ಹಳೇಬೀಡು ಕೆಪಿಎಸ್‌ ಸರ್ಕಾರಿ ಶಾಲೆಯಲ್ಲಿ ಬೇಸಿಗೆ ರಜೆಯಲ್ಲೂ ಬಿಸಿಯೂಟ

| Published : May 09 2024, 01:01 AM IST / Updated: May 09 2024, 01:02 AM IST

ಹಳೇಬೀಡು ಕೆಪಿಎಸ್‌ ಸರ್ಕಾರಿ ಶಾಲೆಯಲ್ಲಿ ಬೇಸಿಗೆ ರಜೆಯಲ್ಲೂ ಬಿಸಿಯೂಟ
Share this Article
  • FB
  • TW
  • Linkdin
  • Email

ಸಾರಾಂಶ

ಹಳೇಬೀಡಿನ ಕೆಪಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಹಾಸನದ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಟಿ. ಜವರೇಗೌಡ ಭೇಟಿ ನೀಡಿ ಶಾಲೆಯ ಬಿಸಿಯೂಟದ ಬಗ್ಗೆ ಚರ್ಚಿಸಿದರು.

ಕೆಪಿಎಸ್‌ ಶಾಲೆಗೆ ಜಿ.ಶಿಕ್ಷಣ ಇಲಾಖೆಯ ಜವರೇಗೌಡ ಭೇಟಿ

ಹಳೇಬೀಡು: ಇಲ್ಲಿನ ಕೆಪಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಹಾಸನದ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಟಿ. ಜವರೇಗೌಡ ಭೇಟಿ ನೀಡಿ ಶಾಲೆಯ ಬಿಸಿಯೂಟದ ಬಗ್ಗೆ ಚರ್ಚಿಸಿದರು.

ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರಿ ಕಾರ್ಯಕ್ರಮದಲ್ಲಿ ಬಿಸಿಯೂಟ ಕಾರ್ಯಕ್ರಮ ಮಕ್ಕಳಿಗೆ ರಜಾ ಸಂದರ್ಭದಲ್ಲೂ ಹಸಿವು ನೀಗುವ ಕಾರ್ಯಕ್ರಮ ಬಿಸಿಯೂಟ, ಹಳೇಬೀಡಿನ ಸರ್ಕಾರಿ ಶಾಲೆಯಲ್ಲಿ ನಿತ್ಯ ದಾಸೋಹ ಕಾರ್ಯಕ್ರಮ ನಡೆಯುತ್ತಿದೆ. ಇಲ್ಲಿನ ೨೮ ರಿಂದ ೩೦ ಮಕ್ಕಳು ಬಿಸಿಯೂಟದಲ್ಲಿ ಭಾಗವಹಿಸಿ ಅದರ ಜೊತೆಗೆ ಆಟ-ಪಾಠ ಚಟುವಟಿಕೆಗಳನ್ನು ಇಲ್ಲಿಯ ಶಿಕ್ಷಕಿ ಗೀತಾ ನಡೆಸಿಕೊಂಡು ಬರುತ್ತಿದ್ದಾರೆ. ಹಾಸನ ಜಿಲ್ಲಾದ್ಯಂತ ಶೇ.೮೦ ದಾಸೋಹ ಕಾರ್ಯಕ್ರಮ ನಡೆಯುತ್ತ ಬಂದಿದೆ. ಅದರಲ್ಲಿ ಶೇ.೨೦ ಮಕ್ಕಳು ಶಾಲೆಗೆ ಬಾರದೆ ಇದ್ದಾಗ ಆ ಸ್ಥಳದಲ್ಲಿ ಬಿಸಿಯೂಟ ಇರುವುದಿಲ್ಲ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಒಳ್ಳೆಯ ಫಲಿತಾಂಶ ಬರಲಿದೆ. ಈ ಬಾರಿ ಸರ್ಕಾರದ ಆದೇಶದ ಮೇರೆಗೆ ಎಲ್ಲಾ ಸೆಂಟರ್‌ಗೆ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿತ್ತು. ಜಿಲ್ಲೆಯಲ್ಲಿ ಪಾರದರ್ಶಕತೆಯಿಂದ ಪರೀಕ್ಷೆ ನಡೆದಿದೆ. ಒಳ್ಳೆಯ ಫಲಿತಾಂಶದ ನಿರೀಕ್ಷೆಯಲ್ಲಿ ಇದ್ದೇವೆ ಎಂದು ತಿಳಿಸಿದರು.

ಬೇಲೂರು ಶಿಕ್ಷಣ ಇಲಾಖೆಯ ಬಿಆರ್‌ಪಿ ಮೋಹನ್ ರಾಜ್ ಮಾತನಾಡಿ, ೨೦೦೨-೦೩ನೇ ಸಾಲಿನಲ್ಲಿ ಆರಂಭಿಸಿದ ಬಿಸಿ ಊಟದಲ್ಲಿ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಊಟ ನೀಡುತ್ತ ಬಂದಿದೆ. ಬೇಸಿಗೆ ರಜಾದಲ್ಲಿ ಬಡ ಮಕ್ಕಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ದಾಸೋಹ ಅಧಿಕಾರಿ ಡಾ ಜಗದೀಶ್‌ ನಾಯಕ್, ಉಪ ಪ್ರಾಂಶುಪಾಲ ಮುಳ್ಳಯ್ಯ, ಸಿಆರ್‌ಪಿ ನಾರಾಯಣ, ಕಾಂತರಾಜ್, ಮುಖ್ಯ ಶಿಕ್ಷಕ ನಾಗರಾಜು, ಸಹ ಶಿಕ್ಷಕಿ ಗೀತಾ ಹಾಜರಿದ್ದರು.