ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲ ತುಂಬಿ

| Published : May 08 2024, 01:11 AM IST

ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲ ತುಂಬಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಸಂಕೇಶ್ವರಪ್ರತಿಯೊಬ್ಬರು ದೊರೆತಿರುವ ಅತ್ಯಮೂಲ್ಯವಾದ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಬಲ ತುಂಬಬೇಕಾಗಿದೆ ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರಪ್ರತಿಯೊಬ್ಬರು ದೊರೆತಿರುವ ಅತ್ಯಮೂಲ್ಯವಾದ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಬಲ ತುಂಬಬೇಕಾಗಿದೆ ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ನುಡಿದರು.

ಸಮೀಪದ ನಿಡಸೋಸಿ ಗ್ರಾಮದ ಮತಗಟ್ಟೆ ನಂ.86ರಲ್ಲಿ ತಮ್ಮ ಹಕ್ಕು ಚಲಾಯಿಸಿ ಮಾತನಾಡಿದ ಅವರು, ಚುನಾವಣಾ ಆಯೋಗ ಮತದಾನದ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಕೆಲವರು ತಮ್ಮ ಹಕ್ಕು ಚಲಾಯಿಸುತ್ತಿಲ್ಲ. ಹೀಗಾಗಿ ಪ್ರತಿಯೊಬ್ಬರು ತಮಗೆ ಸೂಕ್ತವೆನಿಸುವ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ತಮಗೆ ದೊರೆತಿರುವ ಅಧಿಕಾರದ ಹಕ್ಕನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಸೊಗಡು ಬಿಂಬಿಸುವ ಮತಗಟ್ಟೆಗಳನ್ನು ನಿರ್ಮಿಸುವ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಮುಂದಾಗಿದೆ. ಇದರಲ್ಲಿ ಆಯೋಗ ಹಾಗೂ ಚುನಾವಣಾ ಸಿಬ್ಬಂದಿ ಮೆಚ್ಚುವಂತದ್ದು ಎಂದರು.

ಈ ಸಂದರ್ಭದಲ್ಲಿ ಶ್ರೀಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ ಅವರೊಂದಿಗೆ ತೆರಳಿ ಶ್ರೀಗಳು ಮತ ಚಲಾವಣೆ ಮಾಡಿದರು.

ಎಸ್‌ಡಿವಿಎಸ್ ನಿರ್ದೇಶಕ ಸಂತೋಷ ಪಾಟೀಲ, ಸಂಜು ಪಾಟೀಲ, ಅಣ್ಣಪ್ಪ ಮಾಳಿ, ಟಿಎಪಿಸಿಎಂಎಸ್ ನಿರ್ದೇಶಕ ಬಿ.ಕೆ.ಪಾಟೀಲ, ಪಿಡಿಒ ಶೋಭಾ ಬಡಕುಂದ್ರಿ, ಭೀಮರಾವ ದಾದುಗೋಳ ಉಪಸ್ಥಿತರಿದ್ದರು.