ಪು3..ಮಸ್ಟ್‌....ಕಾಲುವೆ ಮೂಲಕ ಕೆರೆ ತುಂಬಿಸಲು ಸೂಚನೆ

| Published : May 10 2024, 01:33 AM IST

ಪು3..ಮಸ್ಟ್‌....ಕಾಲುವೆ ಮೂಲಕ ಕೆರೆ ತುಂಬಿಸಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಿರು ಬೇಸಿಗೆಯಲ್ಲಿ ತತ್ತರಿಸಿದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಆಲಮಟ್ಟಿ ಜಲಾಶಯದಿಂದ ಮುಳವಾಡ ಏತ ನೀರಾವರಿ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಇಂದಿನಿಂದ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರಬಿರು ಬೇಸಿಗೆಯಲ್ಲಿ ತತ್ತರಿಸಿದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಆಲಮಟ್ಟಿ ಜಲಾಶಯದಿಂದ ಮುಳವಾಡ ಏತ ನೀರಾವರಿ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಇಂದಿನಿಂದ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವುದನ್ನು ತಪ್ಪಿಸಲು ಈ ಹಿಂದೆ ತಿಡಗುಂದಿ ಕಾಲುವೆಯಿಂದ ನೀರು ಹರಿಸಿ, ಭೂತನಾಳ ಕೆರೆ ತುಂಬಿಸಿ, ನಗರದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲಾಗಿತ್ತು. ಈಗ ಮತ್ತೆ ಭೂತನಾಳ ಕೆರೆಗೆ ಹಾಗೂ ಇಂಡಿ ತಾಲೂಕಿನ ಹೊರ್ತಿ ಮತ್ತು ಇತರೆ 31 ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯಡಿ ತಿಡಗುಂದಿ ಕಾಲುವೆ ಮೂಲಕ ನೀರು ಹರಿಸಲಾಗುವುದು.ಬ.ಬಾಗೇವಾಡಿ ತಾಲೂಕಿನ ಅರೇಶಂಕರ ಮತ್ತು ಇತರೆ 19 ಗ್ರಾಮಗಳ ಕಣಕಾಲ ಮತ್ತು 11 ಗ್ರಾಮಗಳ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯು 0.45 ಟಿಎಂಸಿ ನೀರನ್ನು ಮುಳವಾಡ ಏತ ನೀರಾವರಿ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ಹರಿಸುವಂತೆ ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೇ 28 ರವರೆಗೆ 2 ಟಿಎಂಸಿ ನೀರು ಕೆರೆಗಳಿಗೆ ಹರಿಸಲು ಒಪ್ಪಿದ್ದಾರೆ ಎಂದರು.ಭೀಕರ ಬರ ಹಾಗೂ ಬೇಸಿಗೆ ಇರುವುದರಿಂದ ಕುಡಿಯುವ ನೀರು ಒದಗಿಸಲು ಕಾಲುವೆಗಳಿಗೆ ನೀರು ಹರಿಸುವಂತೆ ಒಂದು ತಿಂಗಳಿಂದ ನಿರಂತರವಾಗಿ ಜಿಲ್ಲಾಧಿಕಾರಿಗಳ ಮೂಲಕ ಕೋರಿದ್ದೆ. ನೀತಿಸಂಹಿತೆ ಕಾರಣ ಚುನಾವಣೆ ಆಯೋಗದ ಅನುಮತಿ ಪಡೆದು, ಕಾಲುವೆ ಮೂಲಕ ನೀರು ಹರಿಸಲು ಇದೀಗ ಆದೇಶ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

----------

ಮನವಿ ಸಲ್ಲಿಸಿದ್ದ ರೈತ ಸಂಘಟನೆ ಕಾರ್ಯಕರ್ತರು

ಆಲಮಟ್ಟಿ: ಆಲಮಟ್ಟಿ ಜಲಾಶಯ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗೆ ಸಂಬಂಧಿಸಿದ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಜಿಲ್ಲೆಯಲ್ಲಿರುವ 116 ಕೆರೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಗುರುವಾರ ಮುಖ್ಯ ಎಂಜಿನಿಯರ್‌ಗೆ ಮನವಿ ಸಲ್ಲಿಸಿದ್ದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕಳೆದ ತಿಂಗಳು ಕಾಲುವೆಗೆ ನೀರು ಹರಿಸಿದಾಗ 116 ಕೆರೆಗಳ ಪೈಕಿ ಅರ್ಧದಷ್ಟು ಕೆರೆಗಳಿಗೆ ಮಾತ್ರ ತಲುಪಿದ್ದು, ಕೆಲವೊಂದು ಭಾಗದ ಕೆರೆಗಳಿಗೆ ನೀರು ತಲುಪಿಲ್ಲ. ಇದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿದೆ ಎಂದು ದೂರಿದ್ದರು.ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಬಹುತೇಕ ಕೆರೆಗಳಲ್ಲಿನ ನೀರು ಬತ್ತಿದೆ. ಜಲಾಶಯದಲ್ಲಿ 30 ಟಿಎಂಸಿ ಅಡಿ ನೀರಿದೆ. ಅದರಲ್ಲಿ 17 ಟಿಎಂಸಿ ಅಡಿ ಬಳಕೆಗೆ ನಿರ್ಬಂಧವಿದ್ದು, ನೀರು ಹೊರತುಪಡಿಸಿದರೂ ಬಳಕೆಗೆ ಇನ್ನೂ 13 ಟಿಎಂಸಿ ಅಡಿ ನೀರು ಲಭ್ಯ ವಿದೆ. ಅದರಲ್ಲಿ ಕೇವಲ 1.5 ಟಿಎಂಸಿ ಅಡಿ ನೀರು ಹರಿಸಿದರೇ ಜಿಲ್ಲೆಯ ಎಲ್ಲಾ ಕೆರೆಗಳು ಭರ್ತಿಯಾಗಲಿವೆ ಎಂದರು.ಈ ಸಂದರ್ಭದಲ್ಲಿ ವಿಠಲ ಬಿರಾದಾರ, ಚಂದ್ರಶೇಖರ ಜಮ್ಮಲದಿನ್ನಿ ಬೀರಪ್ಪ ವಂದಾಲ, ರೇವಪ್ಪಗೌಡ ಪೋಲೆಶಿ, ಗುರುಲಿಂಗಪ್ಪ ಪಡಸಲಗಿ, ವಿಠಪ್ಪ ಗೋಡೇಕರ, ನಲ್ಲಪ್ಪ ಮನ್ಯಾಳ, ಲಾಲಸಾ ಹಳ್ಳೂರ, ರಾಮಣ್ಣ ಮನ್ಯಾಳ, ಸಿದ್ಲಿಂಗಪ್ಪ ಬಿರಾದಾರ ಯಲ್ಲಪ್ಪ ಮನ್ಯಾಳ, ಲಾಳೇಸಾ ಕೆಳಗಿನಮನಿ, ರಾಜು ಬಿರಾದಾರ, ಬಂದಗಿಸಾಬ ಹಳ್ಳುರ ಬಾಬು ಹಡಪದ, ದೇವಪ್ಪ ಪೋಲೆಶಿ ಶಿವರಾಜ ಗೋಡೆಕಾರ ಇದ್ದರು.