ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಸಹಕಾರಿ: ಶಾಸಕ ಕೆ. ಎಸ್.ಆನಂದ್

| Published : Apr 28 2024, 01:19 AM IST

ಸಾರಾಂಶ

ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಸಹಕಾರಿಯಾಗಿರುವ ಕಾರಣ ಮತದಾರರು ಅಭ್ಯರ್ಥಿ ಶ್ರೇಯಸ್ ಪಟೇಲ್‌ ಗೆ ಹೆಚ್ಚಿನ ಮತಗಳನ್ನು ನೀಡಲಿದ್ದಾರೆ ಎಂದು ಶಾಸಕ ಕೆ. ಎಸ್.ಆನಂದ್ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಸಹಕಾರಿಯಾಗಿರುವ ಕಾರಣ ಮತದಾರರು ಅಭ್ಯರ್ಥಿ ಶ್ರೇಯಸ್ ಪಟೇಲ್‌ ಗೆ ಹೆಚ್ಚಿನ ಮತಗಳನ್ನು ನೀಡಲಿದ್ದಾರೆ ಎಂದು ಶಾಸಕ ಕೆ. ಎಸ್.ಆನಂದ್ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಹರಿದಾಡುತ್ತಿರುವ ಸಂಸದರ ಕಾಮಪುರಾಣದ ವಿಡಿಯೋಗಳು ಕ್ಷೇತ್ರದ ಜನರಲ್ಲಿ ಅಸಹ್ಯ ಮೂಡಿಸಿವೆ. ವಿಕೃತ ವ್ಯಕ್ತಿಗೆ ಮತ ನೀಡದಿರಲು ಜನ ತೀರ್ಮಾನಿಸಿದ್ದಾರೆ. ಕ್ಷೇತ್ರಕ್ಕೆ ಬಂದರೆ ತಕ್ಕ ಶಾಸ್ತಿ ಮಾಡುವುದಾಗಿ ಮಹಿಳೆಯರು ಹೇಳುತ್ತಿದ್ದಾರೆ. ಸರಕಾರ ಕೂಡಲೆ ಮದ್ಯ ಪ್ರವೇಶಿಸಿ ಸಂಸದರಿಂದ ಶೋಷಣೆಗೆ ಒಳಗಾದ ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದರು.ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಮೂಲಕ ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸ ಬೇಕು ಎಂದು ಒತ್ತಾಯಿಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸದನದೊಳಗೆ ಮತ್ತು ಹೊರಗೆ ಸಿಡಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದರು. ಬಹುಶ ಅದು ಇದೇ ಸಂಸದರ ಸಿಡಿ ಇರಬೇಕು ಎಂದು ವ್ಯಂಗವಾಡಿದರು.ತಮ್ಮ ಮಕ್ಕಳನ್ನು ರಾಜಕೀಯ ಮುನ್ನಲೆಗೆ ತರುವ ನಿಟ್ಟಿನಲ್ಲಿ ಕುಮಾರಸ್ವಾಮಿ ಮತ್ತು ರೇವಣ್ಣ ನಡುವೆ ತೀವ್ರ ಪೈಪೋಟಿಯಿದೆ. ಆದ್ದರಿಂದ ಸಂಸದರ ವಿಡಿಯೋ ಬಿಡುಗಡೆ ಹಿಂದೆ ಕುಮಾರಸ್ವಾಮಿ ಕೈವಾಡವೂ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು.ಚಿಕ್ಕಂಗಳ ಗ್ರಾಪಂ ಅಧ್ಯಕ್ಷ ಹರೀಶ್, ಮುಖಂಡರಾದ ಪ್ರಕಾಶನಾಯ್ಕ, ಲೋಕೇಶ್,ಮತ್ತಿತರರು ಇದ್ದರು. 26ಕೆಕೆಡಿಯು2.

ಶಾಸಕ ಕೆ.ಎಸ್. ಆನಂದ್ ಚಿಕ್ಕಿಂಗಳ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.