಾ ಪ್ರಭು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ತಮ್ಮ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿರುವ ಪ್ರಜೆಂಟೇಶನ್ ಬಾಲಕಿಯರ ಶಾಲೆಯ ಉಪ ಪ್ರಾಚಾರ್ಯ ಎನ್‌.ಎನ್. ಭಟ್‌, ಇಬ್ಬರೂ ವಿದ್ಯಾರ್ಥಿಗಳು ಮೊದಲಿನಿಂದಲೂ ಜಾಣರಿದ್ದರು. ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನವನ್ನು ಚಾಚೂ ತಪ್ಪದೇ ಪಾಲಿಸಿದ ಫಲವಾಗಿ ಜಿಲ್ಲೆಗೆ ಪ್ರಥಮ ಸ್ಥಾನ ಪೆಡದಿದ್ದಾರೆ ಎಂದರು. ವೈದ್ಯಳಾಗುವೆ

ಪರೀಕ್ಷೆ ಬರೆದ ನಂತರ ಉತ್ತಮ ಅಂಕ ಬರಲಿವೆ ಎಂಬ ನಿರೀಕ್ಷೆ ಇತ್ತು. ಆದರೆ, ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಪಾಸಾಗಿತ್ತೇನೆಂದು ಗೊತ್ತಿರಲಿಲ್ಲ. ಇಂಗ್ಲಿಷ್‌ಗೆ 124, ಕನ್ನಡಕ್ಕೆ 99, ಹಿಂದಿ ಮತ್ತು ಸಮಾಜ ವಿಜ್ಞಾನಕ್ಕೆ 100, ಗಣಿತಕ್ಕೆ 98 ಹಾಗೂ ವಿಜ್ಞಾನಕ್ಕೆ 97 ಅಂಕ ಬಂದಿವೆ. ಶಾಲಾ ಶಿಕ್ಷಕರ ಮಾರ್ಗದರ್ಶನ ಹಾಗೂ ಪಾಲಕರ ಪ್ರೋತ್ಸಾಹವೇ ಈ ಅಂಕ ಪಡೆಯಲು ಸಾಧ್ಯವಾಗಿದ್ದು, ಪಿಯುಸಿಯಲ್ಲಿ ವಿಜ್ಞಾನ ಕಲಿತು ವೈದ್ಯಳಾಗುವ ಕನಿಸಿದೆ ಎಂದು ಅನುಷಾ ನುಗ್ಗಿಕೇರಿ ಹೇಳಿದರು.

ಐಐಟಿ ಮಾಡುವೆ:

ಮೊದಲಿನಿಂದಲೂ ಓದಿನಲ್ಲಿ ಆಸಕ್ತಿ ಇತ್ತು. ಪರೀಕ್ಷೆ ಸಮಯದಲ್ಲಿ ತುಸು ಹೆಚ್ಚಿನ ಅಭ್ಯಾಸ ಮಾಡಿದೆ. ಮನೆಯಲ್ಲಿ ತಂದೆ-ತಾಯಿ ಪ್ರೋತ್ಸಾಹ ಹಾಗೂ ಶಾಲೆಯಲ್ಲಿ ಶಿಕ್ಷಕರ ಉತ್ತಮ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಪಿಯುಸಿ ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿ ಐಐಟಿ ಮಾಡುವ ಇಚ್ಛೆ ಇದೆ ಎಂದು ಪಲ್ಲವಿ ಸುಣಗಾರ ತಿಳಿಸಿದರು.