ಆಶ್ರಯ ಮನೆ ರಸ್ತೆಗೆ ನೆರೆಯವರ ಕಿರಿಕಿರಿ

| Published : Apr 28 2024, 01:22 AM IST

ಸಾರಾಂಶ

ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈಸ್ತೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಇರುವ ಮನೆಗೆ ಸಮರ್ಪಕ ರಸ್ತೆ ಇಲ್ಲದೆ ಪರದಾಡುತ್ತಿದ್ದು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕೊಡಿಸದೆ ನಿರ್ಲಕ್ಷಿಸಿದ್ದಾರೆಂದು ಗ್ರಾಮದ ನಿವಾಸಿ ಮುನೀಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈಸ್ತೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಇರುವ ಮನೆಗೆ ಸಮರ್ಪಕ ರಸ್ತೆ ಇಲ್ಲದೆ ಪರದಾಡುತ್ತಿದ್ದು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕೊಡಿಸದೆ ನಿರ್ಲಕ್ಷಿಸಿದ್ದಾರೆಂದು ಗ್ರಾಮದ ನಿವಾಸಿ ಮುನೀಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಮಾರು 40 ವರ್ಷಗಳ ಹಿಂದೆ 94 ಸಿಸಿ ಯಡಿ ಹಕ್ಕುಪತ್ರ ಹಾಗೂ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಂಡು ಹಕ್ಕು ಪತ್ರ ಪಡೆದುಕೊಂಡಿದ್ದೇವೆ. ರಸ್ತೆ ಇಲ್ಲದಿದ್ದರೆ ಸರ್ಕಾರದ ವತಿಯಿಂದ ಹಕ್ಕು ಪತ್ರ ಹೇಗೆ ವಿತರಣೆ ಮಾಡುತ್ತಿದ್ದರು. ಆದರೆ ಹಲ ವರ್ಷಗಳಿಂದ ಸಂಚರಿಸುತ್ತಿರುವ ರಸ್ತೆಗೆ ಅಕ್ಕಪಕ್ಕದ ಮನೆಯವರೆ ಅಡ್ಡಿಪಡಿಸುತ್ತಿದ್ದು, ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದರೂ ಯಾವುದೇ ಪರಿಹಾರ ಕೊಡುವ ಕೆಲಸ ಮಾಡಿಲ್ಲ. ಈಗಿರುವ ರಸ್ತೆಯಲ್ಲಿ ಸಂಚಾರಕ್ಕೆ ನೆರೆಮನೆಯವರೆ ಅಡ್ಡಿಪಡಿಸುತ್ತಿದ್ದು ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ. ಇನ್ನು ಈ ವಿಚಾರವಾಗಿ ತಾಪಂ ಇಒ, ಜಿಪಂ ಸಿಇಒ, ಡಿಸಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ನಮ್ಮ ದೂರಿಗೆ ಮನ್ನಣೆ ಕೊಡುತ್ತಿಲ್ಲ ಎಂದು ಭಾರತಮ್ಮ, ಮುನೀಂದ್ರ, ಚನ್ನಭೈರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ಸಂಚರಿವ ವೇಳೆ ಅಕ್ಕ-ಪಕ್ಕದ ಮನೆಯವರು ವಿನಾಕಾರಣವಾಗಿ ಕಿರುಕುಳ ಕೊಡುತ್ತಿದ್ದಾರೆ. ನಮಗೆ ರಸ್ತೆ ನಿರ್ಮಾಣ ಮಾಡಿಕೊಡದಿದ್ದರೆ, ನಾವು ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಟ್.........

ಮುನೀಂದ್ರ ಅವರ ಮನೆಯ ರಸ್ತೆ ಸಮಸ್ಯೆ ಬಗ್ಗೆ ದೂರು ಸಲ್ಲಿಸಿದ್ದಾರೆ. ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಚುನಾವಣೆ ಮುಗಿದ ನಂತರ ಮುನೀಂದ್ರ ಅವರ ಮನೆ ಸೇರಿದಂತೆ ಅಕ್ಕ ಪಕ್ಕದ ಮನೆಯವರ ಜಾಗ ಸರ್ವೇ ಮಾಡಿ ರಸ್ತೆಗೆ ಅನುವು ಮಾಡಿಕೊಟ್ಟು ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಲ್ಪಿಸುತ್ತೇವೆ.

-ಮುರಳಿ, ಇಟ್ಟಸಂದ್ರ ಗ್ರಾಪಂ ಸದಸ್ಯ

ಫೋಟೋ : 27 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಈಸ್ತೂರು ನಿವಾಸಿ ಮುನೀಂದ್ರ ಮನೆಗೆ ಹೋಗಲು ರಸ್ತೆ ಇಲ್ಲದೆ ಪರದಾಡುತ್ತಿದ್ದು ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.