ಇಟಗಿ ಆದರ್ಶ ಶಾಲೆಗೆ ನೂರಕ್ಕೆ ನೂರು ಫಲಿತಾಂಶ

| Published : May 10 2024, 01:30 AM IST

ಸಾರಾಂಶ

ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ 70 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ನೂರಕ್ಕೆ ನೂರು ಫಲಿತಾಂಶ ದಾಖಲಾಗಿದೆ.

ಆದರ್ಶ ವಿದ್ಯಾಲಯದ 70 ವಿದ್ಯಾರ್ಥಿಗಳೂ ಉತ್ತೀರ್ಣ । ಪ್ರಿಯಾಮಣಿಗೆ 599, ಸಂಜನಾಗೆ 598

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ 70 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ನೂರಕ್ಕೆ ನೂರು ಫಲಿತಾಂಶ ದಾಖಲಾಗಿದೆ.ವಿದ್ಯಾರ್ಥಿನಿ ಪ್ರಿಯಾಮಣಿ 625ಕ್ಕೆ 599(95.84) ಅಂಕ ಪಡೆದು ಪ್ರಥಮ, ಸಂಜನಾ ಕೆ. 598(95.68), ಅಂಕ ಪಡೆದು ದ್ವಿತೀಯ, ಚಂದ್ರಲಾ 597(95.52) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ವಿಶೇಷವಾಗಿ ದ್ವಿತೀಯ ಭಾಷೆ ಕನ್ನಡದಲ್ಲಿ 22 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ.

ಎ+ ಗ್ರೇಡ್ 10 ವಿದ್ಯಾರ್ಥಿಗಳು, ಎ ಗ್ರೇಡ್ 18, ಬಿ+ ಗ್ರೇಡ್ 17, ಬಿ ಗ್ರೇಡ್ 13, ಸಿ+ ಗ್ರೇಡ್ 12 ವಿದ್ಯಾರ್ಥಿಗಳು ಪಡೆದಿದ್ದಾರೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ, ಮುಖ್ಯೋಪಾಧ್ಯಾಯ ರಾಮರಡ್ಡೆಪ್ಪ, ಶಿಕ್ಷಕವೃಂದಕ್ಕೆ, ಶಾಲಾಭಿವೃದ್ಧಿ ಅಧ್ಯಕ್ಷ ಶ್ರೀಕಾಂತ ಪೂಜಾರ ಹಾಗೂ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿವಿಧ ಶಾಲೆಗಳಿಗೆ ಉತ್ತಮ ಫಲಿತಾಂಶ:

ಸ್ಥಳೀಯ ಸರ್ಕಾರಿ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಗೆ ಶೇ. 77.61 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 67 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಟ್ರಿನಿಟಿ ಪ್ರೌಢಶಾಲೆಗೆ ಉತ್ತಮ ಫಲಿತಾಂಶ:

ಪಟ್ಟಣದ ಟ್ರಿನಿಟಿ ಪ್ರೌಢಶಾಲೆಗೆ ಉತ್ತಮ ಫಲಿತಾಂಶ ಬಂದಿದ್ದು, ಸಾಗರ ಆರೇರ 510(ಶೇ. 81.6) ಪ್ರಥಮ, ಕೃಷ್ಣ ಉಪ್ಪಾರ 477(ಶೇ.76.32) ದ್ವಿತೀಯ, ಕಳಕಪ್ಪ ದಿವಟರ 459 (ಶೇ.73.44) ತೃತೀಯ ಸ್ಥಾನ ಗಳಿಸಿದ್ದಾರೆ.ತಾಲೂಕಿನ ಕುದರಿಮೋತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಫಲಿತಾಂಶ ಶೇ. 83.58ರಷ್ಟಾಗಿದೆ. ವಿದ್ಯಾರ್ಥಿನಿ ಮಲ್ಲಿಕಾ ನೆಲಜೇರಿ ಶೇ. 88.16 ( ಪ್ರಥಮ), ಹನುಮೇಶ ಹನುಮನಟ್ಟಿ ಶೇ.87.04 (ದ್ವಿತೀಯ), ಮಂಜುಳಾ ಉಪ್ಪಾರ ಶೇ. 81.60 (ತೃತೀಯ) ಸ್ಥಾನ ಪಡೆದಿದ್ದಾರೆ.