ಕಾಂಗ್ರೆಸ್ಸಿಗರ ಬಳಿ 10 ಸಾವಿರ ಮುಂಗಡ ಹಣ ಕೇಳಿ: ಸಂಸದ ಬಿ.ವೈ.ರಾಘವೇಂದ್ರ

| Published : Apr 27 2024, 01:24 AM IST / Updated: Apr 27 2024, 01:25 AM IST

ಕಾಂಗ್ರೆಸ್ಸಿಗರ ಬಳಿ 10 ಸಾವಿರ ಮುಂಗಡ ಹಣ ಕೇಳಿ: ಸಂಸದ ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಿಪ್ಪನ್‍ಪೇಟೆ ಸಮೀಪದ ಅಮೃತ ಗ್ರಾಮದಲ್ಲಿ ಆಯೋಜಿಸಲಾದ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಬಿ.ವೈ.ರಾಘವೇಂದ್ರ ಮತಯಾಚಿಸಿ ಮಾತನಾಡಿದರು.

ಕನ್ನಡಪ್ರ ವಾರ್ತೆ ರಿಪ್ಪನ್‍ಪೇಟೆ

ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಒಂದು ಲಕ್ಷ ರು. ಗ್ಯಾರಂಟಿ ನೀಡುವ ಭರವಸೆ ನೀಡಿದ್ದು ಮತಯಾಚಿಸಲು ಬರುವ ಪಕ್ಷದವರಲ್ಲಿ ಮುಂಗಡವಾಗಿ 10 ಸಾವಿರ ರು. ಹಣವನ್ನು ಅಡ್ವಾನ್ಸ್ ಮಾಡಿ ಉಳಿದ 90 ಸಾವಿರ ಹಣ ನಂತರ ಕೊಡಿ ಎಂದು ಕೇಳಿ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ರಿಪ್ಪನ್‍ಪೇಟೆ ಸಮೀಪದ ಅಮೃತ ಗ್ರಾಮದಲ್ಲಿ ಆಯೋಜಿಸಲಾದ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಮತಯಾಚಿಸಿ, ದೇಶದ ವರ್ಷದ ಬಜೆಟ್ 48 ಲಕ್ಷ ಕೋಟಿ ರು. ಅದರೆ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದ ಎಲ್ಲ ಮಹಿಳೆಯರಿಗೆ ಲಕ್ಷ ರು. ಗ್ಯಾರಂಟಿ ಎಂದು ಘೋಷಿಸಲಾಗಿದೆ. 68 ಕೋಟಿ ಮಹಿಳೆಯರು ಇರುವ ದೇಶದಲ್ಲಿ ತಲಾ ಒಂದು ಲಕ್ಷ ರೂ ಗ್ಯಾರಂಟಿ ಕೊಡುವ ಯೋಜನೆಗೆ 68 ಲಕ್ಷ ಕೋಟಿ ರು. ಕೊಡಬೇಕಾಗುತ್ತದೆ. ಹಾಗಾದರೆ ಆ ಹಣ ಎಲ್ಲಿಂದ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿರುವ ಬಿ.ವೈ.ರಾಘವೇಂದ್ರ ತನ್ನ ಚಿಕ್ಕವಯಸ್ಸಿನಲ್ಲಿಯೇ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಆಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾರೆ. ಬಡವರ ಬಗರ್ ಹುಕುಂ ರೈತರ ಪರವಾಗಿ ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಿ ಸಾಕಷ್ಟು ಭಾರಿ ಗಮನಸೆಳೆದು ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದರು.

ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಭದ್ರಾವತಿ ವಿಐಎಸ್ಎಲ್‌, ಎಂಪಿಎಂ ಹಾಗೂ ಹೊಸನಗರ ಸಾಗರ ಕುಂದಾಪುರ ಉಡುಪಿ ಮಂಗಳೂರು ಸಂಪರ್ಕದ ತುಮರಿ ಸೇತುವೆ ರಾಷ್ಟ್ರೀಯ ಹೆದ್ದಾರಿಗಳ ಆಭಿವೃದ್ಧಿಗಾಗಿ ಕೆಂದ್ರದಿಂದ ಹೆಚ್ಚಿನ ಅನುದಾನ ತರುವುದರೊಂದಿಗೆ ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದರು.

ರಾಜ್ಯದ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕರ ಅಧಿಕಾರಕ್ಕೆ ಬಂದು 9 ಹತ್ತು ತಿಂಗಳಾದರೂ ಕೂಡ ಅಭಿವೃದ್ಧಿ ಕಾರ್ಯಗಳಿಗೆ ನಯಾಪೈಸೆ ಸಹ ನೀಡಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ ಹಾಕಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಹರಿಕೃಷ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತಿಮನೆ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಪಕ್ಷದ ಮುಖಂಡರಾದ ಆರ್.ಟಿ.ಗೋಪಾಲ, ಮಾಜಿ ಅಧ್ಯಕ್ಷ ಗಣಪತಿ ಬೆಳಗೋಡು ಮತ್ತಿತರರು ಇದ್ದರು.