ಸಾಮೂಹಿಕ ವಿವಾಹಗಳು ಬಡವರಿಗೆ ವರದಾನ

| Published : May 09 2024, 01:04 AM IST

ಸಾರಾಂಶ

ಸಮಾಜದಲ್ಲಿ ಶ್ರೀಮಂತ, ಬಡವ ಎನ್ನದೆ ಜಾತ್ಯಾತೀತವಾಗಿ ಸಾಮೂಹಿಕ ವಿವಾಹಗಳ ಮೂಲಕ ಜನರು ಒಂದೆಡೆ ಸೇರುವ ಮೂಲಕ ಸಾಮರಸ್ಯದಿಂದ ವಿವಾಹ ಮಾಡುತ್ತಿರುವುದು ಬಡವರಿಗೆ ವರದಾನ

ನರಗುಂದ: ಹಾಲಮತ ಸಮಾಜದ ಶ್ರೀಬೀರಲಿಂಗೇಶ್ವರ ಭಕ್ತರು ಸಾಮೂಹಿಕ ವಿವಾಹ ಏರ್ಪಡಿಸುವ ಮೂಲಕ ಸಮಾಜಕ್ಕೆ ಆದರ್ಶವಾಗಿ ಪ್ರೇರಣೆಯಾಗಿದ್ದಾರೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಪಲ್ಲಕ್ಕಿ ಉತ್ಸವ ಮತ್ತು ಸಾಮೂಹಿಕ ವಿವಾಹಗಳ ಸಮಾರಂಭದಲ್ಲಿ ಮಾತನಾಡಿ, ಸಮಾಜದಲ್ಲಿ ದೇವಸ್ಥಾನಗಳು ಜ್ಞಾನ, ವೈರಾಗ್ಯದ ಭಕ್ತಿಯ ಸಂಗಮವಾಗಿವೆ. ಇಲ್ಲಿ ಜಾತ್ರೆ, ಧಾರ್ಮಿಕ ಉತ್ಸವಗಳ ಜತೆಗೆ ಸಾಮೂಹಿಕ ವಿವಾಹ ಏರ್ಪಡಿಸುವ ಮೂಲಕ ಹಾಲಮತ ಸಮಾಜದ ಶ್ರೀಬೀರಲಿಂಗೇಶ್ವರ ಭಕ್ತರು ಸಮಾಜಕ್ಕೆಆದರ್ಶವಾಗಿ ಮತ್ತೊಬ್ಬರಿಗೆ ಪ್ರೇರಣೆಯಾಗಿದ್ದಾರೆ ಎಂದರು.

ಜಾಲಿಕಟ್ಟಿಯ ಪೂರ್ಣಾನಂದ ಮಠದಕೃಷ್ಣಾನಂದ ಶ್ರೀಗಳು ಮಾತನಾಡಿ, ಸಮಾಜದಲ್ಲಿ ಶ್ರೀಮಂತ, ಬಡವ ಎನ್ನದೆ ಜಾತ್ಯಾತೀತವಾಗಿ ಸಾಮೂಹಿಕ ವಿವಾಹಗಳ ಮೂಲಕ ಜನರು ಒಂದೆಡೆ ಸೇರುವ ಮೂಲಕ ಸಾಮರಸ್ಯದಿಂದ ವಿವಾಹ ಮಾಡುತ್ತಿರುವುದು ಬಡವರಿಗೆ ವರದಾನವಾಗಿದೆ ಎಂದರು.

ಶಿವಯೋಗಾಶ್ರಮದ ಅಕ್ಕಮಹಾದೇವಿ ಶರಣಮ್ಮನವರು ಮಾತನಾಡಿ, ಸಮಾಜದಲ್ಲಿ ಶ್ರೀಮಂತರು ತಮ್ಮ ಮದುವೆಗಳ ಜತೆಗೆ ಬಡವರ ಮದುವೆ ಮಾಡುವ ಮೂಲಕ ಸಮಾಜದ ಜತೆಗೆ ಆದರ್ಶವಾಗಿ ಬಾಳಬೇಕು ಎಂದು ತಿಳಿಸಿದರು.

ಶ್ರೀ ಜಗದ್ಗುರು ಯಚ್ಚರಸ್ವಾಮಿಗಳ ಗವಿಮಠದ ಅಭಿನವ ಯಚ್ಚರ ಶ್ರೀಗಳು ಮಾತನಾಡಿ, ಭಯ,ಭಕ್ತಿ,ತ್ಯಾಗ, ಪರೋಪಕಾರ, ತಂದೆ,ತಾಯಿ, ಹಿರಿ ಕಿರಿಯರನ್ನುಗೌರವಿಸುವದರ ಜತೆಗೆ ಸಮಾಜದಲ್ಲಿ ಗೌರವದಿಂದ ಬದುಕನ್ನು ನಡೆಸಬೇಕೆಂದು ನೂತನ ವಧು-ವರರಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಅಪಯ್ಯ ಹಿರೇಮಠ, ವೀರಯ್ಯ ಹಿರೇಮಠ, ರುದ್ರಯ್ಯ ಹಿರೇಮಠ, ಮುರನಾಳದ ಗುರುನಾಥ ಶ್ರೀಗಳು, ಡಿ.ವೈ.ಕಾಡಪ್ಪನವರ, ಪ್ರಕಾಶಗೌಡ ತಿರಕನಗೌಡ್ರ, ಬಸಯ್ಯ ಮಠದ, ರವೀಂದ್ರ ಹಿರೇಮಠ, ಲಾಲಸಾಬ ಅರಗಂಜಿ, ಸಂಭಾಜಿ ಕಲಾಲ, ದೇವಿಂದ್ರಪ್ಪ ಶಾಂತಗೇರಿ, ಬಾಪುಗೌಡ್ರ ತಿಮ್ಮನಗೌಡ್ರ, ಪ್ರಭಾಕರ ಉಳ್ಳಾಗಡ್ಟಿ, ಶರಣಪ್ಪ ಕಾಡಪ್ಪನವರ, ಜಾತ್ರಾಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ದ್ಯಾಮಣ್ಣ ತೆಗ್ಗಿ, ಅಧ್ಯಕ್ಷ ಶಂಕರಪ್ಪ ಕಾಡಪ್ಪನವರ, ಉಪಾಧ್ಯಕ್ಷ ಮುತ್ತಪ್ಪ ಕುರಿ, ಕಾರ್ಯದರ್ಶಿ ಬಸವರಾಜ ಕಂಬಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಾಜಮೆಲೋಡಿಸ್ ಶಿರೋಳ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಿತು.