ಮತದಾನಕ್ಕೆ ರಜೆ ನೀಡದ ಚಿಕನ್ ಫ್ಯಾಕ್ಟರಿ: ರೈತರ ಪ್ರತಿಭಟನೆ

| Published : May 08 2024, 01:06 AM IST

ಮತದಾನಕ್ಕೆ ರಜೆ ನೀಡದ ಚಿಕನ್ ಫ್ಯಾಕ್ಟರಿ: ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ರಘುನಂದನಮೂರ್ತಿ ಎಲ್ಲರಿಗೂ ವೇತನ ಸಹಿತ ರಜೆ ನೀಡುವಂತೆ ಮಾಡಿದ ಆದೇಶವನ್ನು ತಾಲೂಕಿನ ತೆರೆದಹಳ್ಳಿಯ ವೆಂಕಾಬ್ ಮತ್ತು ವೆಂಕಟೇಶ ಹ್ಯಾಚರಿಸ್ ಹಾಗೂ ಗೋಲ್ಡನ್ ಹ್ಯಾಚರಿಸ್ ಚಿಕನ್ ಫ್ಯಾಕ್ಟರಿ ಆಡಳಿತ ಮಂಡಳಿ ಧಿಕ್ಕರಿಸಿದ್ದಾರೆ ಎಂದು ಆರೋಪಿಸಿ ರೈತ ಸಂಘಟನೆ ಸದಸ್ಯರು ಮಂಗಳವಾರ ಫ್ಯಾಕ್ಟರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ರಾಣಿಬೆನ್ನೂರು: ಲೋಕಸಭಾ ಚುನಾವಣೆಯ ಮತದಾನದ ದಿನ ಪ್ರತಿಯೊಬ್ಬ ಮತದಾರನೂ ತಪ್ಪದೇ ತಮ್ಮ ಹಕ್ಕು ಚಲಾಯಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿ ರಘುನಂದನಮೂರ್ತಿ ಎಲ್ಲರಿಗೂ ವೇತನ ಸಹಿತ ರಜೆ ನೀಡುವಂತೆ ಮಾಡಿದ ಆದೇಶವನ್ನು ತಾಲೂಕಿನ ತೆರೆದಹಳ್ಳಿಯ ವೆಂಕಾಬ್ ಮತ್ತು ವೆಂಕಟೇಶ ಹ್ಯಾಚರಿಸ್ ಹಾಗೂ ಗೋಲ್ಡನ್ ಹ್ಯಾಚರಿಸ್ ಚಿಕನ್ ಫ್ಯಾಕ್ಟರಿ ಆಡಳಿತ ಮಂಡಳಿ ಧಿಕ್ಕರಿಸಿದ್ದಾರೆ ಎಂದು ಆರೋಪಿಸಿ ರೈತ ಸಂಘಟನೆ ಸದಸ್ಯರು ಮಂಗಳವಾರ ಫ್ಯಾಕ್ಟರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ನಮ್ಮ ಸಂವಿಧಾನ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಮತದಾನ ಹಕ್ಕನ್ನು ನೀಡಿದೆ. ಚುನಾವಣಾ ಆಯೋಗ ಕೂಡ ಮತದಾನ ಹೆಚ್ಚಳಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಎಲ್ಲಾ ಕಂಪನಿ, ಸಂಘ ಸಂಸ್ಥೆಗಳ, ಶಾಲೆಗಳು ಸೇರಿದಂತೆ ಇತರೆ ಸಣ್ಣ ಕೈಗಾರಿಕೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದರು. ಆದರೆ ಚಿಕನ್ ಫ್ಯಾಕ್ಟರಿ ವ್ಯವಸ್ಥಾಪಕ ಮಂಡಳಿ ಆದೇಶ ಉಲ್ಲಂಘನೆ ಮಾಡಿ ಕಾರ್ಮಿಕರ ಜತೆ ಕೆಲಸ ಮಾಡಿಸುವುದರ ಮೂಲಕ ಕಾರ್ಮಿಕರ ಮತದಾನದ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ ಅವರು ಕೂಡಲೇ ಜಿಲ್ಲಾಧಿಕಾರಿ ಈ ಕಂಪನಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹರಿಹರಗೌಡ ಪಾಟೀಲ, ಬಸವರಾಜ ಕೊಂಗಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.