ಎಸ್ಸೆಸ್ಸೆಲ್ಸಿ ಫಲಿತಾಂಶ: 4ನೇ ಸ್ಥಾನಕ್ಕೆ ಕುಸಿದ ಜಗಳೂರು ತಾಲೂಕು

| Published : May 10 2024, 01:31 AM IST / Updated: May 10 2024, 01:32 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ: 4ನೇ ಸ್ಥಾನಕ್ಕೆ ಕುಸಿದ ಜಗಳೂರು ತಾಲೂಕು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 5 ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದ ಜಗಳೂರು ತಾಲೂಕು ಈ ಬಾರಿ ಶೇ.70.1 ಫಲಿತಾಂಶ ದಾಖಲಿಸುವ ಮೂಲಕ 4ನೇ ಸ್ಥಾನಕ್ಕೆ ಕುಸಿದಿದೆ.

- ಈ ಬಾರಿ ಶೇ.70.1 ಫಲಿತಾಂಶ ದಾಖಲು । 5 ವರ್ಷಗಳಿಂದ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿ ಜಗಳೂರು- - - ಕನ್ನಡ ಪ್ರಭವಾರ್ತೆ ಜಗಳೂರು

ಕಳೆದ 5 ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದ ಜಗಳೂರು ತಾಲೂಕು ಈ ಬಾರಿ ಶೇ.70.1 ಫಲಿತಾಂಶ ದಾಖಲಿಸುವ ಮೂಲಕ 4ನೇ ಸ್ಥಾನಕ್ಕೆ ಕುಸಿದಿದೆ.

ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 5 ವರ್ಷಗಳಿಂದ ಜಿಲ್ಲೆಯಲ್ಲಿಯೇ ತಾಲೂಕು ಪ್ರಥಮ ಸ್ಥಾನ ಬಿಟ್ಟುಕೊಟ್ಟಿರಲಿಲ್ಲ. ಆದರೆ, 2023-24ನೇ ಸಾಲಿನ ಫಲಿತಾಂಶದಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ.

ಪರೀಕ್ಷೆಗೆ ಕುಳಿತಿದ್ದ 1134 ಪುರುಷ ವಿದ್ಯಾರ್ಥಿಗಳಲ್ಲಿ 699 ಮಂದಿ ಪಾಸ್ ಆಗಿದ್ದಾರೆ. 1187 ವಿದ್ಯಾರ್ಥಿನಿಯರಲ್ಲಿ 926 ಮಂದಿ ತೇರ್ಗಡೆಯಾಗಿದ್ದಾರೆ. ಶೇ.70.1ರಷ್ಟು ಫಲಿತಾಂಶ ಲಭ್ಯವಾಗಿದೆ. ಫಲಿತಾಂಶ ಇಳಿಕೆ ವಿಚಾರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ನಿರಾಶೆ ಮೂಡಿಸಿದೆ.

ಟಾಪ್ ವಿದ್ಯಾರ್ಥಿಗಳು:

ಜಗಳೂರು ಪಟ್ಟಣದ ಎನ್ಎಂಕೆ ಶಾಲೆಯ ಜೆ.ಎನ್. ಸಿಂಚನಾ (614), ಎನ್‌.ಆರ್. ಸಂಜನಾ (605) ಮತ್ತು ಎಚ್.ಬಿ. ದೀಪಿಕಾ (605) ಅಂಕಗಳನ್ನು ಗಳಿಸುವ ಮೂಲಕ ಶೇ.91ರಷ್ಟು ಫಲಿತಾಂಶ ಪಡೆದಿದ್ದಾರೆ.

ಪಟ್ಟಣದ ಜೆ.ಎಂ. ಇಮಾಂ ಸ್ಮಾರಕ ಶಾಲೆಗೆ ಶೇ.93.47 ಫಲಿತಾಂಶ ಬಂದಿದೆ. ಎಂ.ಜಿ. ಸಿಂಚನಾ (611), ಮಹೇಶ್ (608), ಕೆ.ಟಿ.ಅಮೃತಾ 600 ಅಂಕ ಪಡೆಯುವ ಮೂಲಕ ಪರೀಕ್ಷೆಗೆ ಕುಳಿತ 46 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ, 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯೊಂದಿಗೆ 43 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

ಬಾಲಭಾರತಿ ಶಾಲೆಗೆ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಒಟ್ಟು 33 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆಕಾಂಕ್ಷ (607), ವೈಷ್ಣವಿ (580) ಅಂಕ ಗಳಿಸುವ ಮೂಲಕ ಶೇ.86ರಷ್ಟು ಫಲಿತಾಂಶ ಬಂದಿದೆ. ದಿವ್ಯಭಾರತಿ ಶಾಲೆಯಲ್ಲಿ ಶೇ.45ರಷ್ಟು ಫಲಿತಾಂಶ ಬಂದಿದೆ. ಕರುಣಾ (424), ಶಶಿಕಲಾ (412) ಅಂಕ ಗಳಿಸಿದ್ದಾರೆ. ಆರ್‌ವಿಎಸ್ ಶಾಲೆಯ ಸೌಮ್ಯಾ (596), ಹರ್ಷಿತಾ (590), ಮೊಹಮದ್ ಶೋಯಬ್ (562) ಅಂಕ ಗಳಿಸಿದ್ದಾರೆ.

3 ಶಾಲೆಗಳಿಗೆ 100 ಅಂಕ:

ಜಗಳೂರು ತಾಲೂಕಿನ ಮುಗ್ಗಿದರಾಗಿಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಉದ್ದಗಟ್ಟದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮತ್ತು ದಿದ್ದಿಗೆಯ ರೂರಲ್ ಪಬ್ಲಿಕ್ ಶಾಲೆಗಳಿಗೆ ಶೇ.100ಕ್ಕೆ ನೂರು ಫಲಿತಾಂಶ ಬಂದಿದೆ.

ಕಡಿಮೆ ಅಂಕ ಗಳಿಸಿದ ಶಾಲೆಗಳು:

ದೇವಿಕೆರೆಯ ಸರ್ಕಾರಿ ಶಾಲೆ (ಶೇ.18.18), ಉಜ್ಜಿನಿ ಪ್ರೌಢಶಾಲೆ (ಶೇ29), ರಸ್ತೆ ಮಾಚಿಕೆರೆಯ ಶಾಲೆ (ಶೇ.37) ರಷ್ಟು ಕಡಿಮೆ ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈ.ಹಾಲಮೂರ್ತಿ ಮಾಹಿತಿ ನೀಡಿದ್ದಾರೆ.

- - -

ಕೋಟ್‌ಕಳೆದ 5 ವರ್ಷಗಳಿಂದಲೂ ಜಗಳೂರು ತಾಲೂಕು ಪ್ರಥಮ ಸ್ಥಾನದಲ್ಲಿತ್ತು. ಆದರೆ, ಈ ಬಾರಿ ಫಲಿತಾಂಶದಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿರುವುದು ಬೇಸರ ತಂದಿದೆ. ವಿದ್ಯಾರ್ಥಿಗಳಿಗಾಗಿ ಇನ್ನೂ ಎರಡು ಪರೀಕ್ಷೆಗಳನ್ನು ಶಿಕ್ಷಣ ಇಲಾಖೆ ಆಯೋಜನೆ ಮಾಡಿದೆ. ಫೇಲ್ ಆದ ವಿದ್ಯಾರ್ಥಿಗಳು ಎದೆಗುಂದದೇ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕು

- ಈ.ಹಾಲಮೂರ್ತಿ, ಇಒ, ತಾಪಂ, ಜಗಳೂರು

- - - -1ಜೆಎಲ್ಆರ್ಚಿತ್ರ1: ಜೆ.ಎನ್.ಸಿಂಚನಾ

-1ಜೆಎಲ್ಆರ್ಚಿತ್ರ2: ಎಂ.ಜಿ.ಸಿಂಚನಾ

-1ಜೆಎಲ್ಆರ್ಚಿತ್ರ3: ಅಮೂಲ್ಯ