ಕಾಂಗ್ರೆಸ್ ಕೋಟೆ ಭೇದಿಸಲು ಸಾಧ್ಯವಿಲ್ಲ: ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ

| Published : May 08 2024, 01:06 AM IST

ಕಾಂಗ್ರೆಸ್ ಕೋಟೆ ಭೇದಿಸಲು ಸಾಧ್ಯವಿಲ್ಲ: ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗೆ ಕಾಂಗ್ರೆಸ್ ಸಾಧನೆ, ಅಭಿವೃದ್ಧಿ ಬಗ್ಗೆ ಮನವೊಲಿಕೆ ಮಾಡಿದ್ದೇನೆ. ಮತದಾರರು ಕಾಂಗ್ರೆಸ್ ಅಭಿವೃದ್ಧಿ ಮೆಚ್ಚಿ ನನ್ನನ್ನು ಗೆಲ್ಲಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಹೇಳಿದರು.

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ

ದುರ್ಗದ ಭದ್ರಕೋಟೆಯಂತೆ ಬಳ್ಳಾರಿ, ವಿಜಯನಗರ ಅಖಂಡ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕೋಟೆ ನಿರ್ಮಿಸಿದ್ದೇನೆ. ಅದಕ್ಕೆ ಯಾರಿಂದಲೂ ಹಾರೆ ಹಾಕಿ ಭೇದಿಸಲು ಸಾಧ್ಯವಿಲ್ಲ ಎಂದು ಬಳ್ಳಾರಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಜನರಿಗೆ ಕಾಂಗ್ರೆಸ್ ಸಾಧನೆ, ಅಭಿವೃದ್ಧಿ ಬಗ್ಗೆ ಮನವೊಲಿಕೆ ಮಾಡಿದ್ದೇನೆ. ಮತದಾರರು ಕಾಂಗ್ರೆಸ್ ಅಭಿವೃದ್ಧಿ ಮೆಚ್ಚಿ ನನ್ನನ್ನು ಗೆಲ್ಲಿಸುವುದು ನಿಶ್ಚಿತ. ಈಗಾಗಲೇ ನಾನು ಗೆದ್ದಿದ್ದೇನೆ. ಎಷ್ಟು ಅಂತರ ಎಂಬುದು ಮತದಾನದ ಬಳಿಕ ತಿಳಿಯಲಿದೆ ಎಂದರು.

ಕೆಎಂಎಫ್ ಅಧ್ಯಕ್ಷ ಎಸ್. ಭೀಮನಾಯ್ಕ ತಾಲೂಕಿನ ಅಡವಿ ಆನಂದೇವನಹಳ್ಳಿ ಗ್ರಾಮದಲ್ಲಿ ಮತದಾನ ಮಾಡಿ ಮಾತನಾಡಿ, ಕ್ಷೇತ್ರದಲ್ಲಿ 20 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಕೊಡಲಿದ್ದೇವೆ. ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ಎಲ್ಲ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದರಿಂದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮರಿರಾಮಪ್ಪ, ಆನಂದೇವನಹಳ್ಳಿ ಪ್ರಭಾಕರ, ಸೆರೆಗಾರ ಹುಚ್ಚಪ್ಪ, ಡಿಶ್ ಮಂಜುನಾಥ, ಜಹಾಂಗೀರ್‌ಸಾಬ್, ವೀರೇಶಸ್ವಾಮಿ ಇತರರಿದ್ದರು.ಗ್ಯಾರಂಟಿಗಳು ಕೈ ಹಿಡಿಯಲಿವೆ: ಎಂ.ಪಿ.ಲತಾ ವಿಶ್ವಾಸ

ಕನ್ನಡಪ್ರಭ ವಾರ್ತೆ ಹರಪನಹಳ್ಳಿದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ತಾಲೂಕಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬಹುಮತ ಸಿಗಲಿದೆ. ನಮ್ಮ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿವೆ ಎಂಬ ವಿಶ್ವಾಸವನ್ನು ಇಲ್ಲಿಯ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ವ್ಯಕ್ತಪಡಿಸಿದರು.

ಪಟ್ಟಣದ ಉಪ್ಪಾರಗೇರಿ ಸ.ಹಿ.ಪ್ರಾ. ಶಾಲೆಯ ಸಾಂಪ್ರದಾಯಿಕ ಮತಗಟ್ಟೆಯಲ್ಲಿ ಸೋಮವಾರ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದ ನಂತರ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಐದು ಗ್ಯಾರಂಟಿಗಳು ಮಹಿಳೆಯರ ಮನಸ್ಸನ್ನು ಗೆದ್ದಿವೆ. ನಾನು ಕಳೆದ 10 ತಿಂಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಚಾಲನೆ ನೀಡಿರುವುದು ಹಾಗೂ ಬಿಜೆಪಿಯವರು ಈ ಕ್ಷೇತ್ರದಲ್ಲಿ ಐದು ಬಾರಿ ಗೆದ್ದರೂ ಏನು ಮಾಡಿಲ್ಲ. ಇವೆಲ್ಲಾ ನಮ್ಮ ಕಾಂಗ್ರೆಸ್‌ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಅನುಕೂಲವಾಗಲಿವೆ ಎಂದು ಅವರು ಹೇಳಿದರು.

ಐದು ಬಾರಿ ಸೋತಿರುವ ಶಾಮನೂರು ಕುಟುಂಬದವರ ಮೇಲೆ ಮತದಾರರಿಗೆ ಅನುಕಂಪವಿದೆ. ಒಟ್ಟಿನಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಗೆಲ್ಲುವ ವಿಶ್ವಾಸವಿದೆ ಎಂದ ಅವರು ಅವರು ನಾನು ಜೋಡೆತ್ತುಗಳಾಗಿ ಕೆಲಸ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಎಚ್‌.ಎಂ. ಮಲ್ಲಿಕಾರ್ಜುನ, ಗೌತಮಪ್ರಭು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಮತ್ತೂರು ಬಸವರಾಜ, ಚಿಕ್ಕೇರಿಬಸಪ್ಪ, ಬಸವರಾಜ ಹುಲಿಯಪ್ಪನವರ, ಛಲವಾದಿ ಪರಶುರಾಮ, ಕೊಟ್ಟೂರು ಪ್ರದೀಪ, ಲಾಟಿದಾದಾಪೀರ, ವೀರಭದ್ರಯ್ಯ ಇತರರು ಹಾಜರಿದ್ದರು.