ಎಸ್‌ಎಸ್‌ಎಲ್‌ಸಿ: ರಾಮನಗರ ಜಿಲ್ಲೆಗೆ ಶೇ.71.16 ಫಲಿತಾಂಶ

| Published : May 10 2024, 01:32 AM IST

ಎಸ್‌ಎಸ್‌ಎಲ್‌ಸಿ: ರಾಮನಗರ ಜಿಲ್ಲೆಗೆ ಶೇ.71.16 ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಶಾಲಾ ಶಿಕ್ಷಣ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ರಾಮನಗರ ಜಿಲ್ಲೆ ಶೇ.71.16ರಷ್ಟು ಫಲಿತಾಂಶ ಲಭಿಸಿದ್ದು, ರಾಜ್ಯದಲ್ಲಿ 26ನೇ ಸ್ಥಾನ ಪಡೆದುಕೊಂಡಿದೆ.

ರಾಮನಗರ: ಶಾಲಾ ಶಿಕ್ಷಣ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ರಾಮನಗರ ಜಿಲ್ಲೆ ಶೇ.71.16ರಷ್ಟು ಫಲಿತಾಂಶ ಲಭಿಸಿದ್ದು, ರಾಜ್ಯದಲ್ಲಿ 26ನೇ ಸ್ಥಾನ ಪಡೆದುಕೊಂಡಿದೆ.

ಜಿಲ್ಲೆಯ ನಾಲ್ಕು ತಾಲೂಕಿನಿಂದ ಒಟ್ಟು 12,681 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 9025 ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.71.16ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ.

2022ರಲ್ಲಿ ಶೇ.93.81ರಷ್ಟು ಫಲಿತಾಂಶವನ್ನು ದಾಖಲು ಮಾಡಿದ್ದ ಜಿಲ್ಲೆಯು, 2023ರಲ್ಲಿ ಶೇ.89.90ರಷ್ಟು ಫಲಿತಾಂಶ ಪಡೆದುಕೊಂಡಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ.18.74ರಷ್ಟು ಕಡಿಮೆ ಫಲಿತಾಂಶ ಬಂದಿದೆ.

ರಾಮನಗರ ತಾಲೂಕಿನಲ್ಲಿ 3416 ಮಂದಿಯಲ್ಲಿ 2390 (ಶೇ.69.96), ಚನ್ನಪಟ್ಟಣ ತಾಲೂಕಿನಲ್ಲಿ 2902 ಮಂದಿಯಲ್ಲಿ 1939 (ಶೇ.66.81), ಕನಕಪುರ ತಾಲೂಕಿನಲ್ಲಿ 3857 ಮಂದಿ ಪೈಕಿ 2682 (ಶೇ.69.53) ಹಾಗೂ ಮಾಗಡಿ ತಾಲೂಕಿನಲ್ಲಿ 2506 ಮಂದಿಯಲ್ಲಿ 2014 (ಶೇ.80.36) ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಗ್ರೇಡ್ ಮಾದರಿ ಹಾಗೂ ಗುಣಾತ್ಮಕ ವಿಧಾನದ ಮೂಲಕ ಫಲಿತಾಂಶ ಪ್ರಕಟಿಸಲಾಗಿದ್ದು, ಇದರಲ್ಲಿ 254 ವಿದ್ಯಾರ್ಥಿಗಳು ಎ+ ಶ್ರೇಣಿ, 821 ವಿದ್ಯಾರ್ಥಿಗಳು ಎ ಶ್ರೇಣಿ , 1346 ಮಂದಿ ಬಿ + ಶ್ರೇಣಿ , 1939 ವಿದ್ಯಾರ್ಥಿಗಳು ಬಿ ಶ್ರೇಣಿ, 2619 ಮಂದಿ ಸಿ + ಶ್ರೇಣಿ ಹಾಗೂ 1974 ವಿದ್ಯಾರ್ಥಿಗಳು ಸಿ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ನಗರ ಪ್ರದೇಶ ವಿದ್ಯಾರ್ಥಿಗಳ ಮೇಲುಗೈ:

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಕೆ ಮಾಡಿದರೆ ನಗರ ಪ್ರದೇಶದ ವಿದ್ಯಾರ್ಥಿಗಳು ಮುಂದಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ. ಗ್ರಾಮಾಂತರದಲ್ಲಿ ಬಾಲಕ ಹಾಗೂ ಬಾಲಕಿಯರು ಕ್ರಮವಾಗಿ ಶೇ.63.65 ಹಾಗೂ 78.52 ಫಲಿತಾಂಶ ದಾಖಲು ಮಾಡಿದ್ದಾರೆ. ನಗರ ಪ್ರದೇಶ ವಿದ್ಯಾರ್ಥಿಗಳಲ್ಲಿ 61.57ರಷ್ಟು ಬಾಲಕರು ಹಾಗೂ 81.06ರಷ್ಟು ಬಾಲಕಿಯರು ಫಲಿತಾಂಶ ದಾಖಲು ಮಾಡಿದ್ದಾರೆ.

ಇನ್ನು ವಿದ್ಯಾರ್ಥಿಗಳು ಪರೀಕ್ಷೆ ಬರೆದವರ ಪೈಕಿ ಮಾಧ್ಯಮವಾರು ಅಂಕಿ ಅಂಶದಲ್ಲಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾದರೆ, ಉರ್ದು ಮಾಧ್ಯಮ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹಾಜರಾದ 6576 ವಿದ್ಯಾರ್ಥಿಗಳ ಪೈಕಿ 4158 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 63.22ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ. ಆಂಗ್ಲ ಮಾಧ್ಯಮ ಪಡೆದು ಪರೀಕ್ಷೆಗೆ ಹಾಜರಾದ 5966 ವಿದ್ಯಾರ್ಥಿಗಳ ಪೈಕಿ 4798 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಒಟ್ಟು 80.42ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ. ಇದರ ಜತೆಗೆ, ಉರ್ದು ಮಾಧ್ಯಮ 139 ಮಂದಿ ಪರೀಕ್ಷೆ ಹಾಜರಾಗಿದ್ದರು. ಇದರಲ್ಲಿ 69 ಮಂದಿ ಮಾತ್ರ ಉತ್ತೀರ್ಣರಾಗುವ ಮೂಲಕ ಶೇ.49.64ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ.

ಖಾಸಗಿ ಶಾಲೆ ಮುಂದು:

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಫಲಿತಾಂಶದ ಪೈಕಿ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳು 80.21ರಷ್ಟು ದಾಖಲು ಮಾಡಿದರೆ, ಸರ್ಕಾರಿ ಶಾಲೆಯು ಶೇ.70.72 ಹಾಗೂ ಅನುದಾನಿತ ಶಾಲೆಗಳು ಶೇ. 60.99ರಷ್ಟು ಫಲಿತಾಂಶವನ್ನು ದಾಖಲು ಮಾಡಿದೆ.

ಇನ್ನು ಈ ಬಾರಿ ಎಸ್ಸೆಸ್ಸೆಲ್ಸಿಯ ಆರು ವಿಷಯಗಳಲ್ಲಿಯು ಶೇ.75ರಷ್ಟು ಮೇಲ್ಪಟ್ಟು ಫಲಿತಾಂಶವನ್ನು ದಾಖಲು ಮಾಡಿವೆ. ಪ್ರಥಮ ಭಾಷೆ ಶೇ.79.64, ದ್ವಿತೀಯ ಭಾಷೆ ಶೇ.76.18, ತೃತೀಯ ಭಾಷೆ ಶೇ.76.23, ಗಣಿತ ಶೇ.75.34, ವಿಜ್ಞಾನ ಶೇ.72.56 ಹಾಗೂ ಸಮಾಜ ವಿಜ್ಞಾನ ಶೇ.75.26 ರಷ್ಟು ಫಲಿತಾಂಶವನ್ನು ದಾಖಲು ಮಾಡಿದೆ.

ಬಾಕ್ಸ್ ...............

ಜಿಲ್ಲೆಯ ಟಾಪರ್ಸ್

ಮಾಗಡಿಯ ವಾಸವಿ ವಿದ್ಯಾನಿಕೇತನ್ ಶಾಲೆಯ ಎಂ.ಗಿರೀಶ್ ಕುಮಾರ್ 618 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಮಾಗಡಿಯ ದೋಣಕುಪ್ಪೆಯ ಸಿಎನ್ ಎಸ್ ಶಾಲೆಯ ಡಿ.ಎಸ್ .ಹರ್ಷಿತ 616 ಅಂಕದೊಂದಿಗೆ ದ್ವಿತೀಯ, ಮಾಗಡಿಯ ವಾಸವಿ ವಿದ್ಯಾನಿಕೇತನ್ ಶಾಲೆಯ ಎಂ.ಆರ್.ಹಿತೈಷಿ 615 ಅಂಕದೊಂದಿಗೆ ತೃತೀಯ, ಕನಕಪುರ ತಾಲೂಕಿನ ಮಹಪ್ರದ ಅಕಾಡೆಮಿ ಶಾಲೆಯ ತನುಶ್ರೀ 614 ಅಂಕದೊಂದಿಗೆ ನಾಲ್ಕು ಹಾಗೂ ಕನಕಪುರದ ಸೇಂಟ್ಮಾ ಮೈಕೆಲ್ಗ ಶಾಲೆಯ ಎಂ.ಕಾವ್ಯಾ 612 ಅಂಕ ಪಡೆದು ಐದನೇ ಸ್ಥಾನ ಪಡೆದುಕೊಂಡಿದ್ದಾರೆ.ಬಾಕ್ಸ್‌.........

ಬಾಲಕಿಯರ ಮೇಲುಗೈ

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 6338 ಮಂದಿಯಲ್ಲಿ 4000 ಬಾಲಕರು ಉತ್ತೀರ್ಣರಾಗಿ ಶೇ.63.11ರಷ್ಟು ಫಲಿತಾಂಶ ಪಡೆದರೆ, 6352 ಬಾಲಕಿಯರಲ್ಲಿ 5025 ಮಂದಿ ಉತ್ತೀರ್ಣರಾಗಿ ಶೇ.79.10ರಷ್ಟು ಫಲಿತಾಂಶ ದಾಖಲಿಸಿದ್ದಾರೆ.ಬಾಕ್ಸ್ ........

ಶಾಲೆಗಳ ವಿ.

ಹಾಜರಾದವರ.

ಉತ್ತೀರ್.

ಶೇಕಡ

ಸರ್ಕಾರ.

552.

390.

70.72

ಅನುದಾನಿ.

316.

193.

60.99

ಅನುದಾನ ರಹಿ.

397.

318.

80.21 ಒಟ್ಟ.

12,68.

902.

71.16

ಕೋಟ್ ..............

ರಾಮನಗರ ಜಿಲ್ಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 21ರಿಂದ 26ನೇ ಸ್ಥಾನಕ್ಕೆ ಕುಸಿದಿರುವುದು ಬೇಸರ ತರಿಸಿದೆ. ಉತ್ತಮ ಫಲಿತಾಂಶ ತರಲು ಸಾಕಷ್ಟು ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ, ಶಿಕ್ಷಕರಿಗೆ ವಿಶೇಷ ತರಬೇತಿ ಕೊಡಿಸುವುದರ ಜೊತೆಗೆ ಯಶಸ್ಸು ಕೈಪಿಡಿಯನ್ನು ಕೊಡಲಾಗಿತ್ತು. ಆದರೂ ಈ ಫಲಿತಾಂಶ ಸಮಾಧಾನ ತಂದಿಲ್ಲ. ಜೂನ್ ತಿಂಗಳಲ್ಲಿ ನಡೆಯುವ ಪರೀಕ್ಷೆ -2ರಲ್ಲಿ ಫಲಿತಾಂಶ ಸುಧಾರಿಸಲು ಕ್ರಮ ವಹಿಸಲಾಗುವುದು. ಶಿಕ್ಷಕರಿಗೂ ಸೂಕ್ತ ಮಾರ್ಗದರ್ಶನ ಕೊಡಲಾಗುವುದು.

-ಪುರುಷೋತ್ತಮ, ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಮನಗರ

(ಮಕ್ಕಳು ಫಲಿತಾಂಶ ನೋಡುತ್ತಿರುವ ಒಂದು ಸಾಂದರ್ಭಿಕ ಚಿತ್ರ ಬಳಸಿ)