ಸಂಸ್ಕೃತಿ ಸಂಸ್ಕಾರದಿಂದ ಸಮಾಜದ ಶ್ರೇಯೋಭಿವೃದ್ಧಿ: ಡಾ.ಚಂದ್ರಶೇಖರ ಸ್ವಾಮೀಜಿ

| Published : Apr 28 2024, 01:25 AM IST

ಸಂಸ್ಕೃತಿ ಸಂಸ್ಕಾರದಿಂದ ಸಮಾಜದ ಶ್ರೇಯೋಭಿವೃದ್ಧಿ: ಡಾ.ಚಂದ್ರಶೇಖರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಾಪುರ ಪಟ್ಟಣದ ಹಿರೇಮಠದಲ್ಲಿ ೧೫ ದಿನಗಳಿಂದ ನಡೆದ ಉಚಿತ ವೇದಾಧ್ಯಯನ ಹಾಗೂ ಸಂಸ್ಕೃತಿ, ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಶಿವಭಕ್ತರಿಗೆ ಲಿಂಗದೀಕ್ಷೆ ಮತ್ತು ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ ಸಂಸ್ಕೃತಿ ಸಂಸ್ಕಾರದಿಂದ ಸಮಾಜದ ಶ್ರೇಯೋಭಿವೃದ್ಧಿ ಸಾಧ್ಯ ಎಂದು ಹಿರೇಮಠದ ಡಾ.ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಪಟ್ಟಣದ ಹಿರೇಮಠದಲ್ಲಿ ೧೫ ದಿನಗಳಿಂದ ನಡೆದ ಉಚಿತ ವೇದಾಧ್ಯಯನ ಹಾಗೂ ಸಂಸ್ಕೃತಿ, ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಶಿವಭಕ್ತರಿಗೆ ಲಿಂಗದೀಕ್ಷೆ ಮತ್ತು ಸಂಸ್ಕಾರ ಶಿಬಿರ ಸಮಾರೋಪದಲ್ಲಿ ಮಾತನಾಡಿದ ಅವರು, ಇಂದು ಮಕ್ಕಳಿಗೆ ಸಂಸ್ಕಾರ ಹಾಗೂ ಸಂಸ್ಕೃತಿಯ ಕುರಿತು ಮಾರ್ಗದರ್ಶನದ ಅವಶ್ಯಕತೆ ಇದೆ. ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳ ಬೋಧನೆಯಿಂದ ಉತ್ತಮ ಸಮಾಜ ನಿರ್ಮಾಣಮಾಡಲು ಸಾಧ್ಯವಾಗಲಿದೆ ಎಂದರು.

ಬನಹಟ್ಟಿಯ ಶರಣಬಸವ ಶಿವಾಚಾರ್ಯರು ಎಲ್ಲ ಜಂಗಮ ವಟುಗಳಿಗೂ ಲಿಂಗದೀಕ್ಷೆ ಕೊಟ್ಟು ಧರ್ಮೋಪದೇಶ ಮಾಡಿದರು. ಸಾನ್ನಿಧ್ಯ ವಹಿಸಿದ್ದ ವೀರಗಂಗಾಧರ ಸ್ವಾಮೀಜಿ ಮಾತನಾಡಿ, ಶಿಬಿರದಿಂದ ಮಕ್ಕಳಿಗೆ ಆಚಾರ ವಿಚಾರಗಳ ಅರಿವು ಉಂಟಾಗುತ್ತದೆ ಎಂದರು.

ಕುಂದರಗಿಯ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯರು ಮಾತನಾಡಿ, ಸಮಾಜದ ಏಳ್ಗಿಗೆಗಾಗಿ ಹಿರೇಮಠವು ಒಂದಿಲ್ಲೊಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುತ್ತದೆ. ಇಂತಹ ಕಾರ್ಯಕ್ರಮಕ್ಕೆ ನಾವು ನಿವೇಲ್ಲರೂ ಸಹಕಾರ ನಿಡೋಣ ಎಂದು ಹೇಳಿದರು. ಶ್ರೀಗಳನ್ನು ಹಿರೇಮಠದಿಂದ ಸನ್ಮಾನಿಸಿ ಗೌರವಿಸಲಾಯಿತು. ಶಿಬಿರದಲ್ಲಿ ಉಚಿತ ವೇದಾಧ್ಯಯನ ಮಾಡಿದ ವಟುಗಳು ಅನಿಸಿಕೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಗಣ್ಯರಾದ ಎಂ.ಎಂ. ವಿರಕ್ತಮಠ, ಎಲ್.ಸಿ. ಉದಪುಡಿ, ಎಸ್.ಎನ್. ಹಿರೇಮಠ, ಬಿ.ಕೆ. ಮಠದ, ಶಿವಪ್ಪ ಚೌಧರಿ, ಸುಭಾಸ ಹಂಚಾಟೆ, ಸಂಕಪ್ಪ ಗಂಗಣ್ಣವರ, ಆದಯ್ಯ ಹೊದ್ಲೂರಮಠ, ಪ್ರಕಾಶ ಚುಳಕಿ, ಅಲ್ಲಾಸಾಬ ಯಾದವಾಡ, ಸದಾಶಿವ ಉದಪುಡಿ, ಮಲ್ಲಪ್ಪ ಕೊಟಗಿ, ಸದಾಶಿವ ನಾವಿ, ಆರ್.ಜಿ. ಮುತ್ತಿನಮಠ ಹಾಗೂ ಲೋಕಾಪುರ ಸುತ್ತಮುತ್ತಲಿನ ಗ್ರಾಮಸ್ಥರು ಹಿರೇಮಠದ ಭಕ್ತರು ಇದ್ದರು.