ಕಾರಜೋಳ, ಚಂದ್ರಪ್ಪ ಭವಿಷ್ಯ ಸ್ಟ್ರಾಂಗ್‌ರೂಂನಲ್ಲಿ ಭದ್ರ

| Published : Apr 28 2024, 01:24 AM IST

ಕಾರಜೋಳ, ಚಂದ್ರಪ್ಪ ಭವಿಷ್ಯ ಸ್ಟ್ರಾಂಗ್‌ರೂಂನಲ್ಲಿ ಭದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆಯ ಚಿತ್ರದುರ್ಗ ಕ್ಷೇತ್ರಕ್ಕೆ ನಡೆದ ಚುನಾವಣೆಯ ಫಲಿತಾಂಶ ಇವಿಎಂನಲ್ಲಿ ಅಡಗಿದ್ದು ಚಿತ್ರದುರ್ಗದ ಸರ್ಕಾರ ವಿಜ್ಞಾನ ಕಾಲೇಜು ಸ್ಟ್ರಾಂಗ್ ರೂಂ ನಲ್ಲಿ ಜೂ.4ರವರೆಗೆ ಭದ್ರವಾಗಿ ಇಡಲಾಗಿದೆ. ಬಿಜೆಪಿ ಅಭ್ಯರ್ಥಿ ಕಾರಜೋಳ, ಕೈ ಅಭ್ಯರ್ಥಿ ಚಂದ್ರಪ್ಪ ಅವರುಗಳ ರಾಜಕೀಯ ಭವಿಷ್ಯ ಏನಾಗಬಹದು ಎಂಬ ಕುತೂಹಲ ಇನ್ನೊಂದು ತಿಂಗಳುಗಳವರೆಗೆ ಮಂದುವರಿಯಲಿದೆ.

ಚಿತ್ರದುರ್ಗ: ಲೋಕಸಭೆಯ ಚಿತ್ರದುರ್ಗ ಕ್ಷೇತ್ರಕ್ಕೆ ನಡೆದ ಚುನಾವಣೆಯ ಫಲಿತಾಂಶ ಇವಿಎಂನಲ್ಲಿ ಅಡಗಿದ್ದು ಚಿತ್ರದುರ್ಗದ ಸರ್ಕಾರ ವಿಜ್ಞಾನ ಕಾಲೇಜು ಸ್ಟ್ರಾಂಗ್ ರೂಂ ನಲ್ಲಿ ಜೂ.4ರವರೆಗೆ ಭದ್ರವಾಗಿ ಇಡಲಾಗಿದೆ. ಬಿಜೆಪಿ ಅಭ್ಯರ್ಥಿ ಕಾರಜೋಳ, ಕೈ ಅಭ್ಯರ್ಥಿ ಚಂದ್ರಪ್ಪ ಅವರುಗಳ ರಾಜಕೀಯ ಭವಿಷ್ಯ ಏನಾಗಬಹದು ಎಂಬ ಕುತೂಹಲ ಇನ್ನೊಂದು ತಿಂಗಳುಗಳವರೆಗೆ ಮಂದುವರಿಯಲಿದೆ.

ಲೋಕಸಭೆ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೂ ಪ್ರತ್ಯೇಕ ಸ್ಟ್ರಾಂಗ್ ರೂಮ್‌ ವ್ಯವಸ್ಥೆ ಮಾಡಿ ಆಯಾ ವಿಧಾನಸಭೆ ಕ್ಷೇತ್ರದ ಇವಿಎಂ ಯಂತ್ರಗಳ ಸಾಲಾಗಿ ಜೋಡಿಸಲಾಗಿದೆ. ಮೂರು ಲೇಯರ್‌ನಲ್ಲಿ ಸ್ಟ್ರಾಂಗ್ ರೂಮ್ ಭದ್ರತೆ ಆಯೋಜನೆ ಮಾಡಲಾಗಿದೆ. ಮೊದಲ ಲೇಯರ್‌ನಲ್ಲಿ ಸಿಆರ್‌ಪಿಎಫ್, ಎರಡನೇಯದು ಪೊಲೀಸ್ ಆನ್ಫೋರ್ಸ್ ಹಾಗೂ ಮೂರನೆಯ ರಕ್ಷಣೆಯಾಗಿ ಜಿಲ್ಲಾ ಪೊಲೀಸರ ಆಯೋಜನೆ ಮಾಡಲಾಗಿದೆ. ಎಲ್ಲಾ ಸ್ಟ್ರಾಂಗ್ ರೂಮ್‌ಗೆ ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು 84 ಸಿಸಿ ಟಿವಿಗಳಿವೆ.

73.30ರಷ್ಟು ಮತದಾನ

ಚಿತ್ರದುರ್ಗ ಲೋಕಸಭೆಗೆ ಏ.26ರಂದು ಶುಕ್ರವಾರ ಜರುಗಿದ ಚುನಾವಣೆಯಲಯ್ಲಿ ಶೇ.73.30ರಷ್ಟು ಮತದಾನವಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 18,56,876 ಮತದಾರರಲ್ಲಿ 13,61,031 ಮತದಾರರು ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.75.75ರಷ್ಟು ಮತದಾನವಾಗಿದೆ. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ 125730 ಪುರುಷ, 124968 ಮಹಿಳೆ, 13 ಇತರೆ ಮತದಾರರು ಸೇರಿ ಒಟ್ಟು 250711 ಮತದಾರರು ಇದ್ದಾರೆ. ಇದರಲ್ಲಿ 96329 ಪುರುಷ, 93569 ಮಹಿಳೆ, 7 ಇತರೆ ಮತದಾರರು ಸೇರಿ 189905 ಮತದಾರರು ಮತ ಚಲಾಯಿಸಿದ್ದಾರೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.72.72 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 111280 ಪುರುಷ, 113160 ಮಹಿಳೆ ಹಾಗೂ 7 ಇತರೆ ಸೇರಿ ಒಟ್ಟು 224447 ಮತದಾರರು ಇದ್ದಾರೆ. ಇದರಲ್ಲಿ 81990 ಪುರುಷ, 81225 ಮಹಿಳೆ ಹಾಗೂ 1 ಇತರೆ ಸೇರಿ 163216 ಮತದಾರರು ಮತಚಲಾಯಿಸಿದ್ದಾರೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.70.69 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 131358 ಪುರುಷ, 136415 ಮಹಿಳೆ ಹಾಗೂ 41 ಇತರೆ ಸೇರಿ ಒಟ್ಟು 267814 ಮತದಾರರು ಇದ್ದಾರೆ. ಇದರಲ್ಲಿ 94999 ಪುರುಷ, 94302 ಮಹಿಳೆ ಹಾಗೂ 20 ಇತರೆ ಸೇರಿ ಒಟ್ಟು 189321 ಮತದಾರರು ಮತಚಲಾಯಿಸಿದ್ದಾರೆ.

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.71.53 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 122532 ಪುರುಷ, 125406 ಮಹಿಳೆ ಹಾಗೂ 16 ಇತರೆ ಸೇರಿ ಒಟ್ಟು 247954 ಮತದಾರರು ಇದ್ದಾರೆ. ಇದರಲ್ಲಿ 88988 ಪುರುಷ, 88354 ಮಹಿಳೆ ಹಾಗೂ 8 ಇತರೆ ಸೇರಿ ಒಟ್ಟು 177350 ಮತದಾರರು ಮತಚಲಾಯಿಸಿದ್ದಾರೆ.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.75.45 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 118806 ಪುರುಷ, 119554 ಮಹಿಳೆ ಹಾಗೂ 10 ಇತರೆ ಸೇರಿ ಒಟ್ಟು 238370 ಮತದಾರರು ಇದ್ದಾರೆ. ಇದರಲ್ಲಿ 92421 ಪುರುಷ, 87421 ಮಹಿಳೆ ಹಾಗೂ 2 ಇತರೆ ಮತದಾರರು ಸೇರಿ ಒಟ್ಟು 179844 ಮತದಾರರು ಮತಚಲಾಯಿಸಿದ್ದಾರೆ.

ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.74ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 100439 ಪುರುಷ, 100418 ಮಹಿಳೆ ಸೇರಿ ಒಟ್ಟು 200857 ಮತದಾರರು ಇದ್ದಾರೆ. ಇದರಲ್ಲಿ 75388 ಪುರುಷ, 73256 ಮಹಿಳೆ ಸೇರಿ ಒಟ್ಟು 148644 ಮತದಾರರು ಮತಚಲಾಯಿಸಿದ್ದಾರೆ.

ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಶೇ.70.52ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 100873 ಪುರುಷ, 97358 ಮಹಿಳೆ ಹಾಗೂ 9 ಇತರೆ ಸೇರಿ ಒಟ್ಟು 198240 ಮತದಾರರು ಇದ್ದಾರೆ. ಇದರಲ್ಲಿ 70997 ಪುರುಷ, 68801 ಮಹಿಳೆಯರು ಸೇರಿ ಒಟ್ಟು 139798 ಮತದಾರರು ಮತಚಲಾಯಿಸಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶೇ.75.70ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 114525 ಪುರುಷ, 113950 ಮಹಿಳೆ ಹಾಗೂ 8 ಇತರೆ ಸೇರಿ ಒಟ್ಟು 228483 ಮತದಾರರು ಇದ್ದಾರೆ. ಇದರಲ್ಲಿ 87384 ಪುರುಷ, 85568 ಮಹಿಳೆ ಹಾಗೂ 1 ಇತರೆ ಸೇರಿ ಒಟ್ಟು 172953 ಮತದಾರರು ಮತಚಲಾಯಿಸಿದ್ದಾರೆ.