ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೇಹ್ತಾ ಶಾಲೆಗೆ ಶೇ.100ರಷ್ಟು ಉತ್ತಮ ಫಲಿತಾಂಶ

| Published : May 10 2024, 01:34 AM IST

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೇಹ್ತಾ ಶಾಲೆಗೆ ಶೇ.100ರಷ್ಟು ಉತ್ತಮ ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ 2023-24 ನೇ ಸಾಲಿನಲ್ಲಿ ಇಲ್ಲಿನ ಪ್ರತಿಷ್ಠಿತ ಎಸ್ ಆರ್ ಎನ್ ಮೆಹತಾ ಶಾಲೆಯು ಶೇಕಡಾ 100ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದೆ.

ಕಲಬುರಗಿ:

ಪ್ರಸಕ್ತ 2023-24 ನೇ ಸಾಲಿನಲ್ಲಿ ಇಲ್ಲಿನ ಪ್ರತಿಷ್ಠಿತ ಎಸ್ ಆರ್ ಎನ್ ಮೆಹತಾ ಶಾಲೆಯು ಶೇಕಡಾ 100ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದೆ.

ಈ ಶಾಲೆಯಿಂದ ಪರಿಕ್ಷೆಗೆ ಕುಳಿತ 182 ಮಕ್ಕಳಲ್ಲಿ 182 ಮಕ್ಕಳು ಪಾಸಾಗಿದ್ದಾರೆ. ಅದರಲ್ಲಿ ಭಾಗ್ಯಶ್ರೀ 617 ಅಂಕಗಳನ್ನು ಪಡೆದು ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದಾಳೆ, ಮೊಹಮ್ಮದ್ ಸಾದ ಅಹಮೆದ್ ರಜಾ 616 ಅಂಕಗನ್ನು ಪಡೆದು ರಾಜ್ಯಕ್ಕೆ 10ನೇ ಸ್ಥಾನ ಪಡೆದಿದ್ದಾನೆ.

ಮೇಹ್ತಾ ಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಶೇ. 95 ಕ್ಕಿಂತ ಮೇಲ್ಪಟ್ಟು 29, ಶೇ. 90 ರಿಂದ ಶೇ. 95 ರಷ್ಟು 43 , ಶೇ. 85 ರಿಂದ 90 ರಷ್ಟು ಫಲಿತಾಂಶ ಪಡೆದ 28 ಉತ್ತಮ ಸಾಧನೆ ಮಾಡಿದ್ದಾರೆ. ಒಟ್ಟು ಫಲಿತಾಂಶದಲ್ಲಿ ಡಿಸ್ಟಿಂಕ್ಷನ್ 100, ಪ್ರಥಮ ಶ್ರೇಣಿಯಲ್ಲಿ 73, ದ್ವಿತಿಯ ಶ್ರೇಣಿಯಲ್ಲಿ 9 ಮಕ್ಕಳು ತೇರ್ಗಡೆಯಾಗಿದ್ದಾರೆ.

ಮೇಹ್ತಾ ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ಮಕ್ಕಳ ವಿವರ ಹೀಗಿದೆ- ಭಾಗ್ಯಶ್ರೀ 617, ಮೊಹ್ಮದ್‌ ಅಹ್ಮದ್‌ ರಾಝ್‌- 616, ಶ್ರೇಯಾ ಪಿಕೆ- 614, ಶ್ರೀಹರಿ ರೆಡ್ಡಿ- 614, ಹರ್ಷವರ್ಧನ ಎಸ್‌- 612, ತೇಜಸ್‌ ಎಂ- 612, ಭವ್ಯಶ್ರೀ ಮಾಡ್ಯಾಳಕರ್‌- 609, ಅದಿತಿ ಕಮಲಾಪುರ- 609, ನಿಖಿಲ್‌- 609,ಶಮಿತಾ- 608, ಶ್ರೇಯಾ- 608, ಸಮೀರ- 608, ಆದಿತ್ಯಾ ಆರ್‌ಕೆ- 607, ಯಶ್‌ ಕಳಸ್ಕರ್‌ ಹಾಗೂ ವಿನಿತೀ್ ಇನಾಮದಾರ್‌ ಕ್ರಣವಾಗಿ 606 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಶಾಲೆಯ ಆಡಳಿತ ಮಂಡಳಿಯವರು, ಪ್ರಾಚಾರ್ಯರು, ಉಪಪ್ರಾಚಾರ್ಯರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಎಲ್ಲಾ ಮಕ್ಕಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.