ಎಲೈಟ್ ಸ್ಕ್ವಾಡ್- 2 ತಂಡ ಫೈನಲ್ ಗೆ, ಎಲೈಟ್ ಕ್ರಿಕೆಟ್ ಕ್ಲಬ್ ತಂಡ ಎಲಿಮೆನೇಟರ್-2 ಗೆ

| Published : Apr 28 2024, 01:25 AM IST

ಎಲೈಟ್ ಸ್ಕ್ವಾಡ್- 2 ತಂಡ ಫೈನಲ್ ಗೆ, ಎಲೈಟ್ ಕ್ರಿಕೆಟ್ ಕ್ಲಬ್ ತಂಡ ಎಲಿಮೆನೇಟರ್-2 ಗೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಜನರಲ್‌ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಲೈಟ್‌ ಸ್ಕ್ವಾಡ್‌- 2 ತಂಡ ಫೈನಲ್‌ ಪ್ರವೇಶಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಗೌಡ ಯುವ ವೇದಿಕೆಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಲೈಟ್ ಸ್ಕ್ವಾಡ್- 2 ತಂಡ ಫೈನಲ್ ಗೆ ಪ್ರವೇಶಿಸಿದೆ.

ಶನಿವಾರ ನಡೆದ ಕ್ವಾಲಿಫೈಯರ್ ಪಂದ್ಯಾಟದಲ್ಲಿ ದಿ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್-2 ಕೂರ್ಗ್ ವಾರಿಯರ್ಸ್ ತಂಡದ ವಿರುದ್ಧ ಹತ್ತು ವಿಕೆಟ್‌ಗಳ ರೋಚಕ ಜಯ ಸಾಧಿಸಿತು‌‌. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ವಾರಿಯರ್ಸ್ ತಂಡ ನಿಗದಿತ 10 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿತು‌. ತಂಡದ ಪರ ಗೋಪಿತ್ 23 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರು. ಕುಜಲ್ ಕಾರ್ಯಪ್ಪ 29 ರನ್ ಗಳ ಅಮೂಲ್ಯ ಕಾಣಿಕೆ ನೀಡಿದರು‌. ಎಲೈಟ್ ತಂಡದ ಪರ ದೀಕ್ಷಿತ್ ಕುತ್ಯಾಳ ಮತ್ತು ಹುದೇರಿ ತಮ್ಮಣ್ಣ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಎಲೈಟ್ ತಂಡ 5.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ತಂಡದ ಪರ ಎ.ಎಸ್ ರಾಹುಲ್ 21 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿ ಗೆಲುವಿನ ರುವಾರಿಯಾದರು. ಇದು ಇವರ ಸತತ ಐದನೇ ಅರ್ಧ ಶತಕವಾಗಿದೆ. ಆಕರ್ಷ್ 18 ರನ್ ಗಳ ಕಾಣಿಕೆ ನೀಡಿದರು.

ಇದರೊಂದಿಗೆ ಎಲೈಟ್ ಸ್ಕ್ವಾಡ್-2 ತಂಡ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತು.

ಮೊದಲ ಎಲಿಮಿನೇಟರ್ ಪಂದ್ಯಾಟದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡದ ವಿರುದ್ಧ ಗೆಲುವು ಸಾಧಿಸಿ‌ ಎಲಿಮಿನೇಟರ್ -2 ಹಂತಕ್ಕೆ ಅರ್ಹತೆ ಪಡೆಯಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತು. ತಂಡದ ಪರ ಜಶ್ವಂತ್ 27 ರನ್ ಗಳಿಸಿದರು. ರೋಹನ್ 22 ರನ್ ಗಳಿಸಿದರು.

ಎಲೈಟ್ ತಂಡದ ಪರ ಶರತ್ ಚೊಕ್ಕಾಡಿ ಮತ್ತು ಅಣ್ಣಚಿರ ಧಿನೇಂದ್ರ ತಲಾ 2 ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಎಲೈಟ್ ಕ್ರಿಕೆಟ್ ಕ್ಲಬ್ ತಂಡ 9.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಲೋಕೇಶ್ 15 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರು. ಬಿಳಿಗೇರಿ ತಂಡದ ಪರ ಮೂವನ ತುಷಾರ್ 2 ವಿಕೆಟ್ ಪಡೆದರು.

ಇಂದಿನ ಪಂದ್ಯಾಟ: ಎಲಿಮೆನೇಟರ್ -2: ಎಲೈಟ್ ಕ್ರಿಕೆಟ್ ಕ್ಲಬ್ - ಕೂರ್ಗ್ ವಾರಿಯರ್ಸ್

ಫೈನಲ್: ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್- 2 (ಎಲಿಮೆನೇಟರ್ - 2 ವಿಜೇತ ತಂಡ)

ಮಹಿಳೆಯರ ಪಂದ್ಯಾಟ: ಕೊಡಗು ಗೌಡ ಯುವ ವೇದಿಕೆಯಿಂದ ಮಹಿಳೆಯರಿಗೆ ಶನಿವಾರ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ನಡೆಯಿತು.

ಮೊದಲ ಪಂದ್ಯದಲ್ಲಿ ಎಲೈಟ್ ವಿಮೆನ್ಸ್ ಕ್ರಿಕೆಟ್ ಕ್ಲಬ್ ತಂಡ ಕೆಡಿಕೆ ವಿಮೆನ್ಸ್ ಮೈಸೂರು ವಿರುದ್ಧ 65 ರನ್‌ಗಳ ಜಯ ಗಳಿಸಿತು. ಎರಡನೇ ಪಂದ್ಯದಲ್ಲಿ ಗುಡ್ಲೂರು ಕಾವೇರಿ ಟೀಮ್ ವಿರುದ್ಧ ಬ್ಲ್ಯಾಕ್ ಪ್ಯಾಂಥರ್ಸ್ 15 ರನ್‌ಗಳಿಂದ ಗೆಲುವು ಸಾಧಿಸಿತು. ಮೂರನೇ ಪಂದ್ಯಾಟದಲ್ಲಿ ಗ್ಲ್ಯಾಡಿಯೇಟರ್ ಕ್ವೀನ್ಸ್ವಿ ವಿರುದ್ಧ ವೈಲ್ಡ್ ಮಾಸ್ಟರ್ಸ್ 9 ವಿಕೆಟ್‌ಗಳ ಜಯ ಕಂಡಿತು.

ನಾಲ್ಕನೇ ಪಂದ್ಯಾಟದಲ್ಲಿ ಪ್ಲಾಂಟರ್ಸ್ ಕ್ಲಬ್ ಕೊಡಗು ತಂಡ ವೈಲ್ಡ್ ಕ್ಯಾಟ್ ನಂಜರಾಯಪಟ್ಟಣ ವಿರುದ್ಧ 33 ರನ್‌ಗಳ ಜಯ ಸಾಧಿಸಿತು. ಐದನೇ ಪಂದ್ಯಾಟದಲ್ಲಿ ಮರಗೋಡು ಸ್ಪೋರ್ಟ್ಸ್ ರಿಕ್ರಿಯೇಷನ್ ಕ್ಲಬ್ ತಂಡ ಕೆಡಿಕೆ ವಿಮೆನ್ಸ್ ಮೈಸೂರು ತಂಡದ ವಿರುದ್ಧ 21 ರನ್‌ಗಳ ಜಯ ಗಳಿಸಿತು. ಆರನೇ ಪಂದ್ಯದಲ್ಲಿ ಬ್ಲಾಸಮ್ ಬೆಲ್ಸ್ ತಂಡದ ವಿರುದ್ಧ ಗ್ಲ್ಯಾಡಿಯೇಟರ್ ಕ್ವೀನ್ಸ್ 3 ರನ್‌ಗಳ ಜಯ ಗಳಿಸಿತು. ಏಳನೇ ಪಂದ್ಯದಲ್ಲಿ ಪ್ಯಾಂಥರ್ಸ್ ಕ್ಲಬ್ ಕೊಡಗು ತಂಡ ವೈಲ್ಡ್ ಕ್ಯಾಟ್ ನಂಜರಾಯಪಟ್ಟಣ ವಿರುದ್ಧ 5 ರನ್‌ಗಳ ಜಯ ಸಾಧಿಸಿತು.