ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯವಾಗಲಿ

| Published : May 10 2024, 01:30 AM IST

ಸಾರಾಂಶ

ಪರಿಸರ ಸಂರಕ್ಷಣೆ, ನೃತ್ಯ, ಆಂಗ್ಲ ಭಾಷಾ ಕಲಿಕೆ, ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೊದಲಾದ ಅಮೌಲ್ಯ ಸಂಗತಿಗಳನ್ನು ಮಕ್ಕಳಿಗೆ ಕಲಿಸಿರುವುದು ನಿಜಕ್ಕೂ ಅನುಕರಣೀಯ.

ಹುಬ್ಬಳ್ಳಿ:

ನೈತಿಕ ಮೌಲ್ಯಗಳು ಕುಸಿಯುತ್ತಿರುವ ಈ ದಿನಗಳಲ್ಲಿ ಓಂ ನಗರದ ಕ್ಷೇಮಾಭಿವೃದ್ಧಿ ಸಂಘದವರು ತಮ್ಮ ಮೊದಲ ಪ್ರಯತ್ನದಲ್ಲೇ 70ಕ್ಕೂ ಹೆಚ್ಚು ಮಕ್ಕಳಿಗೆ ಅತ್ಯುತ್ತಮ ಸಂಸ್ಕಾರ ನೀಡಲು ಪ್ರಯತ್ನಿಸಿ ಯಶಸ್ಸು ಸಾಧಿಸಿರುವುದು ಪ್ರಶಂಸನೀಯ ಎಂದು ಉದ್ಯಮಿ ರಮೇಶ ಮಹದೇವಪ್ಪನವರ ಹೇಳಿದರು.ಅವರು ಉಣಕಲ್ಲಿನಲ್ಲಿರುವ ಓಂ ನಗರದ ಕ್ಷೇಮಾಭಿವೃದ್ಧಿ ಸಂಘದಲ್ಲಿ ಆಯೋಜಿಸಿದ್ದ ಚೈತ್ರದ ಚಿಗುರು-2024 ಬೇಸಿಗೆ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.

ನಗರದ ವಿವಿಧ ಭಾಗಗಳಿಂದ ಆಗಮಿಸಿದ ಹತ್ತಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಯೋಗ, ಶಿಸ್ತು, ಸುಗಮ ಸಂಗೀತ, ಕರಕುಶಲ ಕಲೆ, ಭಾಷಣ, ವರದಿ ವಾಚನ, ಪರಿಸರ ಸಂರಕ್ಷಣೆ, ನೃತ್ಯ, ಆಂಗ್ಲ ಭಾಷಾ ಕಲಿಕೆ, ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೊದಲಾದ ಅಮೌಲ್ಯ ಸಂಗತಿಗಳನ್ನು ಮಕ್ಕಳಿಗೆ ಕಲಿಸಿರುವುದು ನಿಜಕ್ಕೂ ಅನುಕರಣೀಯ. ಮಕ್ಕಳಿಗೆ ಮೊದಲು ಇಂತಹ ಸಂಸ್ಕಾರ ನೀಡುವ ಕಾರ್ಯ ಎಲ್ಲಡೆಯೂ ನಡೆಯುವಂತಾಗಲಿ ಎಂದರು.

ಲಿಂಗರಾಜ ನಗರ ಕೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಎಸ್. ಪಾಟೀಲ, ಬೇಸಿಗೆ ಶಿಬಿರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಎಲ್. ಸತ್ತೆನ್ನವರ ಮಾತನಾಡಿದರು. ಇದೇ ವೇಳೆ ಬೇಸಿಗೆ ಶಿಬಿರದ ಯಶಸ್ಸಿಗೆ ಸಹಕರಿಸಿದ ಹಲವು ದಾನಿಗಳನ್ನು ಸನ್ಮಾನಿಸಲಾಯಿತು.

ಈ ವೇಳೆ ಪ್ರೊ. ಎಂ.ಬಿ. ಕಂಬಳಿ, ಬಿ.ಎಸ್. ಸಾತಣ್ಣವರ, ಡಾ. ಎಸ್.ಎ. ಮೊಳೆಗಾಂವ, ಶಿವಕುಮಾರ ಗೌಡ, ಶ್ರೀಕಾಂತ ಹಾವನೂರ, ಡಾ. ಚೇತನ್ ಗಂಟೆಪ್ಪನವರ ಸೇರಿದಂತೆ ಹಲವರಿದ್ದರು.