ಮಾಗಡಿ ವಾಸವಿ ಶಾಲೆಯ ಮೂವರು ಜಿಲ್ಲೆಯ ಟಾಪರ್ಸ್‌

| Published : May 10 2024, 01:35 AM IST

ಸಾರಾಂಶ

ಮಾಗಡಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಮನಗರ ಜಿಲ್ಲೆಯಲ್ಲಿ ಮಾಗಡಿಗೆ ಪ್ರಥಮ ಸ್ಥಾನ ಸಿಕ್ಕಿದೆ. ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶ ಕುಸಿದಿದ್ದರೂ ಶೇ.80.36 ಫಲಿತಾಂಶ ಪಡೆದು ಮೊದಲ ಸ್ಥಾನ ದಕ್ಕಿಸಿಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಒಟ್ಟು ಈ ಬಾರಿ ಪರೀಕ್ಷೆಗೆ 2506 ವಿದ್ಯಾರ್ಥಿಗಳು ಹಾಜರಾಗಿದ್ದು 2014 ತೇರ್ಗಡೆ ಹೊಂದಿದ್ದಾರೆ. ಶೇ.80.36 ಫಲಿತಾಂಶ ಬಂದಿದ್ದು ಶೇ.100 ಫಲಿತಾಂಶ ಬಂದ ಪ್ರೌಢಶಾಲೆಗಳು 14, ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಬಂದ ಮೂವರು ಮಾಗಡಿಯ ವಾಸವಿ ಪ್ರೌಢಶಾಲೆಯ ಗಿರೀಶ್ 618(ಶೇ.98.88), ಜಿಲ್ಲೆಗೆ ಮೊದಲಿಗನಾಗಿದ್ದರೆ, ತಾಲೂಕಿನ ದೋಣುಕುಪ್ಪೆಯ ಸಿಎನ್‌ಎಸ್‌ ಶಾಲೆಯ ಹರ್ಷಿತ ಡಿ.ಎಸ್. 616(ಶೇ.98.56) ಪಡೆದು ದ್ವಿತೀಯ ಸ್ಥಾನಗಳಿಸಿದ್ದು, ವಾಸವಿ ಶಾಲೆಯ ಹಿತೈಷಿ ಎಂ.ಆರ್.615(ಶೇ.98.84) ಪಡೆದು ತೃತೀಯ ಪಡೆದಿದ್ದಾರೆ.

ವಾಸವಿ ಶಾಲೆಗೆ ಶೇ.100 ಫಲಿತಾಂಶ: ಸತತವಾಗಿ ಶೇ.100 ಫಲಿತಾಂಶ ಪಡೆಯುತ್ತಿರುವ ವಾಸವಿ ಶಾಲೆಯಲ್ಲಿ ಈ ಬಾರಿ 81 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅತ್ಯುತ್ತಮ ಶ್ರೇಣಿಯಲ್ಲಿ 50 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 29 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಅಭಿನಂದಿಸಿದೆ. ಪೋಟೋ 9ಮಾಗಡಿ3: ರಾಮನಗರ ಜಿಲ್ಲೆಯ ಟಾಪರ್ಸ್‌..