ಎಸ್ಸೆಸ್ಸೆಲ್ಸಿಯಲ್ಲಿ ಕಾಳಗನೂರ ವಸತಿ ಶಾಲಾ ಮಕ್ಕಳ ಸಾಧನೆ

| Published : May 10 2024, 01:30 AM IST

ಎಸ್ಸೆಸ್ಸೆಲ್ಸಿಯಲ್ಲಿ ಕಾಳಗನೂರ ವಸತಿ ಶಾಲಾ ಮಕ್ಕಳ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಾಳಗನೂರ (ಪ.ಜಾತಿ) ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ

ಕಲಬುರಗಿ:

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಾಳಗನೂರ (ಪ.ಜಾತಿ) ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದ್ದು, ಈ ವಸತಿ ಶಾಲೆಯ ಒಟ್ಟು 38 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 11 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 18 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಕ್ಕಾಗಿ ಎಂದು ವಸತಿ ಶಾಲೆಯ ಪ್ರಾಂಶುಪಾಲರಾದ ಸುರೇಶ ಅಲ್ದಾರ್ತಿ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ವಸತಿ ಶಾಲೆಯ ವಿದ್ಯಾರ್ಥಿಯಾದ ರಾಹುಲ್ ತಂದೆ ಭೀರಪ್ಪ ಅವರು 625ಕ್ಕೆ 592 (ಶೇ.94.72) ರಷ್ಟು ಅಂಕಗಳನ್ನು ಪಡೆದು ವಸತಿ ಶಾಲೆಗೆ ಕೀರ್ತಿ ತಂದಿದ್ದು, ಇನ್ನೂಳಿದ ವಿದ್ಯಾರ್ಥಿಗಳಾದ ಶಿವಕುಮಾರ ತಂದೆ ರಮೇಶ 585 (ಶೇ.93.06), ರಾಜ ತಂದೆ ಶಿವಾಜಿ 576 (ಶೇ.92.16), ರಾಣುಭಾಯಿ ತಂದೆ ಚತ್ರು 569 (ಶೇ.91.04), ರೋಹಿತ ತಂದೆ ಸಿದ್ದಲಿಂಗ 568 (ಶೇ. 90.88) ರಷ್ಟು ಅಂಕಗಳನ್ನು ಪಡೆದಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಕಲಬುರಗಿ ಸಮಾಜ ಕಲ್ಯಾಣ ಜಂಟಿ ನಿರ್ದೇಶಕರಾದ ಜಾವೇದ ಹರ್ಷ ವ್ಯಕ್ತಪಡಿಸಿದ್ದಾರೆ.