ಲೋಕ ಚುನಾವಣೆ: ಹಿರಿಯ ನಾಗರಿಕರು, ಅಂಗವಿಕಲರಿಗೆ ರ್‍ಯಾಪಿಡೋ ಫ್ರೀ ರೈಡ್‌

| Published : Apr 25 2024, 02:00 AM IST / Updated: Apr 25 2024, 10:36 AM IST

ಸಾರಾಂಶ

ಲೋಕಸಭೆ ಚುನಾವಣೆಯ ದಿನ ಹಿರಿಯ ನಾಗರಿಕರಿಗೆ ರ್‍ಯಾಪಿಡೋ ಉಚಿತ ಕಾರು ಮತ್ತು ಆಟೋ ಸೇವೆ ನೀಡುವುದಾಗಿ ಪ್ರಕಟಿಸಿದೆ.

ನವದೆಹಲಿ: ಕರ್ನಾಟಕದಲ್ಲಿ ಶುಕ್ರವಾರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದ್ದು, ಹೆಚ್ಚೆಚ್ಚು ಮತದಾರರನ್ನು ಮತಗಟ್ಟೆಗೆ ಆಕರ್ಷಿಸುವ ನಿಟ್ಟಿನಲ್ಲಿ ರ್‍ಯಾಪಿಡೋ ಟ್ಯಾಕ್ಸಿ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಉಚಿತ ರೈಡ್‌ ಸೇವೆ ಘೋಷಿಸಿದೆ. ಕರ್ನಾಟಕದ ಮಂಗಳೂರು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಈ ಸೇವೆ ಲಭ್ಯ ಇರಲಿದೆ.

ಹಿರಿಯ ನಾಗರಿಕ ಮತದಾರರು ಹಾಗೂ ಅಂಗವಿಕಲರು ಮನೆಯಿಂದ ಮತಗಟ್ಟೆಗೆ ಹಾಗೂ ಮತಗಟ್ಟೆಯಿಂದ ಮನೆಗೆ ಈ ಉಚಿತ ರೈಡ್‌ ಸೇವೆ ಪಡೆದುಕೊಳ್ಳಬಹುದಾಗಿದೆ. ರ್‍ಯಾಪಿಡೋ ಬುಕ್‌ ಮಾಡುವಾಗ ‘ವೋಟ್‌ ನೌ’ (VOTENOW) ಕೋಡ್‌ ಬಳಸಿದರೆ ಉಚಿತ ಕ್ಯಾಬ್‌ ಹಾಗೂ ಆಟೋ ರಿಕ್ಷಾ ಸೇವೆ ಲಭಿಸಲಿದೆ ಎಂದು ರ್‍ಯಾಪಿಡೋ ತಿಳಿಸಿದೆ.