ಎಸ್‌ಎಸ್‌ಎಲ್‌ಸಿ ಫಲಿತಾಂಶ: ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ

| Published : May 10 2024, 01:39 AM IST

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ಜಿಲ್ಲೆಗೆ ದೇವದುರ್ಗ ತಾಲೂಕು ಶೇ.78.98 ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದೆ.

ಕನ್ನಡಪ್ರಭ ವಾರ್ತೆ ದೇವದುರ್ಗ

ತಾಲೂಕಿನ ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ ಪ್ರಕಟಗೊಂಡಿದ್ದು, ಕಳೆದ ವರ್ಷದಂತೆ ಈ ವರ್ಷವೂ ಕೂಡ ಇಡೀ ರಾಯಚೂರು ಜಿಲ್ಲೆಗೆ ದೇವದುರ್ಗ ತಾಲೂಕು ಶೇ.78.98 ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದೆ. ಒಟ್ಟು 1984 ಗಂಡು ಮಕ್ಕಳಲ್ಲಿ 1450, 2108 ಹೆಣ್ಣು ಮಕ್ಕಳಲ್ಲಿ 1782 ಉತ್ತೀರ್ಣರಾಗಿ ಎಂದಿನಂತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಎಂದು ಬಿಇಒ ಎಚ್.ಸುಖದೇವ್ ತಿಳಿಸಿದ್ದಾರೆ.

ಜಾಲಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರಾಮನಗೌಡ ತಂದೆ ಬಾಲಪ್ಪ ಮತ್ತು ಮಲ್ಲಿಕಾರ್ಜುನ ತಂದೆ ಗುಡದಯ್ಯ ಕ್ರಮವಾಗಿ 625 ಅಂಕಗಳಿಗೆ 617 ( ಶೇ.98.72) ಮತ್ತು 616 (98.56) ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ. ದೇವದುರ್ಗ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಕುಮಾರಿ ಸನಾ ತಂದೆ ಹುಸೇನಭಾಷ 607 (ಶೇ.97.12), ಗಾಣಧಾಳ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿ ಕಿರಣಕುಮಾರ ತಂದೆ ಗುರುಬಸಯ್ಯ 594 (ಶೇ.95.04) ಮತ್ತು ಜ್ಞಾನಗಂಗಾ ಪ್ರೌಢ ಶಾಲೆ ವಿದ್ಯಾರ್ಥಿನಿ ಕುಮಾರಿ ರಮ್ಯ ತಂದೆ ಹನುಮಂತರಾಯ 593 (ಶೇ.94.88) ಅಂಕಗಳನ್ನು ಪಡೆದು ತಾಲೂಕಿಗೆ ತೃತೀಯ, 4ನೇ, 5ನೇ ಸ್ಥಾನ ಪಡೆದಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಓದಿ ಪರೀಕ್ಷೆಗೆ ಹಾಜರಾದ 3425 ವಿದ್ಯಾರ್ಥಿಗಳಲ್ಲಿ 2652 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.77.40 ರಷ್ಟು, ಅನುದಾನಿತ ಶಾಲೆಯಲ್ಲಿ ಓದಿದ 97 ಮಕ್ಕಳ ಪೈಕಿ 83 ವಿದ್ಯಾರ್ಥಿಗಳು, ಶೇ.85.56 ರಷ್ಟು, ಖಾಸಗಿ ಶಾಲೆಯಲ್ಲಿ ಓದಿದ 570 ಮಕ್ಕಳಲ್ಲಿ 499 ವಿದ್ಯಾರ್ಥಿ, ಉತ್ತೀರ್ಣರಾಗಿ .87.54 ರಷ್ಟು ಫಲಿತಾಂಶ ಪಡೆದಿರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಆಭ್ಯಾಸ ಮಾಡಿದ 3242 ವಿದ್ಯಾರ್ಥಿಗಳಲ್ಲಿ 2602 ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ.80.25 ರಷ್ಟು, ನಗರ ಪ್ರದೇಶದಲ್ಲಿ ಅಭ್ಯಾಸ ಮಾಡಿದ 850 ವಿದ್ಯಾರ್ಥಿಗಳಲ್ಲಿ631 ವಿದ್ಯಾರ್ಥಿಗಳು ಪಾಸಾಗಿ ಶೇ.74.23 ರಷ್ಟು ಫಲಿತಾಂಶ ಪಡೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ ಪಡೆದಿರುತ್ತಾರೆ ಎಂದು ಬಿಇಒ ಎಚ್.ಸುಖದೇವ್ ತಿಳಿಸಿದ್ದಾರೆ.