11 ಪ್ರೌಢಶಾಲೆಗಳಿಗೆ ಶೇ. 100 ಫಲಿತಾಂಶ

| Published : May 10 2024, 01:30 AM IST

ಸಾರಾಂಶ

ಬಿಸಗೋಡು ಪ್ರೌಢಶಾಲೆಯ ಸಿಂಚನಾ ಹೆಗಡೆ ೬೨೧ ಅಂಕ ಗಳಿಸಿ, ತಾಲೂಕಿಗೆ ಮೊದಲಿಗಳಾಗಿದ್ದಾಳೆ.

ಯಲ್ಲಾಪುರ: ತಾಲೂಕಿನಲ್ಲಿ ೨೪ ಪ್ರೌಢಶಾಲೆಗಳ ಶೇ. ೯೪ರಷ್ಟು ಎಸ್ಎಸ್ಎಲ್‌ಸಿ ಫಲಿತಾಂಶ ಬಂದಿದ್ದು, ೧೧ ಪ್ರೌಢಶಾಲೆಗಳು ೧೦೦ಕ್ಕೆ ೧೦೦ ಫಲಿತಾಂಶ ಸಾಧಿಸಿವೆ. ತನ್ಮೂಲಕ ತಾಲೂಕಿನಲ್ಲಿ ಉತ್ತಮ ಶೈಕ್ಷಣಿಕ ಪ್ರಗತಿ ದೊರಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ತಿಳಿಸಿದ್ದಾರೆ.

ಸರ್ಕಾರಿ ಪ್ರೌಢಶಾಲೆಗಳಾದ ಉಮ್ಮಚಗಿ, ಹಂಸನಗದ್ದೆ, ನಂದೊಳ್ಳಿ, ಬಿಸಗೋಡು, ಹಿತ್ಲಳ್ಳಿ ಮತ್ತು ಮೊರಾರ್ಜಿ ವಸತಿ ಶಾಲೆ ಅಲ್ಲದೇ, ಪ್ರಗತಿ ವಿದ್ಯಾಲಯ ಭರತನಹಳ್ಳಿ, ವಿಶ್ವದರ್ಶನ ಕನ್ನಡ ಮಾಧ್ಯಮ ಇಡಗುಂದಿ, ಹೋಲಿ ರೋಜರಿ ಕನ್ನಡ ಮಾಧ್ಯಮ ಯಲ್ಲಾಪುರ, ವೈಟಿಎಸ್ಎಸ್ ಯಲ್ಲಾಪುರ, ಸ್ನೇಹಸಾಗರ ಆಂಗ್ಲಮಾಧ್ಯಮ ಇಡಗುಂದಿ ಇವು ೧೧ ಶಾಲೆಗಳು ೧೦೦ಕ್ಕೆ ೧೦೦ರಷ್ಟು ಫಲಿತಾಂಶ ಸಾಧಿಸಿವೆ.ಯಲ್ಲಾಪುರದ ವಿಶ್ವದರ್ಶನ ಆಂಗ್ಲಮಾಧ್ಯಮ ಶೇ. ೯೮.೪೮, ಕನ್ನಡ ಮಾಧ್ಯಮ ಶೇ. ೯೮.೨೫, ಮಂಚೀಕೇರಿ ರಾಜರಾಜೇಶ್ವರಿ ಕನ್ನಡ ಮಾಧ್ಯಮ ಶೇ. ೯೭.೫೬, ಸರ್ಕಾರಿ ಪ್ರೌಢಶಾಲೆ ಮಲವಳ್ಳಿ ಶೇ. ೯೭.೪೪, ಸರ್ಕಾರಿ ಪ್ರೌಢಶಾಲೆ ಗುಳ್ಳಾಪುರ ಶೇ. ೯೬, ಸರ್ವೋದಯ ವಜ್ರಳ್ಳಿ ಶೇ. ೯೪.೪೪, ರಾ.ರಾ. ಆಂಗ್ಲಮಾಧ್ಯಮ ಮಂಚೀಕೇರಿ ಶೇ. ೯೪.೪೪, ವೈಟಿಎಸ್ಎಸ್ ಕನ್ನಡ ಮಾಧ್ಯಮ ಶೇ. ೯೧.೧೮, ಸರ್ಕಾರಿ ಪ್ರೌಢಶಾಲೆ ಕಿರವತ್ತಿ ಶೇ. ೮೯.೩೮, ಮದರ್ ಥೆರೆಸಾ ಪ್ರೌಢಶಾಲೆ ಯಲ್ಲಾಪುರ ಶೇ. ೮೭.೮೮, ಸರ್ಕಾರಿ ಪ್ರೌಢಶಾಲೆ ಯಲ್ಲಾಪುರ ಶೇ. ೭೯.೩೫, ಸರ್ಕಾರಿ ಪ್ರೌಢಶಾಲೆ ಉರ್ದು ಕಿರವತ್ತಿ ಶೇ. ೭೬.೯೨, ಕಿರವತ್ತಿಯ ಲಿಟಲ್ ಪ್ಲವರ್ ಶೇ. ೬೬.೬೭ ಫಲಿತಾಂಶ ಗಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಬಿಸಗೋಡು ಪ್ರೌಢಶಾಲೆಯ ಸಿಂಚನಾ ಹೆಗಡೆ ೬೨೧ ಅಂಕ ಗಳಿಸಿ, ತಾಲೂಕಿಗೆ ಮೊದಲಿಗಳಾಗಿದ್ದಾಳೆ.ಸಿಂಚನಾ ಹೆಗಡೆಯವರನ್ನು ಮೇ.೯ ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಬಿಸಗೋಡಿನ ಜಡ್ಡಿಪಾಲ ಹೊಸ್ಮನೆಯ ಅವರ ಮನೆಗೆ ತೆರಳಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಿಂಚನಾ ಹೆಗಡೆಯ ಮಾತಾ- ಪಿತರಾದ ಮಹಾಬಲೇಶ್ವರ ಹೆಗಡೆ ಮತ್ತು ವಿಜಯಾ, ಮುಖ್ಯಾಧ್ಯಾಪಕ ಎಂ.ಆರ್. ನಾಯ್ಕ, ಶಿಕ್ಷಕರಾದ ವಿ.ಎಂ. ಭಟ್ಟ, ಸದಾನಂದ ದಬಗಾರ, ಶ್ರೀಧರ ಹೆಗಡೆ ಉಪಸ್ಥಿತರಿದ್ದರು.