ಕನ್ನಡ ಬೆಳೆಸಲು ಹೋಬಳಿ ಮಟ್ಟದ ಸಮ್ಮೇಳನ

| Published : May 08 2024, 01:06 AM IST

ಸಾರಾಂಶ

ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗದೆ ಎಲ್ಲರೂ ಕನ್ನಡವನ್ನು ಬೆಳೆಸಬೇಕು. ಅನ್ಯ ಭಾಷೆ ಮಾತನಾಡಿದರೂ ನಮ್ಮ ಭಾಷೆಯ ಮೇಲೆ ಪ್ರೀತಿ ಅಭಿಮಾನ ಹೆಚ್ಚಾಗುತ್ತಲೇ ಇರಬೇಕು

ಕನ್ನಡಪ್ರಭ ವಾರ್ತೆ ಮುಳಬಾಗಿಲುತಾಲೂಕು ಹಾಗೂ ಹೋಬಳಿ ಮಟ್ಟದ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಕನ್ನಡವನ್ನು ಅಭಿವೃದ್ಧಿಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎನ್. ಗೋಪಾಲಗೌಡ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಕಸಾಪ, ಮುಳಬಾಗಿಲು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಗಡಿ ಪ್ರದೇಶಗಳಲ್ಲಿ ಕನ್ನಡ ಉಳಿಸಿ ಬೆಳೆಸಲು ಈಗಾಗಲೇ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದ ಸಮ್ಮೇಳನಗಳನ್ನು ನಡೆಸಲಾಗುತ್ತಿವೆ ಎಂದು ತಿಳಿಸಿದರು.ಗಡಿ ಭಾಗದಲ್ಲಿ ಕನ್ನಡ ಪ್ರೋತ್ಸಾಹಿಸಿಕಸಾಪ ಗೌರವ ಕಾರ್ಯದರ್ಶಿ ಆರ್. ಶಂಕರಪ್ಪ ಮಾತನಾಡಿ, ಗಡಿಗಳಲ್ಲಿ ಕನ್ನಡ ಉಳಿಸಲು ಸುಮಾರು ವರ್ಷದಿಂದ ಕನ್ನಡ ಭಾಷೆಯ ಪುಸ್ತಕಗಳನ್ನು ಬರೆಯುವ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು, ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗದೆ ಎಲ್ಲರೂ ಕನ್ನಡವನ್ನು ಬೆಳೆಸಬೇಕು. ಅನ್ಯ ಭಾಷೆ ಮಾತನಾಡಿದರೂ ನಮ್ಮ ಭಾಷೆಯ ಮೇಲೆ ಪ್ರೀತಿ ಅಭಿಮಾನ ಹೆಚ್ಚಾಗುತ್ತಲೇ ಇರಬೇಕು ಎಂದು ಹೇಳಿದರು.ಕನ್ನಡ ಶ್ರೀಮಂತ

ಪ್ರಾಂಶುಪಾಲ ಜಿ. ಮುನಿವೆಂಕಟಪ್ಪ ಮಾತನಾಡಿ, ಗಡಿಯಲ್ಲಿ ತೆಲುಗು ಹಾಗೂ ತಮಿಳು ಭಾಷೆ ಮಧ್ಯೆ ಕನ್ನಡ ಸಿಲುಕಿ ನಲುಗುತ್ತಿತ್ತು. ಆದರೆ ಇಂದು ಎಲ್ಲಾ ಕಡೆ ಕನ್ನಡ ಮಾತನಾಡುತ್ತಾ ನಾಡು ನುಡಿಯ ಶ್ರೀಮಂತಿಕೆ ಹೆಚ್ಚಾಗುತ್ತಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎನ್. ಜಗದೀಶ್, ಎ.ವಿ.ರೆಡ್ಡಿ, ಮುರಳಿ ಕನ್ನಡಿಗ, ನಂಗಲಿ ನಾಗರಾಜ್, ಹರೀಶ್ ಕುಮಾರ್, ಕೆ.ಆರ್. ವೆಂಕಟೇಶ್, ತ್ಯಾಗರಾಜ್, ವಿನಯ್, ಮಹೇಶ್, ನಟರಾಜ್, ಹರೀಶ್ ಇದ್ದರು.