ಬೆಳ್ತಂಗಡಿ ತಾಲೂಕಿಗೆ ಶೇ.94.18 ಫಲಿತಾಂಶ

| Published : May 10 2024, 01:39 AM IST

ಸಾರಾಂಶ

ತಾಲೂಕಿನಲ್ಲಿ ಒಟ್ಟು 76 ಪ್ರೌಢಶಾಲೆಗಳಿದ್ದು ಅದರಲ್ಲಿ 14 ಸರ್ಕಾರಿ ಪ್ರೌಢಶಾಲೆಗಳು, 4 ಅನುದಾನಿತ ಪ್ರೌಢಶಾಲೆಗಳು ಹಾಗು 25 ಅನುದಾನ ರಹಿತ ಪ್ರೌಢಶಾಲೆಗಳು ಹೀಗೆ ಒಟ್ಟು 43 ಪ್ರೌಢಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ.

ಕನ್ನಡಪರ್ಭ ವಾರ್ತೆ ಬೆಳ್ತಂಗಡಿ

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಶೇ. 94.18 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು 3950 ವಿದ್ಯಾರ್ಥಿಗಳಲ್ಲಿ 3720 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 94.18 ಫಲಿತಾಂಶ ಬಂದಿದೆ..

ತಾಲೂಕಿನಲ್ಲಿ ಒಟ್ಟು 76 ಪ್ರೌಢಶಾಲೆಗಳಿದ್ದು ಅದರಲ್ಲಿ 14 ಸರ್ಕಾರಿ ಪ್ರೌಢಶಾಲೆಗಳು, 4 ಅನುದಾನಿತ ಪ್ರೌಢಶಾಲೆಗಳು ಹಾಗು 25 ಅನುದಾನ ರಹಿತ ಪ್ರೌಢಶಾಲೆಗಳು ಹೀಗೆ ಒಟ್ಟು 43 ಪ್ರೌಢಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ.

2, 123 ಹುಡುಗರ ಪೈಕಿ 1943 ಮಂದಿ, 1827 ವಿದ್ಯಾರ್ಥಿನಿಯರ ಪೈಕಿ ಪೈಕಿ1,777 ಉತ್ತೀರ್ಣರಾಗಿದ್ದಾರೆ.

100 ಶೇ.ಫಲಿತಾಂಶ ಗಳಿಸಿದ ಶಾಲೆಗಳು: ಸರ್ಕಾರಿ ಶಾಲೆಗಳಾದ ಪೆರ್ಲ ಬೈಪಾಡಿ, ಶಾಲೆತಡ್ಕ, ಪದ್ಮುಂಜ, ಕರಾಯ, ಕಾಶಿಪಟ್ಣ, ಮೊರಾರ್ಜಿ ದೇಸಾಯಿ ಶಾಲೆ ಮಚ್ಚಿನ, ಬುಳೇರಿ ಮೊಗ್ರು, ಕಾಜೂರು, ಮೊರಾರ್ಜಿ ದೇಸಾಯಿ ಶಾಲೆ ಮುಂಡಾಜೆ, ನಾರಾವಿ, ಬದನಾಜೆ, ಹಳೆಪೇಟೆ ಉಜಿರೆ, ನೇಲ್ಯಡ್ಕ, ಸವಣಾಲು. ಅನುದಾನಿತ ಶಾಲೆಗಳಾದ ಎಸ್‌ಡಿಎಂ ಬೆಳಾಲು, ಎಸ್‌ಡಿಎಂ ಪೆರಿಂಜೆ, ಸೈಂಟ್ ಥೋಮಸ್ ನೆರಿಯ, ಸೈಂಟ್ ತೆರೆಸಾ ಬೆಳ್ತಂಗಡಿ ಹಾಗೂ ಖಾಸಗಿ ಶಾಲೆಗಳಾದ ಕಾರುಣ್ಯ ಕಕ್ಕಿಂಜೆ, ಜ್ಞಾನಭಾರತಿ ಇಳಂತಿಲ, ಮರಿಯಾಂಬಿಕಾ ಬೆದ್ರಬೆಟ್ಟು, ಎಸ್ ಡಿ ಎಂ ಹೈಸ್ಕೂಲ್ ಧರ್ಮಸ್ಥಳ, ದಿವ್ಯಜ್ಯೋತಿ ಕಾಯರ್ತಡ್ಕ, ಮನ್ಶರ್ ಗೇರುಕಟ್ಟೆ, ನವ ಚೇತನ ವೇಣೂರು, ಸೈಂಟ್ ಫ್ರಾನ್ಸಿಸ್ ಕೊಕ್ಕಡ, ಸೈಂಟ್ ಮೇರಿ ಲಾಯಿಲ, ಸರಸ್ವತಿ ಮುಂಡಾಜೆ, ಸ್ಟಾರ್ ಲೈನ್ ಪೆರ್ಮಾಣು, ಸೈಂಟ್ ಪೌಲ್ ನಾರಾವಿ, ಕುಂಭಶ್ರೀ ವೇಣೂರು, ಸೇಕ್ರೆಡ್ ಹಾರ್ಟ್ ಮಡಂತ್ಯಾರು, ಶ್ರೀರಾಮ ಪಟ್ಟೂರು, ಸೈಂಟ್ ಸಾವ್ಯೋ ತೋಟತ್ತಾಡಿ, ಅನುಗ್ರಹ ಉಜಿರೆ, ಎಸ್ ಡಿ ಎಂ ಉಜಿರೆ, ಭಾರತಿ ಉರುವಾಲು, ಹೋಲಿ ರೆಡಿಮರ್ ಬೆಳ್ತಂಗಡಿ, ಸೈಂಟ್ ತೆರೇಸಾ ಬೆಳ್ತಂಗಡಿ, ಎಸ್ ಡಿ ಎಂ ಬೆಳ್ತಂಗಡಿ, ವಾಣಿ ಬೆಳ್ತಂಗಡಿ, ವಿದ್ಯೋದಯ ವೇಣೂರು ಮತ್ತು ಶ್ರೀರಾಮ ಶಾಲೆ ಸುಲ್ಕೇರಿ.

ಕಲ್ಮಂಜ ಸರ್ಕಾರಿ ಪ್ರೌಢಶಾಲೆಯ ತನುಶ್ರೀ ಜಿಲ್ಲಾಮಟ್ಟದಲ್ಲಿ ಪ್ರಥಮ

ಕಲ್ಮಂಜ ಪ್ರೌಢಶಾಲೆಯ ತನುಶ್ರೀ 617 ಅಂಕ ಗಳಿಸಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲೇ ತಾಲೂಕಿಗೆ ಪ್ರಥಮ ಮತ್ತು ಜಿಲ್ಲಾ ಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದಿದ್ದಾಳೆ. ಕಲ್ಮಂಜ ಪ್ರೌಢಶಾಲೆಯ ಪರೀಕ್ಷೆಗೆ ಹಾಜರಾದ 45 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿ 97.77 ಫಲಿತಾಂಶ ಬಂದಿರುತ್ತದೆ.