ಯುವ ಸಮುದಾಯ ಇಂದು ದುಶ್ಚಟಕ್ಕೆ ಬಲಿಯಾಗುತ್ತಿದೆ-ಡಾ. ಜಾಹ್ನವಿ

| Published : May 10 2024, 01:30 AM IST

ಸಾರಾಂಶ

ಯುವ ಸಮುದಾಯ ಇಂದು ದುಶ್ಚಟಕ್ಕೆ ಬಲಿಯಾಗುತ್ತಿದೆ. ಈ ದೆಸೆಯಲ್ಲಿ ಸಾರ್ವಜನಿಕ ವಲಯದಲ್ಲಿ ಜಾಗೃತಿ ಅವಶ್ಯ ಎಂದು ರಾಜ್ಯ ಎನ್ ಕೆ ಫೌಂಡೇಶನ್ ಸಂಯೋಜಕರಾದ ಡಾ. ಜಾಹ್ನವಿ ಅಭಿಪ್ರಾಯಪಟ್ಟರು.

ಶಿಗ್ಗಾವಿ: ಯುವ ಸಮುದಾಯ ಇಂದು ದುಶ್ಚಟಕ್ಕೆ ಬಲಿಯಾಗುತ್ತಿದೆ. ಈ ದೆಸೆಯಲ್ಲಿ ಸಾರ್ವಜನಿಕ ವಲಯದಲ್ಲಿ ಜಾಗೃತಿ ಅವಶ್ಯ ಎಂದು ರಾಜ್ಯ ಎನ್ ಕೆ ಫೌಂಡೇಶನ್ ಸಂಯೋಜಕರಾದ ಡಾ. ಜಾಹ್ನವಿ ಅಭಿಪ್ರಾಯಪಟ್ಟರು.

ಅವರು ನಗರದ ಶ್ರೀ ರಂಭಾಪುರಿ ಪದವಿ ಕಾಲೇಜಿನಲ್ಲಿ ನಡೆದ ಮಹಿಳಾ ಒಕ್ಕೂಟದ ಕಾರ್ಯಗಾರದಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಯುವಕ ಯುವತಿಯರು ಇಂದು ದುಶ್ಚಟದಿಂದ ದೂರ ಉಳಿಯಬೇಕು ಹಾಗೂ ಸಮುದಾಯದಲ್ಲಿ ಕ್ಯಾನ್ಸರ್ ಮಾರಕ ರೋಗದ ಕುರಿತು ಜಾಗೃತಿ ಹೊಂದಬೇಕು ಎಂದು ಅಭಿಪ್ರಾಯಪಟ್ಟರು. ಅವರು ಯುವ ಸಮುದಾಯ ಎಚ್ಚೆತ್ತುಕೊಳ್ಳುವ ಜೊತೆಗೆ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕು, ಈಗ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಅವುಗಳು ಸಾರ್ಥಕ ಆಗಬೇಕಾದರೆ ಯುವಕರು ಗುಟ್ಕಾ, ಮದ್ಯಪಾನ ಹಾಗೂ ಡ್ರಗ್ಸ್‌ ದುಶ್ಚಟಗಳಿಂದ ದೂರ ಉಳಿಯಬೇಕು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಬಿ.ವಾಯ್. ತೊಂಡಿಹಾಳ್ ಅವರು ಮಾತನಾಡಿ, ನಮ್ಮ ಯುವಕರು ಉತ್ತಮ ಸಂಸ್ಕಾರವನ್ನು ಹೊಂದಬೇಕು. ಬಾಲ್ಯದಲ್ಲಿ ಅಂತ ಪರಿಸರದಲ್ಲಿ ನಾವು ಮಕ್ಕಳನ್ನು ಬೆಳೆಸಬೇಕು .ಆರೋಗ್ಯವೇ ಭಾಗ್ಯ ಎಂದು ಹೇಳಿ ಕ್ಯಾನ್ಸರ್ ಕುರಿತು ಅರಿವು ಅವಶ್ಯ ಎಂದರು. ಈ ಪ್ರೊ. ಸುರೇಶ್ ಪ್ರೊ. ಜಗದೀಶ್ ವಿದ್ಯಾವತಿ ಹಿರೇಮಠ ಹಾಗೂ ಪ್ರೊ . ಭಾಗ್ಯಾ ಮೊನುರು ಅವರು ಪಾಲ್ಗೊಂಡಿದ್ದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು ಹಾಗೂ ಮಹಿಳಾ ಒಕ್ಕೂಟದ ಕಾರ್ಯಧ್ಯಕ್ಷರು ಪ್ರೊ. ಬಿಂದಿಯಾ ಎನ್.ಕೆ. ಸ್ವಾಗತಿಸಿದರು. ಆಯ್.ಕ್ಯೂಎ.ಸಿ ಸಹಸಯೋಜಕರಾದ ಪ್ರೊ. ಹೂಗಾರ್ತಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಕಾಲೇಜಿನ ಆಯ್.ಕ್ಯೂಎ.ಸಿ ನಗರದ ಡಾ. ಶ್ರೀಶೈಲ ಹುದ್ದಾರ್ ಅವರು ವೇದಿಕೆಯಲ್ಲಿದ್ದರು. ಪ್ರೊ. ಚಾಂದ್ ಬೀಬಿ ನದಾಫ್ ಅವರು ಪರಿಚಯಿಸಿದರು. ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಸೌಂದರ್ಯ ವಂದನೆ ಸಲ್ಲಿಸಿದರು.