ದಲಿತರಿಗೆ ಆಶಾಕಿರಣವಾಗಿದ್ದ ಶ್ರೀನಿವಾಸ್‌ ಪ್ರಸಾದ್‌

| Published : May 10 2024, 01:35 AM IST

ದಲಿತರಿಗೆ ಆಶಾಕಿರಣವಾಗಿದ್ದ ಶ್ರೀನಿವಾಸ್‌ ಪ್ರಸಾದ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿ.ಶ್ರೀನಿವಾಸ್ ಪ್ರಸಾದ್ ಸಂಸ್ಮರಣೆ ಕಾರ್ಯಕ್ರಮ

ಚಾಮರಾಜನಗರ: ರಾಜ್ಯದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ಬದುಕಿನ ಹೆಚ್ಚುಕಾಲ ರಾಜಕೀಯದಲ್ಲಿಯೇ ಕಳೆದರು, ಅವರು ಹೋರಾಟದ ಮೂಲಕ ದಲಿತರಿಗೆ ಆಶಾಕಿರಣವಾಗಿದ್ದರು ಎಂದು ಪದವಿಪೂರ್ವ ಇಲಾಖೆ ಉಪ ನಿರ್ದೇಶಕ ಮಂಜುನಾಥ ಪ್ರಸನ್ನ ತಿಳಿಸಿದರು. ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಶ್ರೀನಿವಾಸ್ ಪ್ರಸಾದ್ ಬದುಕು ಉತ್ತವಾಗಿತ್ತು ಕೇಂದ್ರ, ಹಾಗೂ ರಾಜ್ಯದ ಮಂತ್ರಿಗಳಾಗಿ ಉತ್ತಮ ಸೇವೆಗಳನ್ನು ನೀಡಿದ್ದಾರೆ ಅವರು ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.ಎಸ್ಸಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಕೃಷ್ಣ ಕುಮಾರ್ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಮೈಸೂರು, ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡರಾಗಿದ್ದರು. ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದರು. ಮೂಲತಃ ಮೈಸೂರಿನ ಅಶೋಕಪುರಂನವರಾದ ಶ್ರೀನಿವಾಸಪ್ರಸಾದ್ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ 6 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ನುಡಿ,ನಮನ ಕಾಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ನಂಜುಂಡಸ್ವಾಮಿ, ಖಜಾಂಚಿ ಪುಟ್ಟಸ್ವಾಮಿ, ಶಿವಮೂರ್ತಿ, ಕೃಷ್ಣಮೂರ್ತಿ, ಶಂಕರಪ್ಪ, ಈಶ್ವರ, ನಟರಾಜು, ಎಂ.ಡಿ.ಮಹದೇವಯ್ಯ,ನಂಜರಾಜು, ಶಂಕರ್, ಸಿದ್ದರಾಜು, ಬಾಬು, ಜಯರಾಮು, ನಂದಿನಿ, ಮಹದೇವಸ್ವಾಮಿ, ಶ್ರೀಧರ್, ನಂದೀಶ, ಜಯಶ್ರೀ, ಪುಟ್ಟಗೋಪಮ್ಮ ಹಾಗೂ ಎಲ್ಲಾ ತಾಲೂಕಿನ ಅಧ್ಯಕ್ಷರು ಕಾರ್ಯದರ್ಶಿಗಳು ಭಾಗವಹಿಸಿದ್ದರು.