ಉಗ್ರರನ್ನು ಅವರ ಮನೆಗೆ ಹೋಗಿ ಕೊಲ್ತೇವೆ ಎಂದ ಮೋದಿಗೆ ಅಮೆರಿಕದ ಶಾಂತಿ ಪಾಠ

| Published : Apr 18 2024, 02:20 AM IST / Updated: Apr 18 2024, 04:09 AM IST

Narendra Modi rally in Assam
ಉಗ್ರರನ್ನು ಅವರ ಮನೆಗೆ ಹೋಗಿ ಕೊಲ್ತೇವೆ ಎಂದ ಮೋದಿಗೆ ಅಮೆರಿಕದ ಶಾಂತಿ ಪಾಠ
Share this Article
  • FB
  • TW
  • Linkdin
  • Email

ಸಾರಾಂಶ

‘ಉಗ್ರರನ್ನು ಅವರ ಮನೆಗೇ ಹೋಗಿ ಹೊಡೆದು ಕೊಲ್ಲುತ್ತೇವೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಮೆರಿಕ, ‘ಭಾರತ-ಪಾಕ್‌ ಶಾಂತಿ ಮಾತುಕತೆ ಅಗತ್ಯ ಎಂದು ನಾವು ಬಯಸುತ್ತೇವೆ’ ಎಂದಿದೆ.

ವಾಷಿಂಗ್ಟನ್‌: ‘ಉಗ್ರರನ್ನು ಅವರ ಮನೆಗೇ ಹೋಗಿ ಹೊಡೆದು ಕೊಲ್ಲುತ್ತೇವೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಮೆರಿಕ, ‘ಭಾರತ-ಪಾಕ್‌ ಶಾಂತಿ ಮಾತುಕತೆ ಅಗತ್ಯ ಎಂದು ನಾವು ಬಯಸುತ್ತೇವೆ’ ಎಂದಿದೆ.

ಬುಧವಾರ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಮೋದಿ, ರಾಜನಾಥ್‌ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ಬಯಸಿದಾಗ ಉತ್ತರಿಸಿದ ಅಮೆರಿಕ ವಿದೇಶಾಂಗ ವಕ್ತಾರ ಮ್ಯಾಥ್ಯೂ ಮಿಲ್ಲರ್‌, ‘ಎರಡೂ ದೇಶಗಳ ನಡುವಿನ ವ್ಯವಹಾರದಲ್ಲಿ ನಾವು ಮೂಗು ತೂರಿಸಲ್ಲ. ಆದರೆ ಭಾರತ-ಪಾಕ್‌ ಒಂದೆಡೆ ಕುಳಿತು ಶಾಂತಿ ಮಾತುಕತೆ ನಡೆಸಬೇಕು ಎಂಬುದು ನಮ್ ಬಯಕೆ’ ಎಂದರು.

ಇನ್ನು ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್‌ ಪನ್ನು ಹತ್ಯೆಗೆ ಭಾರತ ಸಂಚು ರೂಪಿಸಿದ್ದ ಅನುಮಾನವಿದೆ. ಹೀಗಿದ್ದಾಗ ಭಾರತದ ಮೇಲೆ ಏಕೆ ನಿರ್ಬಂಧ ಹೇರಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮಿಲ್ಲರ್‌, ‘ಇಂಥ ವಿಷಯಗಳನ್ನು ನಾವು ಮುಕ್ತವಾಗಿ ಚರ್ಚಿಸಲ್ಲ’ ಎಂದರು.