ಶರಣಬಸವ ಪಬ್ಲಿಕ್‌ ಶಾಲೆ ಸಾಧನೆ

| Published : May 10 2024, 01:31 AM IST

ಸಾರಾಂಶ

7 ವಿದ್ಯಾರ್ಥಿಗಳು ಅಗ್ರಶ್ರೇಣಿ, 25 ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ತಾಲೂಕಿನ ಗೋರನಳ್ಳಿ ಸಮೀಪದ ಶರಣಬಸವ ಪಬ್ಲಿಕ್‌ ಶಾಲೆಯು ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ.

ಶಾಲೆಯ 7 ವಿದ್ಯಾರ್ಥಿಗಳು ಅಗ್ರಶ್ರೇಣಿ, 25 ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಾಲೆಯ ಎಸ್ಸೆಸ್ಸೆಲ್ಸಿಯ ಮೂರನೇ ಬ್ಯಾಚ್‌ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ. ರಿಶಿಕೇಶ ಸಂಜೀವಕುಮಾರ ಶೇ. 96.16, ಅನುಶ್ರೀ ಪಾಂಡುರಂಗ ಪಾಂಚಾಳ ಶೇ. 91.52, ಪ್ರತೀಕ್‌ ಸಿದ್ದಯ್ಯ ಸ್ವಾಮಿ ಶೇ. 90.88, ಶೃತಿ ಸಿದ್ರಾಮ ಶೇ. 90.88, ಉದಯ ಚನ್ನವೀರಪ್ಪ ಬುಕ್ಕಾ ಶೇ. 89.76, ವಿನಾಯಕ ದೇವೇಂದ್ರ ಶೇ. 86.24, ಗುರುಪ್ರಸಾದ್‌ ಗಾಂಧಿ ಶೇ. 85.44 ರಷ್ಟು ಅಂಕ ಪಡೆದಿದ್ದಾರೆ ಎಂದು ಶಾಲೆಯ ಪ್ರಾಚಾರ್ಯ ಡಾ. ಸತೀಶ ಬಿ. ಪ್ರತಾಪುರ ತಿಳಿಸಿದ್ದಾರೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ, ಮಾತೆ ಡಾ. ದಾಕ್ಷಾಯಿಣಿ, ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ಚಿ. ದೊಡ್ಡಪ್ಪ ಅಪ್ಪ ಅವರ ಮಾರ್ಗದರ್ಶನದಲ್ಲಿ ನೀಡಿದ ಗುಣಮಟ್ಟದ ಶಿಕ್ಷಣದಿಂದಾಗಿ ಶಾಲೆಗೆ ಉತ್ತಮ ಫಲಿತಾಂಶ ಬಂದಿದೆ ಎಂದು ಹೇಳಿದ್ದಾರೆ.

ಬೀದರ್‌ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣ ನೀಡುವುದು ಶರಣಬಸವೇಶ್ವರ ಪಬ್ಲಿಕ್‌ ಶಾಲೆಯ ಧ್ಯೇಯವಾಗಿದೆ. ಶಾಲೆಯ ಮೂರನೇ ಬ್ಯಾಚ್‌ ವಿದ್ಯಾರ್ಥಿಗಳ ಸಾಧನೆ ಪ್ರಶಂಶನೀಯ.

ಡಾ. ಶರಣಬಸವಪ್ಪ ಅಪ್ಪ, ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ