ಸತ್ಸಂಗದಿಂದ ಮನಸ್ಸು ಶುದ್ಧೀಕರಣ ಸಾಧ್ಯ

| Published : Apr 27 2024, 01:18 AM IST / Updated: Apr 27 2024, 01:19 AM IST

ಸಾರಾಂಶ

ಸತ್ಸಂಗದಿಂದ ಮಾತ್ರ ಮನಸ್ಸು ಶುದ್ಧೀಕರಣಗೊಳ್ಳಲು ಸಾಧ್ಯ ಎಂದು ಹಿರಿಯ ಸಾಹಿತಿ ಜಂಬುನಾಥ ಕಂಚಾಣಿ ಹೇಳಿದರು.

ವಿಜಯಪುರ:

ಸತ್ಸಂಗದಿಂದ ಮಾತ್ರ ಮನಸ್ಸು ಶುದ್ಧೀಕರಣಗೊಳ್ಳಲು ಸಾಧ್ಯ ಎಂದು ಹಿರಿಯ ಸಾಹಿತಿ ಜಂಬುನಾಥ ಕಂಚಾಣಿ ಹೇಳಿದರು.

ನಗರದ ಸಾಯಿ ರೆಸಿಡೆನ್ಸಿ ಬಡವಾಣೆಯ ವೀರಾಂಜನೇಯ ದೇವಸ್ಥಾನದ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ನಡೆದ ಹನುಮಾನ ಜಯಂತಿ ಉತ್ಸವದಲ್ಲಿ ಮಾತನಾಡಿದ ಅವರು, ಜಾತ್ರೆ ಮತ್ತು ಮಹಾತ್ಮರ ಜಯಂತಿಗಳ ನೆಪದಲ್ಲಿ ಮನಸ್ಸು ವಿಕಸನಗೊಳ್ಳುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಮಾಜಿಕ ಸ್ವಾಸ್ತ್ಯ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಶಿವ ಬಸವ ಯೋಗಾಶ್ರಮದ ಮಾತೋಶ್ರೀ ದಾನಮ್ಮ ತಾಯಿ, ಸಂಘದ ಅಧ್ಯಕ್ಷ ಎಸ್ ಡಿ ಕೃಷ್ಣಮೂರ್ತಿ, ಮಲ್ಲಿಕಾರ್ಜುನ ಗಡಗಿ, ಸುಧಾ ಇಂಡಿ, ಗೌರಮ್ಮ ಕುಬಕಡ್ಡಿ, ಡಾ.ಸಿ ಕೆ ಹೊಸಮನಿ, ಎಸ್ ಬಿ ಪೂಜಾರ, ಅಮೋಘಸಿದ್ದ ಹಂಜಗಿ, ಮಹಾದೇವ ಕಾಮಗೊಂಡ, ಈರಣ್ಣ ನಾಗರಾಳ, ಎಸ್ ಬಿ ಹಳಗುಣಕಿ, ಬೇವೂರು, ಎಸ್ ಟಿ ಕನಕ, ಶಿವಾನಂದ ಯಾಳವಾರ, ಹೆಚ್ ಹೆಚ್ ಭರಡ್ಡಿ, ಶ್ರೀಕಾಂತ್ ಜಮಖಂಡಿ, ಬಿ ಆರ್ ನರಗುಂದ, ಹೆಚ್ ಎಲ್ ಸಂಕ, ರಾಜಶೆಖರ ಇಂಡಿ, ಎಸ್ ಎಸ್ ದುರಗದ, ಚಿದಾನಂದ ಗಡಗಿ, ಸಿದ್ದು ಇಜೇರಿ, ಬಸವರಾಜ ಪವಾರ, ಸುನೀಲ್ ಟಂಕಸಾಲೆ ಸೇರಿದಂತೆ ಮುಂತಾದವರು ಇದ್ದರು.