ಬಾಳೆಹೊನ್ನೂರು ಸುತ್ತಮುತ್ತ ಧಾರಾಕಾರ ಮಳೆ

| Published : May 10 2024, 01:32 AM IST

ಸಾರಾಂಶ

ಬಾಳೆಹೊನ್ನೂರು, ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಭಾಗಗಳಲ್ಲಿ ಗುರುವಾರ ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ಭರ್ಜರಿಯಾಗಿ ಮಳೆ ಸುರಿದಿದೆ.

ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ । 3ಗಂಟೆಗೂ ಹೆಚ್ಚುಕಾಲ ವರುಣಾರ್ಭಟ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಭಾಗಗಳಲ್ಲಿ ಗುರುವಾರ ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ಭರ್ಜರಿಯಾಗಿ ಮಳೆ ಸುರಿದಿದೆ.ಮಧ್ಯಾಹ್ನ ಮೂರು ಗಂಟೆ ವೇಳೆಗೆ ಗುಡುಗು, ಗಾಳಿ ಸಹಿತ ಆರಂಭಗೊಂಡ ಮಳೆ ಧಾರಾಕಾರವಾಗಿ ಸುರಿದಿದೆ. ಕಳೆದ ಎರಡು ದಿನಗಳಿಂದ ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶದ ಕೆಲವೆಡೆಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆ ಬಂದಿತ್ತು. ಗುರುವಾರ ಬೆಳಗ್ಗಿನಿಂದಲೇ ಸೆಖೆಯ ವಾತಾವರಣ ಅಧಿಕವಾಗಿದ್ದು, ಮಧ್ಯಾಹ್ನವಾಗುತ್ತಲೇ ಮೋಡ ಕವಿದ ವಾತಾವರಣ ಉಂಟಾಗಿ ಮಳೆ ಆರಂಭಗೊಂಡಿತು.ಕಳೆದ ಕೆಲ ದಿನಗಳ ಹಿಂದೆ ಬಂದು ಹೋಗಿದ್ದ ಮಳೆ ಕಾಫಿ, ಅಡಕೆ ತೋಟಗಳಿಗೆ ತಂಪನ್ನು ನೀಡಿತ್ತು. ಪುನಃ ಅದೇ ರೀತಿಯ ಮಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಗುರುವಾರ ಸುರಿದ ಮಳೆ ಅನುಕೂಲ ಉಂಟು ಮಾಡಿದೆ. ಅಧಿಕ ಬಿಸಿಲಿನಿಂದ ಸೊರಗಿ ಹೋಗಿದ್ದ ಕಾಫಿ ಗಿಡ, ಅಡಕೆ ಮರಗಳಿಗೆ ಮಳೆ ಚೇತರಿಕೆ ನೀಡಿದೆ. ಮಳೆಗೆ ಯಾವುದೇ ಭಾಗದಲ್ಲಿ ಅನಾಹುತಗಳು ಆಗಿಲ್ಲ. ೦೯ಬಿಹೆಚ್‌ಆರ್ ೩:

ಬಾಳೆಹೊನ್ನೂರು ಪಟ್ಟಣದ ಮಾರಿಗುಡಿ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಮಳೆ ಸುರಿದಾಗ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದು.೦೯ಬಿಹೆಚ್‌ಆರ್ ೪: ಬಾಳೆಹೊನ್ನೂರು ಸಮೀಪದ ಮಾಗುಂಡಿ ಬಳಿ ಮಳೆ ಗಾಳಿಗೆ ಮರವೊಂದು ರಸ್ತೆಗೆ ಬಿದ್ದು ಕೆಲ ಕಾಲ ಅಡಚಣೆ ಉಂಟಾಗಿತ್ತು.