ಸಾಧನೆ ಪ್ರಯತ್ನವಾದಿಗಳ ಸ್ವತ್ತು: ಪಟ್ಟದ್ದೇವರು

| Published : Apr 28 2024, 01:17 AM IST

ಸಾರಾಂಶ

ಹಣೆಬರಹ ನೆಚ್ಚಿಕೊಂಡರೆ ಸಾಧನೆ ಅಸಾಧ್ಯ. ಸಾಧನೆ ಎನ್ನುವುದು ಪ್ರಯತ್ನವಾದಿಗಳ ಸ್ವತ್ತು. ಯಾರೂ ಜೀವನದಲ್ಲಿ ಕಷ್ಟ ಪಡುತ್ತಾರೆ ಅಂತವರನ್ನು ಯಶಸ್ಸು ಬೆನ್ನತ್ತುತ್ತದೆ ಎಂದು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು. ಚನ್ನಬಸವೇಶ್ವರ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಭಾಲ್ಕಿ

ವಿದ್ಯಾರ್ಥಿಗಳು ಜೀವನದಲ್ಲಿ ಹಣೆಬರಹವನ್ನು ನೆಚ್ಚಿಕೊಂಡರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ನಿರಂತರ ಪ್ರಯತ್ನ, ಪರಿಶ್ರಮದಿಂದ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವಾಣಿಜ್ಯ ವಿಭಾಗದಲ್ಲಿ ರ್ಯಾಂ ಕ್ ಪಡೆದ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಧನೆ ಎನ್ನುವುದು ಪ್ರಯತ್ನವಾದಿಗಳ ಸ್ವತ್ತು. ಯಾರೂ ಜೀವನದಲ್ಲಿ ಕಷ್ಟ ಪಡುತ್ತಾರೆ ಅಂತವರನ್ನು ಯಶಸ್ಸು ಬೆನ್ನತ್ತುತ್ತದೆ ಎಂದರು.

ವಾಣಿಜ್ಯ ವಿಭಾಗದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿರುವುದು ಸಂತಸ ತರಿಸಿದೆ. ಮುಂದಿನ ವರ್ಷ ರಾಜ್ಯಕ್ಕೆ ಟಾಪರ್ ಸ್ಥಾನ ತರುವ ಪ್ರಯತ್ನವಾಗಬೇಕು. ಎಂದು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತ ಕೌಟಗೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದಲ್ಲಿ ಸಮಾಜ ಗೌರವ ನೀಡುತ್ತದೆ. ಶಿಕ್ಷಕರು ಮತ್ತು ಪಾಲಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.ಸಿಆರ್‌ಪಿ ನೀಲಕಂಠ ಮಾತನಾಡಿದರು.

ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ತಾಪಂ ಇಓ ಹಣಮಂತ ಕೌಟಗೆ, ಡಾ.ಆಶಾ ಮುದಾಳೆ, ಸುಧಾಕರ ಬಿರಾದಾರ, ಸ್ವಪ್ನಾ ಜೋಶಿ ಸೇರಿದಂತೆ ಹಲವರು ಇದ್ದರು.

ಈ ಸಂದರ್ಭದಲ್ಲಿ ಅಲ್ಲಮ್ಮಪ್ರಭು ಬಿ.ಇಡಿ ಪ್ರಾಚಾರ್ಯ ಡಾ.ಆಶಾ ಮುದಾಳೆ, ಬಿಎಸ್ಸಿ ಪ್ರಾಚಾರ್ಯ ಸುಧಾಕರ ಬಿರಾದಾರ, ಸಿಬಿಎಸ್ಸಿ ಪ್ರಾಚಾರ್ಯ ಎನ್.ರಾಜು ಸೇರಿದಂತೆ ಹಲವರು ಇದ್ದರು. ಭಾಗ್ಯಶ್ರೀ, ಭಾಗ್ಯವಂತಿ ವಚನ ಗಾಯನ ನಡೆಸಿ ಕೊಟ್ಟರು. ಅನ್ನಪೂರ್ಣ ಕನಶೆಟ್ಟೆ ಸಂಗಡಿಗರು ವಚನ ನೃತ್ಯ ನಡೆಸಿಕೊಟ್ಟರು. ಪ್ರಾಚಾರ್ಯ ಸ್ವಪ್ನಾ ಜೋಶಿ ಸ್ವಾಗತಿಸಿದರೆ ಮಧುಕರ ಗಾಂವಕರ್ ನಿರೂಪಿಸಿ. ಡಾ.ಅಕ್ಕನಾಗಮ್ಮ ಕರ್ಪೂರ ವಂದಿಸಿದರು.

ಜಿಲ್ಲೆಗೆ ಟಾಪರ್ ಪ್ರತಿಭಾ ಪುರಸ್ಕಾರ:

ವಾಣಿಜ್ಯ ವಿಭಾಗದಲ್ಲಿ 2023-24ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಟಾಪರ್ ಸ್ಥಾನ ಪಡೆದ ಪ್ರೇಮ ಪಾಂಡುರಂಗ, ಆನಂದ ಸಿದ್ರಾಮ, ಸೃಷ್ಟಿ ರಾಜಕುಮಾರ, ಶ್ವೇತಾ ನರೇಂದ್ರ, ನೀಲಾಂಬಿಕಾ ಬಸವರಾಜ, ಭುವನೇಶ್ವರಿ ಧನರಾಜ, ವೈಷ್ಣವಿ ಚಂದ್ರಕಾಂತ, ಯಲ್ಲಗೊಂಡ ವಿಜಯಕುಮಾರ ಮತ್ತು ಪ್ರೇಮ ರಮೇಶ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಪೂಜ್ಯರು ಗೌರವಿಸಿದರು.