ಗ್ರಾಮೀಣ ಪ್ರತಿಭಾನ್ವಿತರ ಪಿಯು ಶಿಕ್ಷಣಕ್ಕಾಗಿ ಕೋಟಿ ರು. ಎಕ್ಸಲೆಂಟ್ ಸ್ಕಾಲರ್‌ಶಿಪ್

| Published : May 10 2024, 01:34 AM IST

ಗ್ರಾಮೀಣ ಪ್ರತಿಭಾನ್ವಿತರ ಪಿಯು ಶಿಕ್ಷಣಕ್ಕಾಗಿ ಕೋಟಿ ರು. ಎಕ್ಸಲೆಂಟ್ ಸ್ಕಾಲರ್‌ಶಿಪ್
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿ ಕಲಿತ ವಿದ್ಯಾರ್ಥಿಗಳು ಏಮ್ಸ್, ಐಐಟಿ, ಬಿಎಂ.ಸಿ, ಎಂ.ಎಂ.ಸಿ ಜಿಪ್ಮೆರ್ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿರುವುದು ಸಂಸ್ಥೆಯು ನೀಡುತ್ತಿರುವ ಅತ್ಯುತ್ತಮ ತರಬೇತಿ ವ್ಯವಸ್ಥೆಗೆ ನಿದರ್ಶನವಾಗಿದೆ.

ಮೂಡುಬಿದಿರೆ: ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುವುದರ ಜತೆಗೆ ಅತ್ಯುತ್ತಮ ಶೈಕ್ಷಣಿಕ ಸಾಧನೆಯಿಂದ ನಾಡಿನ ಗಮನ ಸೆಳೆದಿರುವ ಇಲ್ಲಿನ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಈ ಸಾಲಿನಲ್ಲಿ ಪಿಯುಸಿ ಶಿಕ್ಷಣ ಬಯಸುವ ಆರ್ಥಿಕವಾಗಿ ಹಿಂದುಳಿದಿರುವ, ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುಮಾರು ೧ ಕೋಟಿ ರು. ಮೊತ್ತದ ವಿದ್ಯಾರ್ಥಿ ವೇತನದ ಯೋಜನೆಯನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಘೋಷಿಸಿದ್ದಾರೆ.

ಎಕ್ಸಲೆಂಟ್‌ ವಿದ್ಯಾಸಂಸ್ಥೆಯ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶಿಕ್ಷಣ ಪಡೆಯಲು ಬಯಸುವ ಕರ್ನಾಟಕ ಪ್ರೌಢ ಶಿಕ್ಷಣ ಬೋರ್ಡ್, ಐಸಿಎಸ್‌ಐ ಮತ್ತು ಸಿಬಿಎಸ್‌ಇ ನಡೆಸುವ ಹತ್ತನೇತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೯೮ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಬಡ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿಗೆ ಈ ವಿದ್ಯಾರ್ಥಿವೇತನ ಕೋಟಾದಡಿ ಶಿಕ್ಷಣ ನೀಡಲು ಸಂಸ್ಥೆ ನಿರ್ಧರಿಸಿದೆ. ಈ ಅವಕಾಶವನ್ನು ಪ್ರತಿಭಾವಂತ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಸಂಸ್ಥೆಯು ಪಿಯುಸಿ ಶಿಕ್ಷಣದ ಜೊತೆಗೆ ಮೆಡಿಕಲ್ ಹಾಗೂ ಉನ್ನತ ತಾಂತ್ರಿಕ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ನೀಟ್/ ಜೆಇಇ/ ಸಿಇಟಿ/ ಸಿಎ ಮೊದಲಾದ ತರಬೇತಿಗೆ ಪರಿಣತ ಬೋಧಕರಿದ್ದು ಈ ಬಾರಿ ಪಿಯುಸಿ ಟಾಪ್ ಟೆನ್ ರ‍್ಯಾಂಕ್‌ ಪಟ್ಟಿಯಲ್ಲಿ ಎಕ್ಸಲೆಂಟ್‌ನ 15 ವಿದ್ಯಾರ್ಥಿಗಳು ಸಾಧಕರಾಗಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಏಮ್ಸ್, ಐಐಟಿ, ಬಿಎಂ.ಸಿ, ಎಂ.ಎಂ.ಸಿ ಜಿಪ್ಮೆರ್ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿರುವುದು ಸಂಸ್ಥೆಯು ನೀಡುತ್ತಿರುವ ಅತ್ಯುತ್ತಮ ತರಬೇತಿ ವ್ಯವಸ್ಥೆಗೆ ನಿದರ್ಶನವಾಗಿದೆ. ಹೆಚ್ಚಿನ ಮಾಹಿತಿಗೆ ಮೂಡುಬಿದಿರೆ ಕಲ್ಲಬೆಟ್ಟುವಿನ ಸಂಸ್ಥೆಯ ಆಡಳಿತ ಕಚೇರಿ (www.excellentmoodbidri.in) ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.