ಲೋಕಸಭಾ ಚುನಾವಣೆ: ಮೊದಲ ಮತ, ಮೊದಲ ಮಾತು...!

| Published : Apr 27 2024, 01:23 AM IST

ಸಾರಾಂಶ

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದವರು ಇಷ್ಟದ ಜನಪ್ರತಿನಿಧಿಗೆ ಓಟು ಹಾಕಿದ ಅನುಭವದೊಂದಿಗೆ ಮೊದಲ ಮಾತುಗಳನ್ನು ಕನ್ನಡಪ್ರಭದೊಂದಿಗೆ ಆಡಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಪಟ್ಟಣದ ಗಂಜಾಂನ ಪಿ.ಸುರಭಿ, ಅನನ್ಯ ಶರ್ಮ ಮತದಾನ ಮಾಡಿ ಖುಷಿ ಪಟ್ಟರು. ಮೊದಲ ಬಾರಿಗೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದು ಖುಷಿ ಕೊಟ್ಟಿದೆ. ದೇಶದ ಪ್ರಜಾಪ್ರಭುತ್ವದಲ್ಲಿ ನನಗೂ ಹಕ್ಕಿದೆ ಎಂಬುದು ನನಗೆ ಹೆಮ್ಮೆ ಎನಿಸಿದೆ. ನನ್ನ ಕುಟುಂಬಸ್ಥರೊಂದಿಗೆ ಮತಗಟ್ಟೆಗೆ ಹೋಗಿ ಮೊದಲ ಬಾರಿಗೆ ಮತ ಚಲಾವಣೆ ಮಾಡಿದ್ದು, ಈ ದಿನವನ್ನು ಸ್ಮರಣೀಯವಾಗಿಸಿದೆ. ದೇಶದ ಭದ್ರತೆಗೆ ನನ್ನ ಮತವೂ ಸೇರಿರುವುದು ಹೆಮ್ಮೆಯ ವಿಷಯ. ಹಾಗಾಗಿ ಪ್ರತಿಯೊಬ್ಬರು ತಪ್ಪದೆ ಮತ ಚಲಾಯಿಸಬೇಕು ಎಂದರು.

ಪ್ರಥಮ ಬಾರಿಗೆ ಮತದಾನ ಖುಷಿ ತಂದಿದೆ

ಹಲಗೂರು:

ಹಲಗೂರು ಗ್ರಾಮದ ವಾಸಿ ಎಚ್.ಎನ್.ವಿರೂಪಾಕ್ಷ ಮೂರ್ತಿ ಪುತ್ರ ಎಚ್.ವಿ.ಚಿನ್ಮಯ್ ಮೊದಲ ಬಾರಿ ಮತದಾನ ಮಾಡಿದರು. ನಂತರ ಮಾತನಾಡಿದ ಚಿನ್ಮಯ್, ನಾನು ಮೊದಲ ಬಾರಿ ತುಂಬಾ ಉತ್ಸಾಹದಿಂದ ಮತದಾನ ಮಾಡಿದ್ದೇನೆ. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ನನ್ನದು ಒಂದು ಪಾತ್ರವಿದೆ ಎಂಬ ಕಲ್ಪನೆ ನನಗೆ ತುಂಬಾ ಸಂತೋಷ ನೀಡಿದೆ. ಮುಂದಿನ ಸರ್ಕಾರದಿಂದ ನಿರುದ್ಯೋಗ ಸಮಸ್ಯೆ ತೊಲಗಿ ವಿದ್ಯಾವಂತ ಯುವಕರಿಗೆ ಉತ್ತಮ ಭವಿಷ್ಯ ದೊರಕಬೇಕೆಂದು ಆಶಿಸುತ್ತೇನೆ ಎಂದರುಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತಹಕ್ಕು ನನಗೆ ಸಿಕ್ಕಿರಲಿಲ್ಲ. ಈಗ ನನಗೆ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಮತದಾನ ಮಾಡಿರುವ ಬಗ್ಗೆ ಹೆಮ್ಮೆ ಎನಿಸಿದೆ. ಮತದಾನ ಮಾಡುವುದಕ್ಕಾಗಿಯೇ ನಾನು ಬೆಂಗಳೂರಿನಿಂದ ಬಂದಿದ್ದೇನೆ.

- ಪ್ರಾಚಿ ಜೈನ್‌, ಮಂಡ್ಯಮತದಾನ ಮಾಡುವುದಕ್ಕೆ ಅವಕಾಶ ಸಿಕ್ಕಿರುವುದಕ್ಕೆ ಸಂತಸವಾಗುತ್ತಿದೆ. ಮತದಾನ ಹೊಸ ಅನುಭವವನ್ನು ನನಗೆ ನೀಡಿದೆ. ಜವಾಬ್ದಾರಿಯನ್ನು ಹೆಚ್ಚಿಸಿದೆ. ಮುಂದಿನ ಎಲ್ಲಾ ಚುನಾವಣೆಗಳಲ್ಲೂ ತಪ್ಪದೇ ನನ್ನ ಹಕ್ಕನ್ನು ಚಲಾಯಿಸುತ್ತೇನೆ.

- ಎಸ್‌.ರುಚಿತಾ, ಮಂಡ್ಯನಾನೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಿ ಮತದಾರರ ಗುರುತಿನ ಚೀಟಿ ಪಡೆದಿದ್ದೇನೆ. ಮೊದಲ ಮತ ಚಲಾಯಿಸಲು ಭಯ, ಆಶ್ಚರ್ಯ ಎರಡೂ ಆಗುತ್ತಿದೆ. ಉತ್ತಮರನ್ನು ಆಯ್ಕೆ ಮಾಡುವ ವಿಶ್ವಾಸದಿಂದ ಮತ ಹಕ್ಕು ಚಲಾಯಿಸಿದ್ದೇನೆ.

- ಬಿ.ಕೆ.ಶ್ವೇತಾ, ಬಸರಾಳುಮೊದಲ ಮತದಾನವಾದರೂ ಮತದಾನದ ಮಹತ್ವದ ಬಗ್ಗೆ ತಿಳಿದುಕೊಂಡಿದ್ದೇನೆ. ಉತ್ತಮರನ್ನುಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ ಎನ್ನುವುದು ಗೊತ್ತಿದೆ. ಅದೇ ಕಾರಣದಿಂದ ಮತದಾನ ಮಾಡಲು ಬಂದಿದ್ದೇನೆ. ಉತ್ತಮರಿಗೆ ಮತ ಹಾಕಿರುವ ವಿಶ್ವಾಸವಿದೆ.

-ಮೀರಾ, ಮಂಡ್ಯ