ವಿಜಯ್‌ ನಟನೆಯ ವಿಕೆ 29ನಲ್ಲಿ ರಾಜ್‌ ಬಿ ಶೆಟ್ಟಿ

| Published : Apr 26 2024, 12:52 AM IST / Updated: Apr 26 2024, 05:30 AM IST

ಸಾರಾಂಶ

ದುನಿಯಾ ವಿಜಯ್‌ ನಟನೆಯ ವಿಕೆ 29 ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ.

  ಸಿನಿವಾರ್ತೆ: ವಿಜಯ್‌ ಕುಮಾರ್‌ ನಟನೆಯ ‘ವಿಕೆ 29’ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಜಡೇಶ್ ಹಂಪಿ ನಿರ್ದೇಶನದ ಈ ಸಿನಿಮಾ ಶಿವರಾಮ ಕಾರಂತರ ‘ಚೋಮನ ದುಡಿ’ಯಿಂದ ಪ್ರೇರಣೆ ಪಡೆದಿದೆ.

 ‘ರಾಜ್‌ ಶೆಟ್ಟಿ ಅವರಿಗೆ ಈ ಪಾತ್ರ ಚಿತ್ರಣ ಬಹಳ ಇಷ್ಟವಾಗಿದೆ. ಆದರೆ ಸದ್ಯ ಅವರು ಮಲಯಾಳಂ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಕಾರಣ ಉಳಿದ ಮಾತುಕತೆಗಳು ನಡೆದಿಲ್ಲ. ಸದ್ಯದಲ್ಲೇ ಅವರ ಪಾತ್ರದ ಬಗ್ಗೆ ಇನ್ನಷ್ಟು ವಿವರ ನೀಡುವೆ’ ಎಂದಿದ್ದಾರೆ ಜಡೇಶ್ ಹಂಪಿ.‘ಮಂಗಳೂರು ಮೂಲದ ನಟ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ. ಅವರ ಪಾತ್ರಕ್ಕೆ ಒಂದು ಪ್ರಬಲ ಸಿದ್ಧಾಂತವಿದೆ. 

ಬಹಳ ಸ್ಟ್ರಾಂಗ್‌ ಆಗಿರುವ ವಿಭಿನ್ನ, ವಿಲಕ್ಷಣ ವ್ಯಕ್ತಿತ್ವ ಸಿನಿಮಾದಲ್ಲಿ ತನ್ನ ಅನನ್ಯತೆಯ ಕಾರಣಕ್ಕೇ ಗುರುತಿಸಿಕೊಳ್ಳಲಿದೆ. ಇದು ವಿಲನ್‌ ಪಾತ್ರವಲ್ಲ, ತನ್ನದೇ ಪ್ರಬಲ ಐಡೆಂಟಿಟಿ ಇರುವ ಪಾತ್ರ’ ಎಂದೂ ಜಡೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಕೋಲಾರ ಹಾಗೂ ಗುಡಿಬಂಡೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ರಚಿತಾ ರಾಮ್ ನಾಯಕಿ. ವಿಜಯ್‌ ಕುಮಾರ್‌ ಮಗಳು ರಿತನ್ಯಾ ಹಾಗೂ ಶಿಶಿರ್‌ ಮುಖ್ಯಪಾತ್ರಗಳಲ್ಲಿದ್ದಾರೆ.