ಚಿಂಚೋಳಿ ಮತಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ

| Published : May 08 2024, 01:06 AM IST

ಸಾರಾಂಶ

ಬೀದರ್‌ ಲೋಕಸಭೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ಎಲ್ಲ ೨೪೨ ಮತಗಟ್ಟೆ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ಮತದಾನ ನಡೆದಿದೆ.

ಕನ್ನಡಪ್ರಭ ವಾರ್ತೆ ಚಿಂಚೋಳಿಬೀದರ್‌ ಲೋಕಸಭೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ಎಲ್ಲ ೨೪೨ ಮತಗಟ್ಟೆ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸಂತೋಷಕುಮಾರ ಇನಾಂದಾರ ತಿಳಿಸಿದ್ದಾರೆ.

ತಾಲೂಕಿನ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರು ಬೆಳಗಿನಿಂದಲೇ ಮತಗಟ್ಟೆ ಕೇಂದ್ರಗಳಲ್ಲಿ ಜನರು ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ತಾಲೂಕಿನ ಮತಗಟ್ಟೆ ೪೮, ೮೭, ೧೪೫, ೨೨೫, ೧೯೭, ೧೦೨, ೧೦೩, ೧೨೬, ೧೫೫, ೧೫೬, ೬೦, ೧೪೧, ೫೮, ೧೫ ಸಂಖ್ಯೆಗಳಲ್ಲಿ ವಿದ್ಯುನ್ಮಾನ ಯಂತ್ರಗಳಲ್ಲಿ ದೋಷ ಕಂಡು ಬಂದಿದ್ದರಿಂದ ತಾಂತ್ರಿಕ ಸಿಬ್ಬಂದಿ ಅವುಗಳೆಲ್ಲವು ಸರಿಡಿಸಿ ಮತದಾನಕ್ಕೆ ಪುನಹ ಅನುಕೂಲಮಾಡಿಕೊಟ್ವರು. ಕಲ್ಲೂರ, ಚಿಮ್ಮಾಇದಲಾಯಿ, ಐನೋಳಿ ಗ್ರಾಮಗಳಲ್ಲಿ ಹೆಚ್ಚು ಮತದಾರರು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ್ದರಿಂದ ಮತದಾನ ವೇಳೆಯನ್ನು ಮುಂದೂಡಿ ಎಲ್ಲರಿಗೂ ಹಕ್ಕುಚಲಾಯಿಸಲು ಅವಕಾಶವನ್ನು ನೀಡಲಾಯಿತು ಎಂದು ಸಹಾಯಕ ಚುನಾವಣಾಧಿಕಾರಿ ಸಂತೋಷಕುಮಾರ ಇನಾಂದಾರ ತಿಳಿಸಿದ್ದಾರೆ.

ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ಮತದಾರರಿಗೆ ಶುದ್ಧ ನೀರು, ನೆರಳಿಗಾಗಿ ಟೆಂಟ್‌ ವ್ಯವಸ್ಥೆ ಮಾಡಲಾಗಿತ್ತು. ಅಂಗವಿಕಲರಿಗೆ ತ್ರಿಚಕ್ರ ಗಾಲಿ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ೨೪೨ ಮತದಾನ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್‌ ಭದ್ರತೆ ಮಾಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲವೆಂದು ಡಿವೈಎಸ್ಪಿ ಎಸ್.ಎಸ್.ಹಿರೇಮಠ ತಿಳಿಸಿದ್ದಾರೆ.