ಎಸ್ಸೆಸ್ಸೆಲ್ಸಿ ಪರೀಕ್ಷೆ: ಜಿಲ್ಲೆಗೆ ನಾಗಮಂಗಲ ತಾಲೂಕು 4ನೇ ಸ್ಥಾನ

| Published : May 10 2024, 01:32 AM IST

ಸಾರಾಂಶ

ತಾಲೂಕಿನ 25 ಸರ್ಕಾರಿ ಪ್ರೌಢಶಾಲೆ, 13 ಅನುದಾನಿತ ಪ್ರೌಢಶಾಲೆ, 6 ವಸತಿ ಶಾಲೆಗಳು ಹಾಗೂ 8 ಅನುದಾನ ರಹಿತ ಪ್ರೌಢಶಾಲೆಗಳಿಂದ 1223 ಬಾಲಕರು ಮತ್ತು 1064 ಬಾಲಕಿಯರು ಸೇರಿ ಒಟ್ಟು 2287 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1704 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.74.5 ರಷ್ಟು ಫಲಿತಾಂಶ ಬಂದಿದ್ದು, ತಾಲೂಕು ಜಿಲ್ಲೆಗೆ 4ನೇ ಸ್ಥಾನ ಪಡೆದುಕೊಂಡಿದೆ.

ತಾಲೂಕಿನ ಒಟ್ಟು 52 ಪ್ರೌಢಶಾಲೆಗಳ ಪೈಕಿ ತಾಲೂಕಿನ ಸೋಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ದೇವಲಾಪುರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ ಲಭಿಸಿದೆ. ಒಟ್ಟಾರೆ ತಾಲೂಕಿಗೆ ಈ ಬಾರಿ ಶೇ.74.5 ಸರಾಸರಿ ಫಲಿತಾಂಶ ಸಿಕ್ಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ತಿಳಿಸಿದ್ದಾರೆ.

ತಾಲೂಕಿನ 25 ಸರ್ಕಾರಿ ಪ್ರೌಢಶಾಲೆ, 13 ಅನುದಾನಿತ ಪ್ರೌಢಶಾಲೆ, 6 ವಸತಿ ಶಾಲೆಗಳು ಹಾಗೂ 8 ಅನುದಾನ ರಹಿತ ಪ್ರೌಢಶಾಲೆಗಳಿಂದ 1223 ಬಾಲಕರು ಮತ್ತು 1064 ಬಾಲಕಿಯರು ಸೇರಿ ಒಟ್ಟು 2287 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1704 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ತಾಲೂಕಿನ ಬಿ.ಜಿ.ನಗರದ ಭಕ್ತನಾಥಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿ ಬಿ.ಜಿ.ಸಾಧನ(612) ಪಟ್ಟಣದ ಶ್ರೀ ಕುವೆಂಪು ಸ್ಮಾರಕ ಪ್ರೌಢಶಾಲೆ ವಿದ್ಯಾರ್ಥಿ ಎಂ.ಜೆ. ಚೌತಿಕ್(611), ಬಿ.ಜಿ.ನಗರದ ಭಕ್ತನಾಥಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ರಕ್ಷಾ(602) ಮತ್ತು ವೈಭವ ಎಲ್.ಎಚ್.ಗೌಡ(602) ಪಟ್ಟಣದ ಎಲ್ಲೆನ್ ಪ್ರೌಢಶಾಲೆಯ ಡಿ.ಎಲ್.ರೂಪಶ್ರೀ(601) ಬಿ.ಜಿ.ನಗರದ ಭಕ್ತನಾಥಸ್ವಾಮಿ ಪ್ರೌಢಶಾಲೆ ಎಚ್.ಮೇಘನ(599) ಎಲ್ಲೆನ್ ಪ್ರೌಢಶಾಲೆ ಆರ್.ಇಶಾನಿ(599) ಹಾಗೂ ರೋಡರಿ ಪ್ರೌಢಶಾಲೆ ಧನುಷ್ ಎಸ್.ದೇವಾಡಿಗ(599) ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಯು.ಜಿ.ನಮ್ರತಾ(598) ಬಿ.ಜಿ.ನಗರದ ಭಕ್ತನಾಥಸ್ವಾಮಿ ಪ್ರೌಢಶಾಲೆಯ ಪಿ.ಸಿ.ಕುಶಾಲ್(597) ಶಿರಾಪಟ್ಟಣದ ವಿಸ್ಡಂ ಪಬ್ಲಿಕ್‌ಶಾಲೆಯ ಬಿ.ಕೆ.ತಾರುಣ್ಯ(590) ಹಾಗೂ ತಾಲೂಕಿನ ಕಾಂತಾಪುರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಜಿ.ಜೆಸೃಜನ್‌ಗೌಡ(590) ಅಂಕ ಪಡೆದುಕೊಂಡಿದ್ದಾರೆ.

ತಾಲೂಕಿಗೆ ಈ ಬಾರಿ ಶೇ.74.5ರಷ್ಟು ಫಲಿತಾಂಶ ಬರಲು ಶ್ರಮಿಸಿದ ಎಲ್ಲಾ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ಪೋಷಕರು ಹಾಗೂ ಶಿಕ್ಷಣ ಇಲಾಖೆ ಎಲ್ಲ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿನಂದಿಸಿದ್ದಾರೆ.‘ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಬಹಳಷ್ಟು ಹಿನ್ನಡೆಯಾಗಿರುವುದು ಬೇಸರ ತಂದಿದೆ. ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಫಲಿತಾಂಶ ಹಿನ್ನಡೆಗೆ ಕಾರಣ ಏನೆಂಬುದರ ಮಾಹಿತಿ ಪಡೆದು ಮುಂದಿನ ವರ್ಷದಿಂದ ಉತ್ತಮ ಫಲಿತಾಂಶಕ್ಕೆ ಪೂರಕವಾಗಿ ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಲಾಗುವುದು.’

-ಎನ್.ಚಲುವರಾಯಸ್ವಾಮಿ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ.