ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್, ಉದ್ಯೋಗಾವಕಾಶ ಕಾರ್ಯಕ್ರಮ

| Published : May 09 2024, 01:02 AM IST

ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್, ಉದ್ಯೋಗಾವಕಾಶ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಹೂಡಿಕೆ ಬ್ಯಾಂಕಿನ ಪ್ರಕ್ರಿಯೆ ಮತ್ತು ಉದ್ಯೋಗವಕಾಶಗಳನ್ನು ಅರಿತು ಪಡೆದುಕೊಳ್ಳುವ ಅಗತ್ಯತೆ ಇದೆ ಎಂದು ಪ್ರಾಧ್ಯಾಪಕ ಅಭಯ್‌ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಹೂಡಿಕೆ ಬ್ಯಾಂಕಿಂಗ್, ಸರ್ಕಾರ ನಿಗಮ ಮತ್ತು ಸಂಸ್ಥೆಗಳಿಗೆ ಅಗತ್ಯವಿರುವ ಬಂಡವಾಳ ಸಂಗ್ರಹಣೆ ವಿಲೀನಗಳು ಮತ್ತು ಸ್ವಾಧೀನಗಳ ಸೇವೆಯನ್ನ ಒದಗಿಸುವ ಕಾರ್ಯವನ್ನು ವಹಿಸುತ್ತದೆ. ವಿದ್ಯಾರ್ಥಿಗಳು ಈ ಹೂಡಿಕೆ ಬ್ಯಾಂಕಿನ ಪ್ರಕ್ರಿಯೆ ಮತ್ತು ಉದ್ಯೋಗಾವಕಾಶಗಳನ್ನು ಅರಿತು, ಪಡೆದುಕೊಳ್ಳುವ ಅಗತ್ಯತೆ ಇದೆ ಎಂದು ಬಂಟಕಲ್ಲಿನ ಶ್ರೀ ಮದ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಅಂಡ್ ಮ್ಯಾನೇಜ್ಮೆಂಟ್ ಇದರ ಪ್ರಾಧ್ಯಾಪಕ ಪ್ರೊ. ಅಭಯ್ ಕುಮಾರ್ ಹೇಳಿದರು.

ಅವರು ಇಲ್ಲಿನ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗ, ಐ.ಕ್ಯೂ.ಎ.ಸಿ. ಹಾಗೂ ಪ್ಲೇಸ್ಮೆಂಟ್ ಘಟಕಗಳ ಸಹಯೋಗದೊಂದಿಗೆ ಆಯೋಜಿದ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಮತ್ತು ಉದ್ಯೋಗಾವಕಾಶ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಸುರೇಶ್ ರೈ ಕೆ. ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಾಗಾರದ ನಿರ್ದೇಶಕ ಸೂರಜ್ ವಿದ್ಯಾರ್ಥಿಗಳಿಗೆ ತರಬೇತಿಯೊಂದಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.

ವ್ಯವಹಾರ ಅಧ್ಯಯನ ವಿಭಾಗ ಮುಖ್ಯಸ್ಥ ಪ್ರೊ. ರಘು ನಾಯ್ಕ, ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶದ ಸಂಚಾಲಕಿ ಡಾ. ಮೇವಿ ಮಿರಾಂದ, ಪ್ಲೇಸ್ಮೆಂಟ್ ಸಂಚಾಲಕ ದಿನೇಶ್ ಎಂ., ಉಮೇಶ್ ಪೈ, ಡಾ. ಗೀತಾ ಎನ್., ಉಪನ್ಯಾಸಕರಾದ ಸ್ಮಿತಾ ಹೆಗ್ಡೆ, ನಮಿತಾ ಹೆಗ್ಡೆ, ಧನ್ಯ, ಆರತಿ, ಮುಂತಾದವರು ಉಪಸ್ಥಿತರಿದ್ದರು.