ಪ್ರಜ್ವಲ್‌ನದ್ದು ಅತಿರೇಕದ ಹೇಯ ಕೃತ್ಯ: ಸಚಿವ ಎಂಬಿಪಾ

| Published : May 08 2024, 01:06 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪ್ರಜ್ವಲ್‌ನದ್ದು ಅತಿರೇಕದ ಹೇಯ ಕೃತ್ಯವಾಗಿದ್ದು, ಕಾನೂನು ಪ್ರಕಾರ ಆತನಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗೆ ಪ್ರಜ್ವಲ್ ಹಾಜರಾಗಬೇಕು. ಕಾನೂನಿಗೆ ತಲೆಬಾಗಲೇಬೇಕು. ಈ ಪ್ರಕರಣದಿಂದ ಬಿಜೆಪಿಗೆ ಹಿನ್ನಡೆ ಆಗಲಿದ್ದು, ಹೆಣ್ಣುಮಕ್ಕಳು, ತಾಯಂದಿರು ವಿರೋಧವಾಗಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಜ್ವಲ್‌ನದ್ದು ಅತಿರೇಕದ ಹೇಯ ಕೃತ್ಯವಾಗಿದ್ದು, ಕಾನೂನು ಪ್ರಕಾರ ಆತನಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗೆ ಪ್ರಜ್ವಲ್ ಹಾಜರಾಗಬೇಕು. ಕಾನೂನಿಗೆ ತಲೆಬಾಗಲೇಬೇಕು. ಈ ಪ್ರಕರಣದಿಂದ ಬಿಜೆಪಿಗೆ ಹಿನ್ನಡೆ ಆಗಲಿದ್ದು, ಹೆಣ್ಣುಮಕ್ಕಳು, ತಾಯಂದಿರು ವಿರೋಧವಾಗಿದ್ದಾರೆ ಎಂದರು.

ಪ್ರಜ್ವಲ್ ಸರೆಂಡರ್ ಆಗದೇ ಇರೋದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂಬ ಪ್ರಧಾನಿ ಆರೋಪದ ಕುರಿತು ಮಾತನಾಡಿದ ಅವರು, ಕೇಂದ್ರ ನೋಟಿಸ್ ಕೊಡಬೇಕಿತ್ತು? ಲುಕ್‌ಔಟ್, ರೆಡ್ ಕಾರ್ನರ್ ನೋಟಿಸ್ ಕೊಡಬೇಕಿತ್ತು. ವಿದೇಶಾಂಗ ಸಚಿವರು ರಾಜ್ಯ ಸರ್ಕಾರದಲ್ಲಿ ಇರ್ತಾರಾ? ವಿಜಯ ಮಲ್ಯಗೆ ರಾಜ್ಯ ಸರ್ಕಾರ ನೋಟಿಸ್ ಕೊಡ್ತಾರಾ? ಪ್ರಕರಣ ಡೈವರ್ಟ್ ಮಾಡಲು ಹಾಗೇ ಹೇಳುತ್ತಿದ್ದಾರೆ ಎಂದು ದೂರಿದರು.

ಪೆನ್‌ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿಕೆಶಿ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅದಕ್ಕೆ ಡಿ.ಕೆ.ಶಿವಕುಮಾರ ಸ್ಪಷ್ಟನೆ ಕೊಡುತ್ತಾರೆ. ಎಂ.ಬಿ.ಪಾಟೀಲ್ ಅವರು ಸ್ಪಷ್ಟನೆ ಕೊಡಬೇಕಾ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ 6 ಜನ ಕಾಂಗ್ರೆಸ್ ಶಾಸಕರು ಇದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದೆಗೆಲ್ತಾರೆ. ಅಚ್ಚೇ ದಿನ್ ಬಂದಿಲ್ಲ. ಕಾಂಗ್ರೆಸ್‌ನಿಂದ ಅಚ್ಚೇ ದಿನ್ ಬರಲಿವೆ ಎಂದು ಜನ ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದಾರೆ ಎಂದರು.